ಲಾಕ್ಡೌನ್ ಆದೇಶ: ರಸ್ತೆಗೆ ಮುಳ್ಳಿನ ಬೇಲಿ ಹಾಕಿದ ಯುವಕರು - Koppalla villagers who put up a fence on the road
🎬 Watch Now: Feature Video

ಕೊರೊನಾ ಭೀತಿ ಹಿನ್ನಲೆಯಲ್ಲಿ ಬೇರೆ ಊರಿನಿಂದ ಜನರು ತಮ್ಮ ಗ್ರಾಮಕ್ಕೆ ಬರದಂತೆ ತಡೆಯಲು ಕೊಪ್ಪಳ ಜಿಲ್ಲೆಯ ಕುಣಕೇರಿ ಗ್ರಾಮದ ರಸ್ತೆಗೆ ಮುಳ್ಳುಬೇಲಿ ಹಾಕಲಾಗಿದೆ. ಮುಂಜಾಗ್ರತ ಕ್ರಮವಾಗಿ ಯುವಕರೆಲ್ಲ ಒಂದೆಡೆ ಸೇರಿ ಗ್ರಾಮದ ಎರಡು ರಸ್ತೆಗಳಿಗೆ ಮುಳ್ಳು ಬೇಲಿ ಹಾಕಿದ್ದಾರೆ. ಈ ಗ್ರಾಮದೊಳಗೆ ಅನ್ಯರ ಪ್ರವೇಶಕ್ಕೆ ನಿಷೇಧ ಹೇರಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಮತ್ತು ಸಿಎಂ ಯಡಿಯೂರಪ್ಪ ಅವರ ಆದೇಶವನ್ನು ಪಾಲಿಸುತ್ತಿರುವುದಾಗಿ ಯುವಕರು ತಿಳಿಸಿದ್ದಾರೆ.