ಬೆಳಗಾವಿಯಲ್ಲಿ ವೈಭವದ ಗಣಪತಿ ನಿಮಜ್ಜನ - ಶಾಸಕ ಅಭಯ್ ಪಾಟೀಲ್
🎬 Watch Now: Feature Video
ಬೆಳಗಾವಿ: ಕುಂದಾನಗರಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯುವ ಗಣೇಶ ನಿಮಜ್ಜನಕ್ಕೆ ಸಾಯಂಕಾಲ ಚಾಲನೆ ನೀಡಲಾಗಿದ್ದು, ನಾಳೆ ಬೆಳಗಿನವರೆಗೂ ಗಣೇಶ ನಿಮಜ್ಜನ ಮೆರವಣಿಗೆ ನಡೆಯಲಿದೆ.ಇಂದು ನಗರದ ಹುತಾತ್ಮ ಚೌಕ್ ನಲ್ಲಿ ಸಾರ್ವಜನಿಕ ಗಣೇಶ ನಿಮಜ್ಜನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಿಲ್ಲೆಯ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್, ಉತ್ತರ ಶಾಸಕ ಅನೀಲ್ ಬೆನಕೆ ಹಾಗೂ ಬೆಳಗಾವಿ ನಗರ ಪೊಲೀಸ್ ಆಯುಕ್ತ ಬಿ. ಎಸ್ ಲೋಕೇಶ್ ಕುಮಾರ್, ಡಿಎಸ್ಪಿ, ಶಿಮಾ ಲಾಟ್ಕರ್ ಗಣೇಶ ಮೂರ್ತಿಗೆ ಪೂಜೆ ನೆರವೇರಿಸಿದರು.