ಶಿವಮೊಗ್ಗ: ತುಂಬಿ ಹರಿಯುತ್ತಿದ್ದ ನದಿಗೆ ಹಾರಿ ಯುವಕನ ಹುಚ್ಚಾಟ; ಬಿಸಿ ಮುಟ್ಟಿಸಿದ ಪೊಲೀಸರು - ತುಂಗಾ ನದಿಗೆ ಹಾರಿದ ಯುವಕ
🎬 Watch Now: Feature Video
ಶಿವಮೊಗ್ಗ: ತುಂಬಿ ಹರಿಯುತ್ತಿರುವ ತುಂಗಾ ನದಿಗೆ ಹೊಸ ಸೇತುವೆ ಮೇಲಿನಿಂದ ಹಾರಿ ಹುಚ್ಚಾಟ ಮಾಡಿದ್ದ ಯುವಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಮಂಗಳವಾರ ಸಾಯಂಕಾಲ ಯುವಕ ನದಿಗೆ ಹಾರಿದ್ದ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಕೋಟೆ ಠಾಣೆ ಪೊಲೀಸರು ರಾಜೀವ್ ಗಾಂಧಿ ಬಡಾವಣೆಯ ನಿವಾಸಿ ಗಂಗಪ್ಪನನ್ನು ವಶಕ್ಕೆ ಪಡೆದು ಲಘು ಪ್ರಕರಣ ದಾಖಲಿಸಿದ್ದಾರೆ.
ವೈರಲ್ ವಿಡಿಯೋ: ಯುವಕ ಸೇತುವೆ ತಡೆಗೋಡೆ ಮೇಲಿನಿಂದ ನದಿಗೆ ಜಿಗಿದು, ರಭಸವಾಗಿ ಹರಿಯುವ ನೀರಿನಲ್ಲಿ ಈಜುತ್ತಾ ರೈಲ್ವೆ ಸೇತುವೆವರೆಗೂ ತಲುಪಿದ್ದ. ಅಲ್ಲಿಂದ ನೀರಿನ ಹರಿವಿಗೆ ವಿರುದ್ಧ ದಿಕ್ಕಿನಲ್ಲಿ ಈಜುತ್ತಾನೆ. ಪಕ್ಕದ ದಡ ತಲುಪಿ ಅಲ್ಲಿಂದ ಮೇಲೆ ಬರುತ್ತಾನೆ.
ಪೊಲೀಸರಿಗೆ ಕರೆ ಮಾಡಿದ್ದ ಜನ: ಯುವಕ ಜಿಗಿಯುವುದನ್ನು ಗಮನಿಸಿದ್ದ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು, ಗಂಗಪ್ಪನನ್ನು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: Watch: ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ನೀರಿನಲ್ಲಿ ಕೊಚ್ಚಿಹೋದ ಯುವಕ.. ದೃಶ್ಯ ಮೊಬೈಲ್ನಲ್ಲಿ ಸೆರೆ