ದರೋಡೆ ಮಾಡಲು ಬಂದವರಿಗೆ ಧರ್ಮದೇಟು: ಹಲ್ಲೆಯಿಂದ ಓರ್ವ ಸಾವು? - criminal beaten to death in Bihar
🎬 Watch Now: Feature Video

ಸಮಸ್ತಿಪುರ(ಬಿಹಾರ): ದರೋಡೆಗೆ ಎಂದು ಬಂದಿದ್ದ ಮೂವರನ್ನು ಗ್ರಾಮಸ್ಥರೇ ಹಿಡಿದು ಥಳಿಸಿರುವ ಘಟನೆ ಸಮಸ್ತಿಪುರದಲ್ಲಿ ನಡೆದಿದೆ. ಸಿಎಸ್‌ಪಿ ಆಪರೇಟರ್ ದರೋಡೆ ಮಾಡಲು ಬಂದ ಮೂವರು ದರೋಡೆಕೋರರು ಸಾರ್ವಜನಿಕರ ಕೈಯಲ್ಲಿ ಸಿಕ್ಕಿ ಧರ್ಮದೇಟು ತಿಂದಿದ್ದಾರೆ. ಸಾರ್ವಜನಿಕರು ಮಾಡಿದ ಹಲ್ಲೆಯಲ್ಲಿ ಒಬ್ಬ ಸಾವನಪ್ಪಿದ್ದಾನೆ ಎನ್ನಲಾಗಿದೆ. ಆದರೆ ಸಾವಿನ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ. ಕಳ್ಳತನಕ್ಕೆ ಬಂದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದೆ.
Last Updated : Feb 3, 2023, 8:30 PM IST