ವಿದ್ಯುತ್ ಶಾರ್ಟ್ ಸರ್ಕ್ಯೂಟ್.. ಪೊಲೀಸ್ ಸಮವಸ್ತ್ರ ಸೇರಿ ಲಕ್ಷಾಂತರ ಮೌಲ್ಯದ ವಸ್ತು ಬೆಂಕಿಗಾಹುತಿ - ಪೊಲೀಸ್ ಸ್ಟೋರ್

🎬 Watch Now: Feature Video

thumbnail

By ETV Bharat Karnataka Team

Published : Sep 12, 2023, 1:13 PM IST

ಹುಬ್ಬಳ್ಳಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ನಗರದ ಜನತಾ ಬಜಾರ್​ನಲ್ಲಿ ನಡೆದಿದೆ. ಶಿವಪ್ಪ ನಾಯಕ ಎಂಬುವರಿಗೆ ಸೇರಿದ ಪೊಲೀಸ್ ಸ್ಟೋರ್​ನಲ್ಲಿ ಈ ಅವಘಡ ಸಂಭವಿಸಿದೆ. ಇಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಸಮವಸ್ತ್ರ ಸೇರಿದಂತೆ ಹಲವು ಉಪಕರಣಗಳನ್ನು ಮಾಡಲಾಗುತ್ತಿತ್ತು.

ನಿನ್ನೆ ತಡರಾತ್ರಿ ಅಂಗಡಿಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಂತೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆದ್ದಾರಿಯಲ್ಲಿ ಕಾರು ಬೆಂಕಿಗಾಹುತಿ: ಇತ್ತೀಚೆಗೆ ಇಂಜಿನ್​ನಲ್ಲಿ ಹೊಗೆ ಕಾಣಿಸಿಕೊಂಡು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕಾರೊಂದು ಬೆಂಕಿಗೆ ಸುಟ್ಟು ಕರಕಲಾದ ಘಟನೆ ನಡೆದಿತ್ತು. ಶ್ರೀ ರಂಗಪಟ್ಟಣ ತಾಲೂಕಿನ ಗೌಡಹಳ್ಳಿ ಗೇಟ್​ ಬಳಿ ಘಟನೆ ನಡೆದಿತ್ತು. ರಾಜಸ್ಥಾನ ಮೂಲದ ಸ್ನೇಹಿತರು ತಮಿಳುನಾಡಿನ ಸ್ನೇಹಿತನಿಂದ ಕಾರು ಪಡೆದು ವ್ಯಾಪಾರದ ಹಿನ್ನೆಲೆ ಮೈಸೂರಿಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿತ್ತು.

ಇದನ್ನೂ ನೋಡಿ : ವಿಜಯನಗರದಲ್ಲಿ ಹೊತ್ತಿ ಉರಿದ ಖಾಸಗಿ ಬಸ್‌: 30 ಮಂದಿ ಪ್ರಯಾಣಿಕರು ಪಾರು

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.