ಅಯೋಧ್ಯೆಯ ಹನುಮಾನ್ ದೇವಸ್ಥಾನದಲ್ಲಿ ಸೂಪರ್ಸ್ಟಾರ್ ರಜನಿಕಾಂತ್ ಪ್ರಾರ್ಥನೆ: ವಿಡಿಯೋ - ಹನುಮಾನ್ ಗರ್ಹಿಗೆ ರಜನಿಕಾಂತ್ ಭೇಟಿ
🎬 Watch Now: Feature Video
ಜೈಲರ್ ಯಶಸ್ಸಿನ ಖುಷಿಯಲ್ಲಿರುವ ಸೂಪರ್ ಸ್ಟಾರ್ ರಜನಿಕಾಂತ್ ಇಂದು ಶ್ರೀರಾಮ ಜನ್ಮಭೂಮಿ ಅಯೋಧ್ಯೆಗೆ ಭೇಟಿ ಕೊಟ್ಟಿದ್ದಾರೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿಯಾದ ನಂತರ ಇಂದು ಅಯೋಧ್ಯೆ ತಲುಪಿದ್ದಾರೆ. ಪತ್ನಿ ಲತಾ ಅವರು ರಜನಿಗೆ ಸಾಥ್ ನೀಡಿದ್ದಾರೆ. ರಜನಿ ದಂಪತಿ ಅಯೋಧ್ಯೆಯ ಮಧ್ಯಭಾಗದಲ್ಲಿರುವ 10ನೇ ಶತಮಾನದ ಹನುಮಾನ್ ಗರ್ಹಿಯಲ್ಲಿ (Hanuman Garhi) ಪ್ರಾರ್ಥನೆ ಸಲ್ಲಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ವಿಡಿಯೋದಲ್ಲಿ, ರಜನಿಕಾಂತ್ ಮತ್ತು ಲತಾ ದಂಪತಿ ಹನುಮಾನ್ ಗರ್ಹಿಯಲ್ಲಿ ಜನಸಮೂಹದ ನಡುವೆ ಆಶೀರ್ವಾದ ಪಡೆಯುತ್ತಿದ್ದಾರೆ. ಹನುಮಾನ್ ಗರ್ಹಿ ಬಳಿಕ ರಾಮ ಮಂದಿರದ ರಾಮ್ ಲಲ್ಲಾಗೆ ನಮನ ಸಲ್ಲಿಸಲಿದ್ದಾರೆ.
ಇಂದು ಲಕ್ನೋದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದ ರಜನಿಕಾಂತ್, ಶನಿವಾರದಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರನ್ನು ಭೇಟಿ ಮಾಡಿದ್ದರು. ಶುಕ್ರವಾರ ಲಕ್ನೋದ ಥಿಯೇಟರ್ನಲ್ಲಿ ಆಯೋಜನೆಗೊಂಡಿದ್ದ ಜೈಲರ್ ಸ್ಪೆಶಲ್ ಸ್ಕ್ರೀನಿಂಗ್ನಲ್ಲಿ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಸೇರಿದಂತೆ ಗಣ್ಯರೊಂದಿಗೆ ಭಾಗಿಯಾಗಿದ್ದರು.
ಇದನ್ನೂ ಓದಿ: ಅಖಿಲೇಶ್ ಯಾದವ್ ಅಪ್ಪಿಕೊಂಡ ರಜನಿಕಾಂತ್: ಭೇಟಿ ಬಗ್ಗೆ 'ತಲೈವಾ' ಹೇಳಿದ್ದೇನು?