ಕಟ್ಟಡ ಕಾಮಗಾರಿ: ಡೈನಮೈಟ್ ಸ್ಫೋಟಿಸಿದ್ದಕ್ಕೆ ಮನೆ ಗೋಡೆಗೆ ಹಾನಿ - dynamite explosion during construction work
🎬 Watch Now: Feature Video
ಬೆಂಗಳೂರು: ಕಟ್ಟಡ ಕಾಮಗಾರಿ ವೇಳೆ ಡೈನಮೈಟ್ ಬಳಸಿ ಬಂಡೆ ಸ್ಫೋಟಿಸಿದ ಪರಿಣಾಮ ಪಕ್ಕದಲ್ಲಿದ್ದ ಮನೆಗೆ ಹಾನಿಯಾದ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾರ್ಚ್ 8 ರಂದು ಖಾಲಿ ಸೈಟ್ನಲ್ಲಿ ಡೈನಮೈಟ್ ಸ್ಫೋಟಿಸಿದ ಕಾರಣ ಪಕ್ಕದಲ್ಲಿದ್ದ ಸೋಮಶೇಖರ್ ಎಂಬುವರ ಮನೆಯ ಗೋಡೆ ಬಿರುಕು ಬಿಟ್ಟಿದೆ.
ಇದನ್ನೂ ಓದಿ : ಜಿ 20 ಪ್ರತಿನಿಧಿಗಳಿಗಾಗಿ ಲೇಸರ್ ಸೌಂಡ್ ಅಂಡ್ ಲೈಟ್ ಕಾರ್ಯಕ್ರಮ; ಆಗ್ರಾ ಕೋಟೆಯ ಮೇಲ್ಛಾವಣಿಯಲ್ಲಿ ಬಿರುಕು
ಸೋಮಶೇಖರ್ ಮನೆ ಪಕ್ಕದಲ್ಲಿ ನಿರ್ಮಾಣ ಆಗುತ್ತಿರುವ ಕಟ್ಟಡದ ಕಾಮಗಾರಿ ವೇಳೆ ಕಾರ್ಮಿಕರು ಬಂಡೆಗಳನ್ನು ತೆರವು ಮಾಡಲು ಡೈನಮೈಟ್ ಸ್ಫೋಟಿಸಿದ್ದಾರೆ. ಈ ಸ್ಫೋಟದಿಂದಾಗಿ ಮನೆಯ ಗೋಡೆ ಬಿರುಕು ಬಿಟ್ಟಿದೆ ಎಂದು ಆರೋಪಿಸಿ, ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದಾರೆ. ಮನೆ ಮಾಲೀಕ ನೀಡಿದ ದೂರಿನ ಅನ್ವಯ ಸೈಟ್ ಮಾಲೀಕ, ಗುತ್ತಿಗೆದಾರ ಹಾಗೂ ಕಾರ್ಮಿಕರ ವಿರುದ್ಧ ಸ್ಫೋಟಕ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕೂಡಲಸಂಗಮ ಐಕ್ಯ ಮಂಟಪ ಗೋಡೆ ಬಿರುಕು: ಭಕ್ತರ ಪ್ರವೇಶಕ್ಕೆ ನಿರ್ಬಂಧ