ಹುಬ್ಬಳ್ಳಿ-ಧಾರವಾಡ ಹೊಸ ಪೊಲೀಸ್ ಆಯುಕ್ತರಾಗಿ ರೇಣುಕಾ ಸುಕುಮಾರ್ ಅಧಿಕಾರ ಸ್ವೀಕಾರ - ಈಟಿವಿ ಭಾರತ್ ಕನ್ನಡ ನ್ಯೂಸ್
🎬 Watch Now: Feature Video
ಹುಬ್ಬಳ್ಳಿ : ಹಿರಿಯ ಐಪಿಎಸ್ ಅಧಿಕಾರಿ ರೇಣುಕಾ ಸುಕುಮಾರ್ ಅವರಿಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನೂತನ ಪೊಲೀಸ್ ಕಮಿಷನರ್ ಆಗಿ (ಗುರುವಾರ) ಅಧಿಕಾರ ಸ್ವೀಕರಿಸಿದರು. ಇವರು ಹು-ಧಾ ಪೊಲೀಸ್ ಕಮೀಷನರೇಟ್ನ ಮೊದಲ ಮಹಿಳಾ ಕಮಿಷನರ್ ಕೂಡಾ ಹೌದು. ಈ ಹಿಂದಿನ ಕಮಿಷನರ್ ಸಂತೋಷ ಬಾಬು ಅವರಿಂದ ತೆರವಾದ ಸ್ಥಾನಕ್ಕೆ ರೇಣುಕಾ ಸುಕುಮಾರ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಇದಕ್ಕೂ ಮುನ್ನ, ಕಮಿಷನರೇಟ್ನಲ್ಲಿ ಡಿಸಿಪಿ ಆಗಿ ಕಾರ್ಯನಿರ್ವಹಿಸಿದ್ದರು.
ಮಾಧ್ಯಮದೊಂದಿಗೆ ಮಾತನಾಡಿದ ರೇಣುಕಾ ಸುಕುಮಾರ್, ಅವಳಿ ನಗರದ ಕಮೀಷನರ್ ಆಗಿ ಬಂದಿರುವುದಕ್ಕೆ ಸಂತಸವಾಗಿದೆ. ಪೊಲೀಸ್ ಇಲಾಖೆ ದೊಡ್ಡ ಜವಾಬ್ದಾರಿ ಕೊಟ್ಟಿದೆ. ಈ ಹಿಂದೆ ಇಲ್ಲಿಯೇ ಡಿಸಿಪಿ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಈಗ ಪೊಲೀಸ್ ಕಮೀಷನರ್ ಆಗಿ ಬಂದಿದ್ದೇನೆ. ಸರ್ಕಾರ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಮಹಿಳಾ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತೇನೆ. ರೌಡಿಗಳ ಹಾವಳಿ ಮಟ್ಟಹಾಕುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ನೊಂದವರ ಕಣ್ಣೀರು ಒರೆಸುವುದು ನನ್ನ ಗುರಿ: ನೂತನ ಪೊಲೀಸ್ ಆಯುಕ್ತ ಬಿ.ದಯಾನಂದ್