ಚಿಕ್ಕೋಡಿ: ಚಾಲಕನ ನಿರ್ಲಕ್ಷ್ಯದಿಂದ ಹಳ್ಳದಲ್ಲಿ ಸಿಲುಕಿದ ಶಾಲಾ ಬಸ್​, ತಪ್ಪಿದ ಅನಾಹುತ - ಧಾರಾಕಾರ ಮಳೆ

🎬 Watch Now: Feature Video

thumbnail

By ETV Bharat Karnataka Team

Published : Sep 27, 2023, 1:27 PM IST

ಚಿಕ್ಕೋಡಿ (ಬೆಳಗಾವಿ): ಹುಕ್ಕೇರಿ ತಾಲ್ಲೂಕಿನ ಎಲಿಮುನ್ನೋಳ್ಳಿ ಗ್ರಾಮದಲ್ಲಿ ಮಂಗಳವಾರ ಬೀರೇಶ್ವರ ಶಾಲೆಯ ಬಸ್‌ವೊಂದು ಚಾಲಕನ ನಿರ್ಲಕ್ಷ್ಯದಿಂದ ಹಳ್ಳದಲ್ಲಿ ಸಿಲುಕಿತ್ತು. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಅನಾಹುತ ತಪ್ಪಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಎಲಿಮುನ್ನೋಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿದಿದೆ. ವರುಣನ ಅಬ್ಬರಕ್ಕೆ ಹಳ್ಳದ ರಸ್ತೆಯ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿತ್ತು. ಈ ವೇಳೆ ರಸ್ತೆ ಹಾಗೂ ಹಳ್ಳ ಯಾವುದು ಎಂಬುದರ ಗೊಂದಲಕ್ಕೆ ಸಿಲುಕಿದ ಬಸ್‌ ಚಾಲಕ, ಹಳ್ಳ ದಾಟಿಸಲು ಮುಂದಾಗಿದ್ದಾನೆ. ಬಸ್ ಚಲಾಯಿಸಿಕೊಂಡು ಬಂದು ಹಳ್ಳದ ಮಧ್ಯದಲ್ಲೇ ನಿಲ್ಲಿಸಿದ್ದಾನೆ. 

ಪರಿಣಾಮ, ಮಕ್ಕಳ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಬಳಿಕ ಬಸ್ಸಿನಲ್ಲಿ ಸಿಲುಕಿದ ಹತ್ತಕ್ಕೂ ಹೆಚ್ಚು ಮಕ್ಕಳನ್ನು ಪೋಷಕರು ರಕ್ಷಣೆ ಮಾಡಿದರು. ನೀರಿನ ಹರಿವು ಕಡಿಮೆಯಾದ ಮೇಲೆ ಶಾಲೆ ಬಸ್ ಅ​ನ್ನು ಹೊರತೆಗೆಲಾಯಿತು. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಚಾಲಕನ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಪೋಷಕರು ಶಾಲೆಯ ಆಡಳಿತ ಮಂಡಳಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ನಿರಂತರವಾಗಿ ಸುರಿದ ಮಳೆ: ರೈತರ ಮೊಗದಲ್ಲಿ‌ ಮಂದಹಾಸ.. ನಗರದಲ್ಲಿ ಅವಾಂತರ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.