Watch: ವರುಣಾರ್ಭಟಕ್ಕೆ ಹಿಮಾಚಲ ಪ್ರದೇಶ ತತ್ತರ... ರಕ್ಷಣಾ ಕಾರ್ಯಾಚರಣೆಯ ಡ್ರೋನ್ VIDEO

🎬 Watch Now: Feature Video

thumbnail

By

Published : Aug 19, 2023, 1:55 PM IST

Updated : Aug 19, 2023, 2:51 PM IST

ಹಿಮಾಚಲ ಪ್ರದೇಶ: ಕಳೆದ ಕೆಲ ದಿನಗಳ ಹಿಂದೆ ಉಂಟಾದ ಮೇಘ ಸ್ಫೋಟದಲ್ಲಿ ಭಾರಿ ಅನಾಹುತ ಉಂಟಾಗಿ, ಮಳೆಗಾಲದ ಆರಂಭದಲ್ಲೇ ಒಟ್ಟು 2,022 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ ಮತ್ತು 9,615 ಮನೆಗಳು ಭಾಗಶಃ ಹಾನಿಗೊಳಗಾಗಿವೆ. 113 ಕಡೆ ಭೂಕುಸಿತಗಳು ಸಂಭವಿಸಿದೆ ಎಂದು ಸರ್ಕಾರ ತಿಳಿಸಿದೆ. ಜೂನ್ 24ರ ನಂತರ ಹಿಮಾಚಲದಲ್ಲಿ ಒಟ್ಟು 8014.61 ಕೋಟಿ ರೂ. ನಷ್ಟ ಉಂಟಾಗಿದೆ. 

ವರುಣನ ಅವಾಂತರಕ್ಕೆ ಕಳೆದ ಮೂರ್ನಾಲ್ಕು ದಿನದಲ್ಲಿ 74 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಕಾರಣದಿಂದ ಇಡೀ ರಾಜ್ಯವನ್ನು "ನೈಸರ್ಗಿಕ ವಿಕೋಪ ಪೀಡಿತ ಪ್ರದೇಶ" ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಘೋಷಿಸಿದ್ದಾರೆ. ಪ್ರವಾಹದಲ್ಲಿ ಸಿಲುಕಿದ ಸಾವಿರಾರು ಪ್ರವಾಸಿಗರು ಮತ್ತು ಸ್ಥಳೀಯ ಜನರನ್ನು ಭಾರತೀಯ ವಾಯುಪಡೆ, ಸೇನೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್, ಪೊಲೀಸ್, ಗೃಹ ರಕ್ಷಕರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಸ್ವಯಂಸೇವಕರ ಸಹಾಯದಿಂದ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೇ ಸದ್ಯ ಮಳೆ ಬಿಡುವು ಕೊಟ್ಟಿದ್ದು ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯ ಮುಂದುವರೆದಿದೆ. ಕಾರ್ಯಾಚರಣೆಗಳ ಡ್ರೋನ್ ದೃಶ್ಯಗಳಲ್ಲಿ ಹಲವಾರು ಪ್ರದೇಶಗಳಲ್ಲಿ ಜರ್ಜರಿತವಾಗಿರುವುದು ಕಂಡು ಬರುತ್ತಿದೆ.   

ಇದನ್ನೂ ಓದಿ: ಶಿಮ್ಲಾ ಶಿವ ದೇವಾಲಯದ ಬಳಿ ಭೂಕುಸಿತ: ಮುಂದುವರಿದ ರಕ್ಷಣಾ ಕಾರ್ಯಾಚರಣೆ, ಇದುವರೆಗೆ 12 ಮೃತ ದೇಹಗಳು ಪತ್ತೆ

Last Updated : Aug 19, 2023, 2:51 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.