ಕಲಬುರಗಿ: ಮತಗಟ್ಟೆ ಎದುರು ಕುಸಿದು ಬಿದ್ದ ಗರ್ಭಿಣಿ - kalburgi latest news
🎬 Watch Now: Feature Video
ಕಲಬುರಗಿ: ಇಂದು ಗ್ರಾಮ ಪಂಚಾಯತ್ನ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಮತ ಚಲಾಯಿಸಲು ಬಂದು ಮತಗಟ್ಟೆ ಮುಂದೆ ಗರ್ಭಿಣಿಯೋರ್ವರು ಕುಸಿದು ಬಿದ್ದ ಘಟನೆ ಜೇವರ್ಗಿ ತಾಲೂಕಿನ ಕೋಳಕೂರ ಗ್ರಾಮದ ಮತಗಟ್ಟೆ 22ರಲ್ಲಿ ನಡೆದಿದೆ. ಗರ್ಭಿಣಿ ಶಿವಮ್ಮ ಸುಮಾರು ಹೊತ್ತು ಕ್ಯೂನಲ್ಲಿ ನಿಂತ ವೇಳೆ ತಲೆ ಸುತ್ತಿನಿಂದ ಕುಸಿದು ಬಿದ್ದಿದ್ದಾರೆ. ಬಳಿಕ ಚುನಾವಣಾ ಸಿಬ್ಬಂದಿ ಆಗಮಿಸಿ ಆ ಕೂಡಲೇ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.