ಕೌನ್ ಬನೇಗಾ ಕರೋಡ್ಪತಿಯಲ್ಲಿ ಮಿಂಚಿದ ರವಿ: ಗೆದ್ದ ಹಣ ಬಡ ಮಕ್ಕಳ ಆರೋಗ್ಯ ಚಿಕಿತ್ಸೆಗೆ ಮೀಸಲಿಟ್ಟ ಹೃದಯವಂತ - kaun banega crorepati
🎬 Watch Now: Feature Video
ಉಡುಪಿ: ಕೌನ್ ಬನೇಗಾ ಕರೋಡ್ಪತಿಯಲ್ಲಿ ಹಳ್ಳಿ ಹೈದ ರವಿ ಕಟಪಾಡಿ ತಾವು ಗೆದ್ದ 12.5 ಲಕ್ಷ ರೂ. ಹಣವನ್ನು ಬಡ ಮಕ್ಕಳ ಆರೋಗ್ಯಕ್ಕೆ ಮೀಸಲಿಟ್ಟು ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಅಷ್ಟಮಿಯಲ್ಲಿ ವೇಷ ಹಾಕಿ ಬಂದ ಹಣವನ್ನು ಹತ್ತಾರು ಬಡ ಮಕ್ಕಳ ಆರೋಗ್ಯ ಚಿಕಿತ್ಸೆಗೆ ನೀಡಿ ರವಿ ಬಡವರ ಪಾಲಿನ ದೇವರು ಅನ್ನಿಸಿಕೊಂಡಿದ್ದರು. ವರ್ಷಂಪ್ರತಿ ಅಷ್ಟಮಿಯಲ್ಲಿ ಡ್ರ್ಯಾಗನ್ ತರದ ಹಾಲಿವುಡ್ ಮಾದರಿಯ ವೇಷ ಹಾಕಿ ಗಮನ ಸೆಳೆದು ಬಂದ ಸಹಾಯಧನವನ್ನು ಕ್ಯಾನ್ಸರ್, ಹೃದಯ ಕಾಯಿಲೆ ಪೀಡಿತರಾದ ಮಕ್ಕಳಿಗೆ ಸಹಾಯ ಮಾಡಿ ಭೇಷ್ ಅನ್ನಿಸಿಕೊಂಡಿದ್ದರು. ಇದೇ ಕೆಲಸ ರವಿಯವರನ್ನು ಕೆಬಿಸಿ ಸೆಲೆಬ್ರಿಟಿ ಆಗುವಂತೆ ಮಾಡಿತ್ತು. ಇದೀಗ ರವಿ ಬಾಲಿವುಡ್ ಬಾದಶಾ ಅಮಿತಾಬ್ ಜೊತೆ ಹಾಟ್ ಸೀಟ್ನಲ್ಲಿ ಕೂತು ಖ್ಯಾತ ನಟ ಅನುಪಮ್ ಖೇರ್ ಸಹಾಯ ಪಡೆದು 12.5 ಲಕ್ಷ ರೂ. ಜಯಿಸಿದ್ದಾರೆ. ಈ ಕುರಿತ ಚಿಟ್ ಚಾಟ್ ಇಲ್ಲಿದೆ ನೋಡಿ...
Last Updated : Jul 7, 2021, 5:44 PM IST