ಸ್ವಾತಂತ್ರ್ಯ ಅಮೃತ ಮಹೋತ್ಸವ.. ಬಳ್ಳಾರಿಯಲ್ಲಿ ತಿರಂಗಾ ಹಿಡಿದು ಜಯಘೋಷ ಕೂಗಿದ ಸಾವಿರಾರು ಮಂದಿ - Har Ghar Tiranga

🎬 Watch Now: Feature Video

thumbnail

By

Published : Aug 13, 2022, 12:52 PM IST

Updated : Feb 3, 2023, 8:26 PM IST

ಬಳ್ಳಾರಿ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬಳ್ಳಾರಿಯ ಎಚ್.ಆರ್.ಗವಿಯಪ್ಪ ವೃತ್ತದಲ್ಲಿರುವ 150 ಅಡಿ ಎತ್ತರದ ಬೃಹತ್ ಧ್ವಜಸ್ತಂಭದ ಸುತ್ತ ಸಾವಿರಾರು ಜನರು ತಿರಂಗಾ ಧ್ವಜ ಹಿಡಿದು ಜಯಘೋಷ ಕೂಗಿದರು. ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಧ್ವಜಾರೋಹಣ ನೆರವೇರಿಸಿದರು. ನಗರದ ವಿವಿಧ ಶಾಲಾ - ಕಾಲೇಜುಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕೈಯಲ್ಲಿ ಧ್ವಜ ಹಿಡಿದು ವಂದೇ ಮಾತರಂ ಎಂದು ಘೋಷಣೆ ಕೂಗುತ್ತಾ, ದೇಶ ಭಕ್ತಿಗೀತೆಗಳನ್ನು ಹಾಡುತ್ತಾ ತಂಡೋಪ ತಂಡವಾಗಿ ಗವಿಯಪ್ಪ ವೃತ್ತದಲ್ಲಿ ಜಮಾವಣೆಗೊಂಡರು. ಧ್ವಜಾರೋಹಣದಲ್ಲಿ ಶಾಸಕರು, ಡಿಸಿ,ಎಸ್​ಪಿ ಸೇರಿದಂತೆ ಜಿಲ್ಲಾ ಮಟ್ಟದ ಆಧಿಕಾಗಳು ಉಪಸ್ಥಿತರಿದ್ದರು.
Last Updated : Feb 3, 2023, 8:26 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.