ETV Bharat / bharat

2025ರಲ್ಲಿ ಸಂಭವಿಸಲಿವೆ 4 ಗ್ರಹಣ: ಭಾರತದಲ್ಲಿ ಕಾಣುವುದೆಷ್ಟು? - ECLIPSES IN 2025

ಈ ವರ್ಷ ಒಟ್ಟಾರೆ 4 ಗ್ರಹಣಗಳು ಸಂಭವಿಸಲಿವೆ.

ಗ್ರಹಣ
2025ರಲ್ಲಿ ಸಂಭವಿಸಲಿವೆ ನಾಲ್ಕು ಗ್ರಹಣ (IANS)
author img

By PTI

Published : 17 hours ago

ಇಂದೋರ್(ಮಧ್ಯ ಪ್ರದೇಶ): 2025ರಲ್ಲಿ ಎರಡು ಸೂರ್ಯ ಮತ್ತು ಎರಡು ಚಂದ್ರ ಗ್ರಹಣಗಳು ಸಂಭವಿಸಲಿದ್ದು, ಈ ಪೈಕಿ ಒಂದು ಮಾತ್ರ ಭಾರತದಲ್ಲಿ ಗೋಚರಿಸಲಿದೆ ಎಂದು ಉಜ್ಜಯಿನಿ ಮೂಲದ ಜೀವಾಜಿ ವೀಕ್ಷಣಾಲಯದ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ವೀಕ್ಷಣಾಲಯದ ಅಧೀಕ್ಷಕ ಡಾ.ರಾಜೇಂದ್ರ ಪ್ರಕಾಶ್ ಗುಪ್ತ್, "ಹೊಸ ವರ್ಷದ ಗ್ರಹಣಗಳ ಸರಣಿಯು ಮಾರ್ಚ್ 14 ರಂದು ಸಂಪೂರ್ಣ ಚಂದ್ರ ಗ್ರಹಣದೊಂದಿಗೆ ಪ್ರಾರಂಭವಾಗಲಿದೆ. ಈ ಖಗೋಳ ಘಟನೆಯು ದೇಶದಲ್ಲಿ ಹಗಲಿನಲ್ಲಿ ಸಂಭವಿಸುವುದರಿಂದ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಅಮೆರಿಕ, ಪಶ್ಚಿಮ ಯುರೋಪ್, ಪಶ್ಚಿಮ ಆಫ್ರಿಕಾ ಮತ್ತು ಉತ್ತರ ಮತ್ತು ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿ ಈ ಚಂದ್ರ ಗ್ರಹಣ ಗೋಚರಿಸಲಿದೆ" ಎಂದು ಹೇಳಿದರು.

"ಮಾರ್ಚ್ 29 ರಂದು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದ್ದು, ಇದೂ ಕೂಡ ಭಾರತದಲ್ಲಿ ಗೋಚರಿಸುವುದಿಲ್ಲ ಎಂದು ಗುಪ್ತ್ ಹೇಳಿದರು. ಉತ್ತರ ಅಮೆರಿಕ, ಗ್ರೀನ್ ಲ್ಯಾಂಡ್, ಐಸ್ ಲ್ಯಾಂಡ್, ಉತ್ತರ ಅಟ್ಲಾಂಟಿಕ್ ಮಹಾಸಾಗರ, ಇಡೀ ಯುರೋಪ್ ಮತ್ತು ವಾಯುವ್ಯ ರಷ್ಯಾದಲ್ಲಿ ಈ ಗ್ರಹಣ ಗೋಚರಿಸಲಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಸೆಪ್ಟೆಂಬರ್ 7 ಮತ್ತು 8 ರ ನಡುವೆ ಸಂಭವಿಸುವ ಪೂರ್ಣ ಚಂದ್ರ ಗ್ರಹಣ ಮಾತ್ರ ದೇಶದಲ್ಲಿ ಗೋಚರಿಸಲಿದೆ. ಇದು ಏಷ್ಯಾದ ಇತರ ದೇಶಗಳು, ಯುರೋಪ್, ಅಂಟಾರ್ಕ್ಟಿಕಾ, ಪಶ್ಚಿಮ ಪೆಸಿಫಿಕ್ ಮಹಾಸಾಗರ, ಆಸ್ಟ್ರೇಲಿಯಾ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿಯೂ ಗೋಚರಿಸುತ್ತದೆ" ಎಂದು ಗುಪ್ತ್ ಹೇಳಿದರು.

2025 ರ ಕೊನೆಯ ಗ್ರಹಣವು ಸೆಪ್ಟೆಂಬರ್ 21 ಮತ್ತು 22 ರ ನಡುವೆ ಸಂಭವಿಸಲಿದ್ದು, ಇದು ಭಾಗಶಃ ಸೂರ್ಯಗ್ರಹಣವಾಗಿರಲಿದೆ. ಇದು ಭಾರತದಲ್ಲಿ ಕಾಣಿಸುವುದಿಲ್ಲ. ಈ ಭಾಗಶಃ ಸೂರ್ಯಗ್ರಹಣವು ನ್ಯೂಜಿಲೆಂಡ್, ಪೂರ್ವ ಮೆಲನೇಷಿಯಾ, ದಕ್ಷಿಣ ಪಾಲಿನೇಷ್ಯಾ ಮತ್ತು ಪಶ್ಚಿಮ ಅಂಟಾರ್ಕ್ಟಿಕಾದಲ್ಲಿ ಗೋಚರಿಸುತ್ತದೆ ಎಂದು ಗುಪ್ತ್ ಹೇಳಿದರು. 2024 ರಲ್ಲಿ ಪೆನಂಬ್ರಲ್ ಚಂದ್ರ ಗ್ರಹಣ, ಸಂಪೂರ್ಣ ಸೂರ್ಯ ಗ್ರಹಣ, ಭಾಗಶಃ ಚಂದ್ರ ಗ್ರಹಣ ಮತ್ತು ವಾರ್ಷಿಕ ಸೂರ್ಯ ಗ್ರಹಣ ಹೀಗೆ ನಾಲ್ಕು ಗ್ರಹಣಗಳು ಸಂಭವಿಸಿದ್ದವು.

ಇದನ್ನೂ ಓದಿ : ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ ಟಾಪ್​ 10 ಮಹಿಳಾ ಸಾಧಕಿಯರು - INDIAN WOMEN ACHIEVERS 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.