ETV Bharat / health

ಚಳಿಗಾಲದಲ್ಲಿ ಡ್ಯಾಂಡ್ರಫ್ ಸಮಸ್ಯೆಯೇ? ತಜ್ಞರು ಸೂಚಿಸುವ ಈ ಹೇರ್ ಪ್ಯಾಕ್​ ಟ್ರೈ ಮಾಡಿ - HAIR PACKS TO REDUCE DANDRUFF

Natural Hair Packs To Reduce Dandruff: ಚಳಿಗಾಲದಲ್ಲಿ ತಲೆಹೊಟ್ಟು ಸಮಸ್ಯೆ ವಿಪರೀತವಾಗಿದೆಯೇ? ಹಾಗಾದ್ರೆ, ತಜ್ಞರು ತಿಳಿಸಿದ ಮುನ್ನೆಚ್ಚರಿಕೆಗಳನ್ನು ಪಾಲಿಸಿ.

HAIR PACKS FOR DANDRUFF  HOW TO REDUCE DANDRUFF  HOW TO TREAT DANDRUFF PROBLEM  DANDRUFF REDUCING HAIR PACKS
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Lifestyle Team

Published : Dec 27, 2024, 4:39 PM IST

Natural Hair Packs To Reduce Dandruff: ಚಳಿಗಾಲದಲ್ಲಿ ತಲೆಹೊಟ್ಟು ಸಮಸ್ಯೆ ಸಾಮಾನ್ಯ. ಮಾಲಿನ್ಯ, ಆಹಾರ ಸೇವನೆ, ಹಾರ್ಮೋನ್ ಮಟ್ಟದ ಏರುಪೇರು, ಕೂದಲು ಹಾಗೂ ಕಿರುಚೀಲಗಳನ್ನು ಸರಿಯಾಗಿ ಸ್ವಚ್ಛಗೊಳಿಸದೇ ಇರುವುದು ತಲೆಹೊಟ್ಟು ಸಮಸ್ಯೆಗೆ ಕಾರಣವಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚುತ್ತದೆ ಎಂದು ತಿಳಿಸುತ್ತಾರೆ ತಜ್ಞರು. ಇದರ ಪರಿಣಾಮ ಕೂದಲುಗಳು ನಿರ್ಜೀವವಾಗುತ್ತವೆ ಮತ್ತು ಉದುರುತ್ತವೆ. ಆದರೆ ಈ ಸಮಸ್ಯೆಯನ್ನು ಹೋಗಲಾಡಿಸಲು ತಜ್ಞರು ಮನೆ ಮದ್ದನ್ನು ಸೂಚಿಸಿದ್ದಾರೆ.

ದಾಸವಾಳ: ದಾಸವಾಳದ ಎಲೆಗಳು ಮತ್ತು ಹೂವುಗಳ ಗುಣಲಕ್ಷಣಗಳು ಕೂದಲಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ವಿಶೇಷವಾಗಿ, ತಲೆಹೊಟ್ಟು ಕಡಿಮೆ ಮಾಡುತ್ತದೆ.

  • ನಾಲ್ಕು ಚಮಚ ಗೋರಂಟಿ ಪುಡಿಯಲ್ಲಿ ಸ್ವಲ್ಪ ದಾಸವಾಳದ ಎಲೆ ಮತ್ತು ಹೂವಿನ ಪುಡಿ ಸೇರಿಸಿ.
  • ಸ್ವಲ್ಪ ಆಮ್ಲಾ ಪುಡಿ ಮತ್ತು ಮೆಂತ್ಯ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
  • ಈಗ ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪ ಮೊಸರು ಸೇರಿಸಿ ಮತ್ತು ನಯವಾದ ಪೇಸ್ಟ್ ಮಾಡಿಕೊಳ್ಳಿ.
  • ಮಿಶ್ರಣವನ್ನು ಕೂದಲ ಬುಡದಿಂದ ತುದಿಯವರೆಗೆ ಚೆನ್ನಾಗಿ ಲೇಪಿಸಿ.
  • ನಂತರ ಕಡಿಮೆ ಸಾಂದ್ರತೆಯಿರುವ ಶಾಂಪೂ ಬಳಸಿ ಸ್ನಾನ ಮಾಡಿದರೆ ತಲೆಹೊಟ್ಟು ಸಮಸ್ಯೆ ನಿವಾರಣೆ.
  • ಈ ಹೇರ್ ಪ್ಯಾಕ್ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಕೂದಲನ್ನು ಬಲವಾಗಿ ಬೆಳೆಯಲು ಸಹಾಯ ಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ಮೆಂತ್ಯ: ಮೆಂತ್ಯವು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಷ್ಟೇ ಏಕೆ, ಕೆಲವು ಹೇರ್ ಪ್ಯಾಕ್​ಗಳಲ್ಲೂ ಇದನ್ನು ಬಳಕೆ ಮಾಡಲಾಗುತ್ತದೆ.

  • ನಾಲ್ಕು ಚಮಚ ಗೋರಂಟಿ ಪುಡಿ, ಎರಡು ಚಮಚ ನಿಂಬೆ ರಸ, ಎರಡು ಚಮಚ ಮೊಸರು, ತಲಾ ಒಂದು ಚಮಚ ಆಲಿವ್ ಎಣ್ಣೆ, ವಿನೆಗರ್, ಮೆಂತ್ಯ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ರಾತ್ರಿ ನೆನೆಸಿಡಿ.
  • ಮರುದಿನ ಬೆಳಿಗ್ಗೆ, ಈ ಮಿಶ್ರಣವನ್ನು ಕೂದಲಿನ ಬೇರುಗಳಿಂದ ತುದಿಗಳಿಗೆ ಅನ್ವಯಿಸಿ ಮತ್ತು ಎರಡರಿಂದ ಮೂರು ಗಂಟೆಗಳ ಕಾಲ ಒಣಗಲು ಬಿಡಿ
  • ಕಡಿಮೆ ಸಾಂದ್ರತೆಯ ಶಾಂಪೂ ಬಳಸಿ ಸ್ನಾನ ಮಾಡಿ.
  • ಅಲ್ಲದೆ ಮೆಂತ್ಯ ಸೊಪ್ಪಿನ ಸಾರವನ್ನು ಕೂದಲಿನ ಬುಡಕ್ಕೆ ಹಚ್ಚಿ ಸ್ನಾನ ಮಾಡಿದರೆ ತಲೆಹೊಟ್ಟು ಸಮಸ್ಯೆ ಕಡಿಮೆಯಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಈ ಕುರಿತ ಲೇಖನವನ್ನು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟಿಸಲಾಗಿದೆ (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).

ಮೊಸರು & ನಿಂಬೆ ರಸ: ಮೊಸರು ಮತ್ತು ನಿಂಬೆ ರಸವು ತಲೆಹೊಟ್ಟು ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

  • ಎರಡು ಚಮಚ ನಿಂಬೆ ರಸದೊಂದಿಗೆ ನಾಲ್ಕು ಚಮಚ ಗೋರಂಟಿ ಪುಡಿ ಮಿಶ್ರಣ ಮಾಡಿ. ಸ್ವಲ್ಪ ಮೊಸರು ಸೇರಿಸಿ ಮತ್ತು ಪೇಸ್ಟ್ ಆಗುವವರೆಗೆ ಮಿಶ್ರಣ ಮಾಡಿ.
  • ಈ ಪೇಸ್ಟ್ ಅನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ ಹಾಗೂ ಅರ್ಧ ಗಂಟೆಯವರೆಗೆ ಇರಿಸಿ.
  • ಕಡಿಮೆ ಸಾಂದ್ರತೆಯಿರುವ ಶಾಂಪೂವಿನಿಂದ ತಲೆ ತೊಳೆದರೆ ತಲೆಹೊಟ್ಟು ಕಡಿಮೆಯಾಗುತ್ತದೆ.
  • ಪ್ರತಿ ಎರಡು ವಾರಗಳಿಗೊಮ್ಮೆ ಈ ಸಲಹೆಯನ್ನು ಅನುಸರಿಸಿ ಎಂದು ತಜ್ಞರು ಸಲಹೆ ನೀಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೀಡಿರುವ ವೆಬ್​ಸೈಟ್​ಗಳನ್ನು ವೀಕ್ಷಿಸಿ:

ಓದುಗರಿಗೆ ವಿಶೇಷ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.