'ಮೆ ಶಾಯರ್ ತೋ ನಹಿ, ಮಗರ್ ಯೇ ಹಸಿ..': ಅಪ್ಪು ನೆಚ್ಚಿನ ಹಾಡು ಹಾಡಿದ ಶಿವಣ್ಣ - ಪುನೀತ್ಗಾಗಿ ಹಾಡಿದ ಶಿವರಾಜ್ಕುಮಾರ್
🎬 Watch Now: Feature Video
ಅರಮನೆ ಮೈದಾನದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಟ ದಿ. ಪುನೀತ್ ರಾಜ್ಕುಮಾರ್ ಅವರಿಗೆ 'ಪುನೀತ್ ನಮನ' ಹೆಸರಿನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ತಮ್ಮನನ್ನು ನೆನೆದು ಭಾವುಕರಾದ ಶಿವಣ್ಣ, ಅಪ್ಪು ಜೊತೆಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು. ನಾವು ಪಾರ್ಟಿ ಮಾಡುವಾಗ ಹಾಗೆಯೇ ಅಪ್ಪು ಮನೆಗೆ ಬಂದಾಗೆಲ್ಲಾ ಕರೋಕೆ ಆಡ್ತಿದ್ವಿ, ಅದ್ರಲ್ಲಿ ಹಿಂದಿಯ ಬಾಬಿ (Bobby)ಚಿತ್ರದ 'ಮೆ ಶಾಯರ್ ತೋ ನಹಿ, ಮಗರ್ ಯೇ ಹಸಿ' ಹಿಂದಿ ಹಾಡಂತೂ ಅವನಿಗೆ ಬಹಳ ಇಷ್ಟ, ಅವನಿಗಾಗಿ ಈ ಹಾಡನ್ನು ಹಾಡ್ತೇನೆ ಎಂದು ಶಿವರಾಜ್ಕುಮಾರ್ ಪ್ರೀತಿಯ ತಮ್ಮನ ನೆಚ್ಚಿನ ಹಾಡನ್ನು ವೇದಿಕೆಯಲ್ಲಿ ಹಾಡಿದರು. ಶಿವಣ್ಣನ ಮಾತುಗಳು ಹಾಗೂ ಹಾಡು ಕೇಳಿ ನೆರೆದಿದ್ದವರ ಕಣ್ಣಾಲಿಗಳು ತುಂಬಿಬಂದವು.