ಥಾಯ್ಲೆಂಡ್​​ ಮಹಿಳೆಯ ಕನಸಿನಲ್ಲಿ ಬಂದ ಕಾಳಿ ಮಾತೆ: ಬೋಧ್​ಗಯಾದಲ್ಲಿ ಪೂಜೆ - ಈಟಿವಿ ಭಾರತ ಕನ್ನಡ ನ್ಯೂಸ್​​

🎬 Watch Now: Feature Video

thumbnail

By

Published : Oct 3, 2022, 8:36 PM IST

Updated : Feb 3, 2023, 8:28 PM IST

ಬಿಹಾರ: ಗಯಾದಲ್ಲಿ ಭಕ್ತರು ವಿದೇಶಿ ಮಹಿಳೆಯನ್ನು ಕಾಳಿ ಮಾತೆ ಎಂದು ಆರಾಧನೆ ಮಾಡುತ್ತಿದ್ದಾರೆ. ಭಕ್ತರು ಈ ಕಾಳಿ ಮಾತೆಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸುತ್ತಿದ್ದಾರೆ. ಈ ನವರಾತ್ರಿ ಸಂದರ್ಭದಲ್ಲಿ ಕಾಳಿ ಮಾತೆಯು ಈ ವಿದೇಶಿ ಮಹಿಳೆಯ ಮೇಲೆ ಬರುತ್ತಾಳಂತೆ. ಅಂತೆಯೇ ಈಕೆ ಕಾಳಿ ಮಾತೆಯಂತೆ ಕೋಪ, ಆವೇಶ ತೋರುತ್ತಾಳಂತೆ. ಥಾಯ್ಲೆಂಡ್​​ ಮೂಲದ ಈ ಮಹಿಳೆಯು ಈ ಹಿಂದೆ ಭಾರತಕ್ಕೆ ಬಂದಿದ್ದರು. ಬಳಿಕ ಈ ಮಹಿಳೆಗೆ ಕಾಳಿ ಮಾತೆ ಕನಸಲ್ಲಿ ಬಂದಿರುವುದಾಗಿ ಹೇಳುತ್ತಾರೆ. ಅಂತೆಯೇ ಈ ಮಹಿಳೆಯು ತನ್ನ ಬೌಧ್ಧ ಧರ್ಮವನ್ನು ಬಿಟ್ಟು ಸನಾತನ ಧರ್ಮಕ್ಕೆ ಬಂದಿರುವುದಾಗಿ ಇವರ ಅನುಯಾಯಿ ಪುಷ್ಕರ್​ ವರ್ಮಾ ಹೇಳುತ್ತಾರೆ. ಸದ್ಯ ಈ ಕಾಳಿ ಮಾತೆಯ ದರ್ಶನಕ್ಕೆ ಅಪಾರಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
Last Updated : Feb 3, 2023, 8:28 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.