ಲಂಗರು ಹಾಕಿದ್ದ ಬೋಟ್ಗಳಿಗೆ ಆಕಸ್ಮಿಕ ಬೆಂಕಿ: ಕೋಟ್ಯಂತರ ರೂಪಾಯಿ ನಷ್ಟ - ಕೋಟ್ಯಂತರ ರೂಪಾಯಿ ನಷ್ಟ
🎬 Watch Now: Feature Video
Published : Nov 13, 2023, 2:52 PM IST
|Updated : Nov 13, 2023, 9:52 PM IST
ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯ ಬಂದರಿನಲ್ಲಿ ದೀಪಾವಳಿ ಪ್ರಯುಕ್ತ ಪೂಜೆ ನಡೆಯುತ್ತಿದ್ದ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಈ ದುರ್ಘಟನೆಯ ಪ್ರಾರಂಭದಲ್ಲಿ ಏಳು ಮೀನುಗಾರಿಕಾ ದೋಣಿಗಳು ಬೆಂಕಿಗೆ ಆಹುತಿಯಾಗಿವೆ, ಬಳಿಕ ಉಳಿದ ನಾಲ್ಕು ಬೋಟ್ಗಳಿಗೂ ಕೂಡಾ ಬೆಂಕಿ ತಗುಲಿದೆ. ಒಟ್ಟು ಹನ್ನೊಂದು ಬೋಟ್ಗಳು ಹಾನಿಯಾಗಿದೆ. ಮೀನುಗಾರರ ಕಣ್ಮುಂದೆ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ.
ವಿಷಯತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು. ಪಟಾಕಿ ಸಿಡಿದು ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಬೆಂಕಿ ಅವಘಡದ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಭೇಟಿಕೊಟ್ಟ ಕರಾವಳಿ ಕಾವಲು ಪಡೆ ಸಿಬ್ಬಂದಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಮೀನುಗಾರಿಕಾ ಸಚಿವರು ಭೇಟಿ : ಘಟನಾ ಸ್ಥಳಕ್ಕೆ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಭೇಟಿ ನೀಡಿ, ಮಾಹಿತಿ ಪಡೆದರು. ಅವಘಡದಿಂದ ನಷ್ಟ ಅನುಭವಿಸಿದ ಮೀನುಗಾರರಿಗೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಲಾಗುವುದು. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಬಳಿ ಪ್ರಸ್ತಾವನೆ ಮಾಡಿದ್ದೇನೆ. ಮೀನುಗಾರರ ಕಷ್ಟ ನನಗೂ ಗೊತ್ತಿದೆ ಎಂದರು.
ಇದನ್ನೂ ಓದಿ: ಗ್ಯಾರೇಜ್ನಲ್ಲಿ ಭೀಕರ ಅಗ್ನಿ ಅವಘಡ: ನಾಲ್ಕುದಿನದ ಮಗು, ಮಹಿಳೆ ಸೇರಿ 9 ಜನ ಸಜೀವದಹನ