ವಿದ್ಯುತ್ ಸಮಸ್ಯೆಯಿಂದ ಬೇಸತ್ತು ಹೆಸ್ಕಾಂ ಕಚೇರಿಗೆ ಮೊಸಳೆ ತಂದು ಬಿಟ್ಟ ರೈತರು!- ವಿಡಿಯೋ
🎬 Watch Now: Feature Video
ವಿಜಯಪುರ: ಸಕಾಲದಲ್ಲಿ ವಿದ್ಯುತ್ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ರೋಸಿಹೋದ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ್ ಗ್ರಾಮದ ರೈತರು, ಸ್ಥಳೀಯ ವಿದ್ಯುತ್ ವಿತರಣಾ ಘಟಕದ ಆವರಣಕ್ಕೆ ಮೊಸಳೆ ತಂದು ಬಿಟ್ಟು ತಮ್ಮ ಆಕ್ರೋಶ ಹೊರಹಾಕಿದ್ದಾರೆ. "ಅಧಿಕಾರಿಗಳು ಪ್ರತಿದಿನ ತಡರಾತ್ರಿ ತ್ರಿಫೇಸ್ ವಿದ್ಯುತ್ ನೀಡುತ್ತಾರೆ. ಈ ವೇಳೆ ಹೊಲಗಳಿಗೆ ತೆರಳಿ ನೀರು ಹರಿಸಬೇಕು. ಅಲ್ಲೆಲ್ಲ ಮೊಸಳೆ ಸೇರಿ ಹಲವಾರು ಕಾಡು ಪ್ರಾಣಿಗಳಿರುತ್ತವೆ. ನಮಗೇನಾದರೂ ಸಮಸ್ಯೆಯಾದರೆ ಯಾರು ಹೊಣೆ? ರಾತ್ರಿ ತ್ರಿಫೇಸ್ ವಿದ್ಯುತ್ ನೀಡುವುದರಿಂದ ನಮಗೆ ಲಾಭವಿಲ್ಲ. ಇದರಿಂದ ಸಮಸ್ಯೆಗಳೇ ಹೆಚ್ಚು. ಹಾಗಾಗಿ ನಮ್ಮ ಸಮಸ್ಯೆಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಥವಾಗಲಿ ಎಂಬ ಕಾರಣಕ್ಕೆ ಮೊಸಳೆ ತಂದು ಬಿಟ್ಟಿದ್ದೇವೆ" ಎಂದು ರೈತರು ಹೇಳಿದ್ದಾರೆ.
ಗುರುವಾರ ರಾತ್ರಿ ಬೆಳೆಗಳಿಗೆ ನೀರು ಹರಿಸಲು ಹೋದಾಗ ರೈತರೊಬ್ಬರ ಹೊಲದಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಅದೇ ಮೊಸಳೆಯನ್ನು ಹಿಡಿದ ರೈತರು, ಟ್ರ್ಯಾಕ್ಟರ್ ಮೂಲಕ ವಿದ್ಯುತ್ ವಿತರಣಾ ಕೇಂದ್ರಕ್ಕೆ ತಂದಿದ್ದಾರೆ. ಕೊನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮನವೊಲಿಸಿದ್ದು, ರೈತರು ಮೊಸಳೆ ತೆಗೆದುಕೊಂಡು ಹೋದರು.
ಇದನ್ನೂ ಓದಿ: ಕಾಲುವೆ ದಾಟುತ್ತಿದ್ದ ವೇಳೆ ಮೊಸಳೆ ಮೇಲೆ ಕಾಲಿಟ್ಟ ಮಗ.. ಪ್ರಾಣವನ್ನು ಪಣಕ್ಕಿಟ್ಟು ಕಂದನನ್ನು ರಕ್ಷಿಸಿದ ತಾಯಿ