ಸುಡಾನ್‌ನಿಂದ 246 ಭಾರತೀಯರನ್ನು ಕರೆತಂದ ಎರಡನೇ ವಿಮಾನ.. - prime minister narendra modhi
🎬 Watch Now: Feature Video
ಮುಂಬೈ(ಮಹಾರಾಷ್ಟ್ರ): ಯುದ್ಧ ಪೀಡಿತ ಸುಡಾನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಇಂದು ಸುಡಾನ್‌ನಿಂದ 246 ಭಾರತೀಯ ಸ್ಥಳಾಂತರಿಸುವವರನ್ನು ಹೊತ್ತ ಎರಡನೇ ವಿಮಾನವು ಮುಂಬೈಗೆ ಬಂದಿಳಿದಿದೆ. ಈ ವೇಳೆ ಭಾರತೀಯ ವಾಯುಪಡೆಯ ಫ್ಲೈಟ್ ಲೆಫ್ಟಿನೆಂಟ್ ಹರ್ ರಾಜ್ ಕೌರ್ ಬೋಪರಾಯ್ ಅವರು ಜೆಡ್ಡಾದಲ್ಲಿ ವಿಮಾನವನ್ನು ಹತ್ತಲು ಮಹಿಳೆಯೊಬ್ಬರಿಗೆ ಸಹಾಯ ಮಾಡಿದ್ದಾರೆ. ಒಂದೇ ಬಾರಿಗೆ 70 ಟನ್‌ಗಳಷ್ಟು ಭಾರವನ್ನು ಹೊತ್ತೊಯ್ಯಬಲ್ಲ C17 ವಿಮಾನದ ಮೂಲಕ ಭಾರತೀಯರನ್ನು ಕರೆತರಲಾಯಿತು.
'ನಾವು ನಮ್ಮ ಮನೆಗೆ ಮರಳಿದ್ದರಿಂದ ನಮಗೆ ಸಂತೋಷವಾಗಿದೆ. ರಕ್ಷಣಾ ಕಾರ್ಯಾಚರಣೆಯು ತ್ವರಿತ ಗತಿಯಲ್ಲಿ ನಡೆಯುತ್ತಿದೆ. ನಾವು (ಸರ್ಕಾರದೊಂದಿಗೆ) ತೃಪ್ತಿ ಹೊಂದಿದ್ದೇವೆ' ಎಂದು ಸುಡಾನ್‌ನಿಂದ ಹಿಂದಿರುಗಿದ ಭಾರತೀಯ ಅವತಾರ್ ಸಿಂಗ್ ಹೇಳಿದ್ದಾರೆ.
'ಭಾರತದ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು. ನಾವು ನಮ್ಮ ದೇಶಕ್ಕೆ ಮರಳಿದ್ದಕ್ಕೆ ನಮಗೆ ಸಂತೋಷವಾಗಿದೆ' ಎಂದು ಸುಡಾನ್‌ನಿಂದ ಹಿಂದಿರುಗಿದ ಭಾರತೀಯ ಪ್ರಜೆ ನಿಶಾ ಮೆಹ್ತಾ ಹೇಳಿದ್ದಾರೆ.
ಇದನ್ನೂ ಓದಿ : ಆಪರೇಷನ್ ಕಾವೇರಿ: ಸುಡಾನ್‌ನಿಂದ 534 ಜನರ ಸ್ಥಳಾಂತರ: ಜೆಡ್ಡಾಕ್ಕೆ ಬಂದಿಳಿದ 3 ತಂಡಗಳು, ಶೀಘ್ರ ಭಾರತಕ್ಕೆ ಪ್ರಯಾಣ