ಮಕ್ಕಳಿಗಾಗಿ ಜಲಸಾಹಸ ಕ್ರೀಡಾ ಶಿಬಿರ: ಶಾಸಕ ಗೂಳಿಹಟ್ಟಿ ಶೇಖರ್ ಭಾಗಿ - MLA Goolihatti Shekhar is involved

🎬 Watch Now: Feature Video

thumbnail

By

Published : Oct 2, 2020, 6:04 PM IST

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿರುವ ವಾಣಿ ವಿಲಾಸ ಸಾಗರದ ಹಿನ್ನೀರಿನಲ್ಲಿ ಮಕ್ಕಳಿಗಾಗಿ ಜಲಸಾಹಸ ಕ್ರೀಡಾ ಶಿಬಿರ ಆರಂಭವಾಗಿದೆ. ಈ ಶಿಬಿರದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಭಾಗಿಯಾಗಿ, 15 ನಿಮಿಷಗಳ ಕಾಲ​ ನೀರಿನ‌ಲ್ಲೇ ಜೆಟ್ ಸ್ಕೀ ರೈಡ್ ಮಾಡಿದ್ರು. ಒಂದು ಕಾಲದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವರಾಗಿದ್ದಾಗ, ವಿವಿ ಸಾಗರದ ಹಿನ್ನೀರಿನಲ್ಲಿ ಈ ಜಲಕ್ರೀಡೆಗಳ ಪರಿಕರಗಳನ್ನು ತರಿಸಿ ಜಲಸಾಹಸ ಕ್ರೀಡೆಗಳ ಶಿಬಿರವನ್ನು ಆರಂಭಿಸಿದ್ದರು. ಅದನ್ನು ಕೆಲ ಕಾರಣಾಂತರಗಳಿಂದ ನಿಲ್ಲಿಸಲಾಗಿತ್ತು. ಆದ್ರೆ ಇದೀಗ ಮತ್ತೆ ವಿವಿ ಸಾಗರದ ಹಿನ್ನೀರಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ಈ ಶಿಬಿರವನ್ನು ಆರಂಭಿಸಲಾಗಿದ್ದು, ಸಾಕಷ್ಟು ಮಕ್ಕಳು ಭಾಗಿಯಾಗಿದ್ದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.