Redmi New Smartphone Teaser: ರೆಡ್ಮಿಯಿಂದ ಹೊಸ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಗೆ ಅಪ್ಪಳಿಸಲಿದೆ. ಕಂಪನಿಯು ಈ ಸ್ಮಾರ್ಟ್‌ಫೋನ್ ಜಾಗತಿಕವಾಗಿ ಮತ್ತು ಭಾರತದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈಗಾಗಲೇ ಮೊಬೈಲ್ ಟೀಸರ್ ಅನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ ವೇದಿಕೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಟೀಸರ್ ಪ್ರಕಾರ ಈ ಸ್ಮಾರ್ಟ್‌ಫೋನ್ 2025ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಎಂದು ತೋರುತ್ತದೆ.
ಕಂಪನಿ ಪೋಸ್ಟ್‌ನಲ್ಲಿ, 'ಹೊಸ ವರ್ಷವನ್ನು ಬ್ಯಾಂಗ್‌ನೊಂದಿಗೆ ಪ್ರಾರಂಭಿಸಿ' ಎಂದು ಬರೆದಿದೆ. ಇದು '2025G' ಎಂಬ ಚಿತ್ರವನ್ನೂ ಹೊಂದಿದೆ. ಮುಂಬರುವ ಸ್ಮಾರ್ಟ್‌ಫೋನ್ 5G ನೆಟ್‌ವರ್ಕ್ ಸಪೋರ್ಟ್ ಹೊಂದಲಿದೆ ಎಂದು ಇದು ಸೂಚಿಸುತ್ತದೆ. ಕಂಪನಿಯು ಅಧಿಕೃತವಾಗಿ ಸ್ಮಾರ್ಟ್‌ಫೋನ್ ಹೆಸರನ್ನು ಘೋಷಿಸದಿದ್ದರೂ, ಇದು 'Redmi 14C 5G' ಎಂದು ಊಹಿಸಬಹುದಾಗಿದೆ.
Kick off the New Year with a bang! #2025G is coming your way.
— Redmi India (@RedmiIndia) December 23, 2024
Stay tuned! pic.twitter.com/ieL3J7qzgk
ಕ್ಯಾಮೆರಾ ಸೆಂಟ್ರಿಕ್ ಡಿಸೈನ್: ಕಂಪನಿಯು ಬಿಡುಗಡೆ ಮಾಡಿದ ಟೀಸರ್ ಸ್ಮಾರ್ಟ್‌ಫೋನ್‌ನ ಸಿಲೂಯೆಟ್ ಅನ್ನು ತೋರಿಸಿದೆ. ಇದು ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್‌ನಂತೆ ಕಾಣುತ್ತದೆ. ಈ ವಿನ್ಯಾಸವು ಸ್ಮಾರ್ಟ್‌ಫೋನ್‌ನ ಛಾಯಾಗ್ರಹಣದ ಸಾಮರ್ಥ್ಯದ ಬಗ್ಗೆ ಬಲವಾಗಿ ಹೇಳುತ್ತದೆ. #2025G ಹ್ಯಾಶ್‌ಟ್ಯಾಗ್ ಬಳಕೆಯೊಂದಿಗೆ, ಇದು ಖಂಡಿತವಾಗಿಯೂ 5G ಸಂಪರ್ಕದೊಂದಿಗೆ ಬರುತ್ತದೆ ಎಂದು ತೋರುತ್ತದೆ. ಇದರರ್ಥ ಈ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ವೇಗದ ಸಂಪರ್ಕಕ್ಕಾಗಿ ಹೆಚ್ಚುತ್ತಿರುವ ಬೇಡಿಕೆ ಪೂರೈಸಬಹುದಾಗಿದೆ.
ಈ ಫೋನ್‌ನ ಹೆಸರು, ವೈಶಿಷ್ಟ್ಯಗಳು ಮತ್ತು ವಿಶೇಷತೆಗಳನ್ನು ಕಂಪನಿ ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ, ಈ ಮುಂಬರುವ ಸ್ಮಾರ್ಟ್‌ಫೋನ್ 'Redmi 14C 5G' ಆಗಿರಬಹುದು ಎಂದು ಟಿಪ್‌ಸ್ಟರ್ ಪರಾಸ್ ಗುಗ್ಲಾನಿ ಪೋಸ್ಟ್‌ನಲ್ಲಿ ಊಹಿಸಿದ್ದಾರೆ. ಇದು ಡಿಸೆಂಬರ್ 2023 ರಲ್ಲಿ ಬಿಡುಗಡೆಯಾದ 'Redmi 13C' ನ ಉತ್ತರಾಧಿಕಾರಿಯಾಗಿರಬಹುದು. ಈ 'Redmi 13C 4G' ರೂಪಾಂತರವನ್ನು ಈ ವರ್ಷದ ಆರಂಭದಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಲಾಯಿತು. ಅದರಲ್ಲಿರುವ ಹಾರ್ಡ್‌ವೇರ್ ಅನ್ನು ಅಪ್ಡೇಟ್ ಮಾಡಲಾಗಿದ್ದು, ಅದನ್ನು 5G ರೂಪಾಂತರದಲ್ಲಿ ಭಾರತೀಯ ಮಾರುಕಟ್ಟೆಗೆ ತರಲಾಗಿದೆ.
ಈ ಮಾದರಿಯನ್ನು ಗೀಕ್‌ಬೆಂಚ್‌ನಲ್ಲಿ 2411DRN47I ಸಂಖ್ಯೆಯೊಂದಿಗೆ ಲಿಸ್ಟ್ ಮಾಡಲಾಗಿದೆ. ಇದು ಭಾರತೀಯ ವೇರಿಯಂಟ್‌ನಲ್ಲಿರುವ 'ರೆಡ್‌ಮಿ 14 ಸಿ 5 ಜಿ' ಸ್ಮಾರ್ಟ್‌ಫೋನ್ ಎಂದು ಟೆಕ್ ತಜ್ಞರು ಭವಿಷ್ಯ ನುಡಿದಿದ್ದಾರೆ. ಇದು ಶಕ್ತಿಶಾಲಿ Qualcomm Snapdragon 4 Gen 2 ಪ್ರೊಸೆಸರ್‌ನೊಂದಿಗೆ ಬರಲಿದೆ ಎಂದು ತೋರುತ್ತದೆ. ಈ ಸ್ಮಾರ್ಟ್‌ಫೋನ್ 8GB RAM ನೊಂದಿಗೆ Android 14 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ. ಸ್ಮಾರ್ಟ್‌ಫೋನ್ ಸಿಂಗಲ್-ಕೋರ್ ಕಾರ್ಯಕ್ಷಮತೆಯಲ್ಲಿ 917 ಮತ್ತು ಮಲ್ಟಿ-ಕೋರ್ ಪರೀಕ್ಷೆಯಲ್ಲಿ 2,182 ಸ್ಕೋರ್ ಗಳಿಸಿದೆ.
ರೆಡ್ಮಿಯ ಹೊಸ 5G ಸ್ಮಾರ್ಟ್‌ಫೋನ್‌ನ ನಿರೀಕ್ಷಿತ ವಿಶೇಷತೆಗಳು: ಈ ಹೊಸ Redmi ಸ್ಮಾರ್ಟ್‌ಫೋನ್ 'Redmi 14R' ಅನ್ನು ಹೋಲುವಂತಿದ್ದರೆ. ಅದು ಈ ಕೆಳಗಿನ ವಿಶೇಷತೆಗಳನ್ನು ಹೊಂದಿರಬಹುದು.
- ಡಿಸ್ಪ್ಲೇ: ಫೋನ್ 6.88-ಇಂಚಿನ ಸ್ಕ್ರೀನ್ ಜೊತೆ 1640 x 720 ಪಿಕ್ಸೆಲ್‌ಗಳ ರೆಸಲ್ಯೂಶನ್ ಒಳಗೊಂಡಿರಬಹುದು. ಇದು 120Hz ರಿಫ್ರೆಶ್ ರೇಟ್ ಮತ್ತು 600 ನಿಟ್‌ಗಳ ಬ್ರೈಟ್ನೆಸ್ ಹೊಂದಿದೆ. ಡಿಸ್ಪ್ಲೇ ಐ ಪ್ರೊಟೆಕ್ಷನ್ ಮತ್ತು ಒದ್ದೆಯಾದ ಕೈಗಳಿಂದಲೂ ಬಳಸಬಹುದಾಗಿದೆ.
- ಪ್ರೊಸೆಸರ್: Adreno GPU ಜೊತೆಗೆ Qualcomm Snapdragon 4th Gen 2 ಚಿಪ್‌ಸೆಟ್
- ಕ್ಯಾಮೆರಾ: 13MP ಪ್ರಾಥಮಿಕ ರಿಯರ್ ಕ್ಯಾಮೆರಾ, 5MP ಫ್ರಂಟ್ ಕ್ಯಾಮೆರಾ
- ಬ್ಯಾಟರಿ: 5,160mAh
- 18W ಸ್ಪೀಡ್ ಚಾರ್ಜಿಂಗ್
- ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 14-ಆಧಾರಿತ ಹೈಪರ್ಓಎಸ್
- ಬಿಲ್ಡ್: ಇದು 171.88mm x 77.8mm x 8.22mm ಆಯಾಮಗಳೊಂದಿಗೆ ಲೈಟ್ವೇಟ್ದೊಂದಿಗೆ ಬರುತ್ತದೆ.
ಓದಿ: ಈ ವರ್ಷ ಜೋರಾಗಿದೆ ಫ್ಲ್ಯಾಗ್‌ಶಿಪ್ ಫೋನ್ಗಳ ಹಾವಳಿ, ಖರೀದಿಸುವುದಾದರೆ ಒಂದು ಲುಕ್ ಹಾಕಿ!