ಶಾಸಕ ಶ್ರೀನಿವಾಸ್ ಹಂಚ್ತಿರುವ ಕುಕ್ಕರ್ ಸ್ಫೋಟಗೊಳ್ತಿವೆ: ಜೆಡಿಎಸ್ ಅಭ್ಯರ್ಥಿ ನಾಗರಾಜ್ - Cooker explosion
🎬 Watch Now: Feature Video
ತುಮಕೂರು: ಗುಬ್ಬಿ ವಿಧಾನಸಭೆ ಕ್ಷೇತ್ರದಲ್ಲಿ ಉಚ್ಛಾಟಿತ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಮತದಾರರಿಗೆ ಕುಕ್ಕರ್ ಹಂಚಿಕೆ ಮಾಡುತ್ತಿದ್ದು ತಾಲೂಕಿನಲ್ಲಿ ನಾಲ್ಕೈದು ಕಡೆ ಸ್ಫೋಟಗೊಂಡಿದೆ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಶಾಸಕ ಶ್ರೀನಿವಾಸ್ ಕಳಪೆ ಗುಣಮಟ್ಟದ ಕುಕ್ಕರ್ ಹಂಚುತಿದ್ದಾರೆ. ಕುಕ್ಕರ್ ಹಂಚುತಿದ್ದುದನ್ನು ನೋಡಿ ಜನರೇ ಬಿದ್ದು ಬಿದ್ದು ನಗುತ್ತಾರೆ. ನಮ್ಮ ಮನೆಯಲ್ಲಿ ನಾಲ್ಕೈದು ಕುಕ್ಕರ್ ಇದೆ, ಈ ಯಪ್ಪ ಮತ್ತೆ ಕುಕ್ಕರ್ ಕೊಡ್ತಾನೆ ಎಂದು ಹೇಳುತ್ತಿದ್ದಾರೆ. ಕುಕ್ಕರ್ ಬ್ಲಾಸ್ಟ್ ಆಗಿರುವ ವರದಿಯಾಗಿದೆ, ಜನರ ಸೇಫ್ಟಿ ಮುಖ್ಯ, ದಯವಿಟ್ಟು ಈ ಕುಕ್ಕರ್ ಬಳಸಬೇಡಿ" ಎಂದು ಮನವಿ ಮಾಡಿದರು.
"150-200 ರೂ. ಮೌಲ್ಯದ ಕುಕ್ಕರ್ ಕೊಟ್ಟು ಜನರನ್ನು ಮೂರ್ಖರನ್ನಾಗಿಸುತಿದ್ದಾರೆ. ಇದರಿಂದ ಆಗುವ ಅನಾಹುತಕ್ಕೆ ಶಾಸಕ ಶ್ರೀನಿವಾಸ್ ಹೊಣೆ" ಎಂದು ಶಾಸಕರ ವಿರುದ್ದ ಕಿಡಿ ಕಾರಿದರು.
ಇದನ್ನೂ ಓದಿ: ಜೆಡಿಎಸ್ಗೆ ನೀಡುವ ಒಂದೊಂದು ಮತವೂ ಕಾಂಗ್ರೆಸ್ಗೆ ಹೋಗುತ್ತದೆ: ಅಮಿತ್ ಶಾ