ಕುರಿಗಳ ಜೊತೆ ಬಂದು ಮಾದಪ್ಪನಿಗೆ ಹರಕೆ ತೀರಿಸಿದ ರೈತ: ವೈರಲ್ ವಿಡಿಯೋ - etv bharat kannada
🎬 Watch Now: Feature Video
Published : Dec 3, 2023, 5:16 PM IST
ಚಾಮರಾಜನಗರ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರತಿ ನಿತ್ಯ ನೂರಾರು ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥ ಈಡೇರಿಸಿದ ದೇವರಿಗೆ ಹರಕೆ ತೀರಿಸುತ್ತಿರುತ್ತಾರೆ. ಅದರಂತೆ, ರೈತನೋರ್ವ ಕುರಿಗಳ ಜೊತೆ ಬಂದು ಮಾದಪ್ಪನಿಗೆ ಹರಕೆ ತೀರಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಹೌದು, ಮಂಡ್ಯ ಮೂಲದ ರೈತ ಮಾದೇಗೌಡ ಎಂಬುವರು ತಮ್ಮ 15ಕ್ಕೂ ಹೆಚ್ಚು ಕುರಿಗಳಿಗೆ ಸ್ನಾನ ಮಾಡಿಸಿ ವಾಹನದಲ್ಲಿ ಮಹದೇಶ್ವರ ಬೆಟ್ಟಕ್ಕೆ ಕರೆತಂದು, ಮಲೆ ಮಾದೇಶ್ವರ ಬೆಟ್ಟದ ರಾಜಗೋಪುರದ ಮುಂಭಾಗ ಭಕ್ತರ ಜೊತೆ ದೇವಾಲಯದ ಸುತ್ತಲೂ ಮೂರು ಬಾರಿ ಪ್ರದಕ್ಷಿಣೆ ಹಾಕುವ ಮೂಲಕ ದೇವರಿಗೆ ಹರಕೆ ತೀರಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಸುವಂತೆ ಮಾದೇಶ್ವರನಲ್ಲಿ ಬೇಡಿಕೊಂಡು ಬರುತ್ತಾರೆ. ತಮ್ಮ ಇಷ್ಟಾರ್ಥ ಫಲಿಸಿದ ನಂತರ ಬೆಟ್ಟಕ್ಕೆ ಆಗಮಿಸಿ ಪೂಜೆ ಸಲ್ಲಿಸುವ ಪದ್ಧತಿ ಇದೆ. ಅದರಂತೆ, ಇಂದು ಮಂಡ್ಯ ಜಿಲ್ಲೆಯ ರೈತ ಮಾದೇಗೌಡ ತನ್ನ 15 ಕ್ಕೂ ಕುರಿಗಳನ್ನು ಕರೆದುಕೊಂಡು ಬಂದು ಮಲೆ ಮಹದೇಶ್ವರನಿಗೆ 3 ಪ್ರದಕ್ಷಿಣೆ ಹಾಕಿಸಿ ಹರಕೆ ತೀರಿಸಿದ್ದಾರೆ. ಇನ್ನು, ಕುರಿಗಳ ಜೊತೆ ಮಾದಪ್ಪನಿಗೆ ಪ್ರದಕ್ಷಿಣೆ ಹಾಕುವುದನ್ನು ಕಂಡ ಭಕ್ತರು ಮಾದೇಶ್ವರನಿಗೆ ಘೋಷಣೆ ಕೂಗಿ ಭಕ್ತಿ ಮೆರೆದಿದ್ದಾರೆ.
ಇದನ್ನೂ ಓದಿ: ಶ್ರೀ ಕ್ಷೇತ್ರ ಹೊಂಬುಜದ ಪದ್ಮಾವತಿ ದೇವಿಗೆ ಚಿನ್ನದ ಸೀರೆ ಅರ್ಪಿಸಿದ ಭಕ್ತರು: ವಿಡಿಯೋ