Watch.. ಮುಂಗುಸಿಯಿಂದ ತಪ್ಪಿಸಿಕೊಂಡು ಮಗುವಿನ ತೊಟ್ಟಿಲಿಗೆ ನುಗ್ಗಿದ ಹಾವು: ಮೈ ಜುಂ ಎನಿಸುವ ವಿಡಿಯೋ - ಮಹಾರಾಷ್ಟ್ರ
🎬 Watch Now: Feature Video

ನಾಸಿಕ್(ಮಹಾರಾಷ್ಟ್ರ): ಕೆಲವೊಮ್ಮೆ ಕೆಲವು ವಿಚಿತ್ರ ಘಟನೆಗಳು ನಮ್ಮ ಕಣ್ಣ ಮುಂದೆ ನಡೆಯುತ್ತವೆ. ಆದರೆ, ತಕ್ಷಣಕ್ಕೆ ಏನು ಮಾಡಬೇಕು ಎಂದು ಯೋಚಿಸುವ ಮೊದಲೇ ಘಟನೆಗಳು ನಡೆದು ಹೋಗಿರುತ್ತವೆ. ಅದೇ ರೀತಿ, ಹಾವಿನ ವಿಷಯದಲ್ಲಿ ಸಹ ಎಲ್ಲಿ ಅಡಗಿ ಕುಳಿತಿರುತ್ತದೆ ಮತ್ತು ಯಾವಾಗ ಅಟ್ಟಿಸಿಕೊಂಡು ಬರುತ್ತದೆ ಎಂದು ಹೇಳಲು ಆಗಲ್ಲ. ಇಂತಹುದ್ದೇ ಒಂದು ಘಟನೆ ನಾಸಿಕ್ನಲ್ಲಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಹಾನಿ ಸಂಭವಿಸಿಲ್ಲ. ಮುಂಗುಸಿಯಿಂದ ತಪ್ಪಿಸಿಕೊಂಡ ಹಾವು ಮಗುವಿನ ತೊಟ್ಟಿಲಿಗೆ ನುಗ್ಗಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.
ವಿಡಿಯೋದಲ್ಲಿ ಮುಂಗುಸಿಯೊಂದು ಹೊಲದ ಪಕ್ಕದ ಮನೆಯೊಂದರ ಹೊರಗೆ ಹಾವನ್ನು ಅಟ್ಟಿಸಿಕೊಂಡು ಬಂದಿದೆ. ಈ ಮುಂಗುಸಿಗೆ ಹೆದರಿ ಸುಮಾರು ಆರರಿಂದ ಏಳು ಅಡಿ ಉದ್ದದ ಹಾವು ಮನೆಯ ಹೊರಗಿರುವ ಕಟ್ಟಿದ್ದ ಮಗುವಿನ ತೊಟ್ಟಿಲನ್ನು ಏರಿದೆ. ವಿಡಿಯೋ ನೋಡಿ ಹಲವರು ಬೆಚ್ಚಿ ಬಿದ್ದಿದ್ದಾರೆ. ಈ ವಿಡಿಯೋದಲ್ಲಿ ದ್ವಿಚಕ್ರ ವಾಹನವೊಂದು ಕಾಣಿಸಿಕೊಂಡಿದೆ. ಅದರ ನಂಬರ್ MH 15. ಇದು ದ್ವಿಚಕ್ರ ವಾಹನ ನಾಸಿಕ್ ಪಾಸಿಂಗ್ಗೆ ಸೇರಿದ್ದು. ಇದರಿಂದ ಈ ವಿಡಿಯೋ ನಾಸಿಕ್ ಜಿಲ್ಲೆಯದ್ದು ಎಂದು ತಿಳಿದು ಬಂದಿದೆ.
ಸದ್ಯ ಬಿಸಿಲಿನ ತಾಪ ಹೆಚ್ಚಾಗಿದ್ದು, ಬಿಲಗಳಿಂದ ಹಾವುಗಳು ಹೊರಬರುತ್ತಿವೆ. ತೋಟದ ಮನೆ ಅಥವಾ ಹೊಲಗಳಲ್ಲಿ ಕೆಲಸ ಮಾಡುವಾಗ ಹಾವು ವಿಷಕಾರಿ ಹಾವುಗಳು ಕಚ್ಚಿ ಅನೇಕ ಸಾವುಗಳು ಸಂಭವಿಸಿವೆ. ಆದ್ದರಿಂದ ನಾಗರಿಕರು ಜಾಗೃತರಾಗಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹಾವು ಕಡಿತದಿಂದ ಪವಾಡ ರೀತಿಯಲ್ಲಿ ಪಾರಾದ ಬಾಲಕಿ!: ವಿಡಿಯೋ ನೋಡಿ