ಬೀದಿಬದಿ ನಿಂಬು ಜ್ಯೂಸ್ ಕುಡಿದ ಆಸ್ಟ್ರೇಲಿಯಾದ ಉಪ ಪ್ರಧಾನಿ, ಯುಪಿಐ ಮೂಲಕ ಬಿಲ್ ಪೇ- ವಿಡಿಯೋ - ಈಟಿವಿ ಭಾರತ ಕನ್ನಡ ನ್ಯೂಸ್
🎬 Watch Now: Feature Video
Published : Nov 20, 2023, 5:39 PM IST
ನವದೆಹಲಿ : ಭಾರತ ಮತ್ತು ಆಸ್ಟ್ರೇಲಿಯಾದ ನಡುವಿನ ವಿಶ್ವಕಪ್ 2023 ಫೈನಲ್ ಪಂದ್ಯ ವೀಕ್ಷಣೆಗಾಗಿ ಭಾರತಕ್ಕೆ ಬಂದಿದ್ದ ಆಸ್ಟ್ರೇಲಿಯಾದ ಉಪ ಪ್ರಧಾನಮಂತ್ರಿ ರಿಚರ್ಡ್ ಮಾರ್ಲ್ಸ್ ಅವರು ಇಂದು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ನಗರದ ಪ್ರಸಿದ್ಧ ಆಹಾರ ಮಳಿಗೆಗಳಿಗೆ ಭೇಟಿ ನೀಡಿದ್ದ ರಿಚರ್ಡ್ ಮಾರ್ಲ್ಸ್ ಅವರು ಲಡ್ಡು ಸೇರಿದಂತೆ ಇತರೆ ತಿಂಡಿಗಳನ್ನು ಸವಿದಿದ್ದಾರೆ.
ಅಲ್ಲದೆ, ರಸ್ತೆ ಬದಿ ತಳ್ಳುವ ಗಾಡಿಯಲ್ಲಿ ಮಾರುವ ನಿಂಬು ಪಾನೀಯ ಕುಡಿದು ರುಚಿಗೆ ಮಾರ್ಲ್ಸ್ ಮನಸೋತಿದ್ದಾರೆ. ಕೊನೆಯಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಅಂಗಡಿ ಮಾಲೀಕರಿಗೆ ಯುಪಿಐ ಮೂಲಕ ಬಿಲ್ ಪೇ ಮಾಡಿದ್ದಾರೆ. ಜೊತೆಗೆ ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೆಲಕಾಲ ಕ್ರಿಕೆಟ್ ಆಡಿ ಸಮಯ ಕಳೆದಿದ್ದು, ವಿರಾಟ್ ಕೊಹ್ಲಿ ಕ್ರಿಕೆಟ್ ಅಕಾಡೆಮಿಗೆ ಭೇಟಿ ಕೊಟ್ಟಿದ್ದಾರೆ.
ಇದಕ್ಕೂ ಮುನ್ನ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಿಚರ್ಡ್ ಮಾರ್ಲ್ಸ್ ಅವರು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸಿದರು. ಬಳಿಕ ವಿಜಯಶಾಲಿಯಾದ ಆಸ್ಟ್ರೇಲಿಯಾ ತಂಡಕ್ಕೆ ಟ್ರೋಫಿ ವಿತರಿಸಿದ್ದರು.
ಇದನ್ನೂ ಓದಿ : ಬೆಳಗಾವಿ: ಇಂಡಿಯಾ ಆಸ್ಟ್ರೇಲಿಯಾ ಫೈನಲ್ ಮ್ಯಾಚ್, ಎಲ್ಇಡಿ ಪರದೆ ಮೇಲೆ ವೀಕ್ಷಿಸಲು ಮುಗಿಬಿದ್ದ ಜನ