ನೋಯ್ಡಾದಲ್ಲಿ 400ಕ್ಕೂ ಹೆಚ್ಚು ವಾಹನಗಳು ಜಲಾವೃತ! ಈ ದೃಶ್ಯವನ್ನೊಮ್ಮೆ ನೋಡಿ - ನೋಯ್ಡಾದಲ್ಲಿ ಜಲಾವೃತವಾದ 400 ಕ್ಕೂ ಹೆಚ್ಚು ವಾಹನಗಳು

🎬 Watch Now: Feature Video

thumbnail

By

Published : Jul 26, 2023, 8:23 AM IST

ನವದೆಹಲಿ/ನೋಯ್ಡಾ : ಹತ್ನಿಕುಂಡ್ ಬ್ಯಾರೇಜ್‌ನಿಂದ ನಿರಂತರವಾಗಿ ನೀರು ಹೊರಬಿಡುತ್ತಿರುವ ಕಾರಣ ಹಿಂಡನ್ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಪಾತ್ರದ ಸುಮಾರು ಹನ್ನೆರಡು ಹಳ್ಳಿಗಳ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮತ್ತೊಂದೆಡೆ, ಮಂಗಳವಾರ, ಗ್ರೇಟರ್ ನೋಯ್ಡಾದ ಇಕೋಟೆಕ್ 3 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹಳೆಯ ಸುಟಿಯಾನ ಪ್ರದೇಶದ ಓಲಾ ಉಬರ್‌ ವಾಹನಗಳನ್ನು ನಿಲುಗಡೆ ಮಾಡುವ ಪ್ರದೇಶದಲ್ಲಿ ಸುಮಾರು 400ಕ್ಕೂ ಹೆಚ್ಚು ವಾಹನಗಳು ನೀರಿನಲ್ಲಿ ಮುಳುಗಿವೆ.  

ವಾಹನಗಳೆಲ್ಲ ನೀರಿನಲ್ಲಿ ತೇಲುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಪ್ರದೇಶವು ಹಿಂಡನ್ ನದಿ ಬಳಿಯ ಖಾದರ್‌ ಎಂಬಲ್ಲಿದೆ. ಓಲಾ, ಉಬರ್‌ ವಾಹನ ಚಲಾಯಿಸುವ ಚಾಲಕರು ಕಂತುಗಳಲ್ಲಿ ಠೇವಣಿ ಕಟ್ಟದಿದ್ದಾಗ, ಕಂಪನಿಯು ವಾಹನಗಳನ್ನು ಜಪ್ತಿ ಮಾಡಿ ತಂದು ಈ ಪ್ರದೇಶದಲ್ಲಿ ನಿಲ್ಲಿಸುತ್ತದೆ ಎಂದು ಹೇಳಲಾಗುತ್ತಿದೆ.

"ಹಿಂಡನ್ ನೀರಿನ ಮಟ್ಟ 205.65 ಮೀಟರ್ ತಲುಪಿದೆ. ಹೀಗಾಗಿ, ಪ್ರವಾಹ ಪರಿಸ್ಥಿತಿ ಎದುರಿಸಲು ಆಡಳಿತವು ಸಂಪೂರ್ಣ ಸಿದ್ಧವಾಗಿದೆ" ಎಂದು ಗೌತಮ್ ಬುದ್ಧ ನಗರ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅತುಲ್ ಕುಮಾರ್ ತಿಳಿಸಿದ್ದಾರೆ.  

ಇದನ್ನೂ ಓದಿ : Karnataka Rain update: ಕಲಬುರಗಿಗೆ ಭಾರಿ ಮಳೆ ಮುನ್ಸೂಚನೆ, ರೆಡ್‌ ಅಲರ್ಟ್ : ಇಂದು ಎಲ್ಲೆಲ್ಲಿ ಶಾಲೆಗೆ ರಜೆ ಗೊತ್ತೇ?

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.