ETV Bharat / bharat

GRAP 4 ಜಾರಿ ಹೊರತಾಗಿಯೂ ದೆಹಲಿಯ ಗಾಳಿಯ ಗುಣಮಟ್ಟದಲ್ಲಿ ಆಗದ ಸುಧಾರಣೆ: 409 AQI ದಾಖಲು! - DELHI AIR QUALITY

ದೆಹಲಿಯ ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಅಪಾಯಕಾರಿಯಾಗುತ್ತಿದೆ. ನಿನ್ನೆ ರಾಜಧಾನಿಯಲ್ಲಿ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 409ಕ್ಕೆ ತಲುಪಿದೆ.

GRAP 4  AIR QUALITY INDEX  SEVERE CATEGORY  AQI LEVELS
GRAP 4 ಜಾರಿ ಹೊರತಾಗಿಯೂ ದೆಹಲಿಯ ಗಾಳಿಯ ಗುಣಮಟ್ಟವು ತೀವ್ರ ಕಳಪೆ 409 ರಲ್ಲಿ ದಾಖಲು! (ಸಂಗ್ರಹ ಚಿತ್ರ)
author img

By PTI

Published : Dec 23, 2024, 7:58 AM IST

ನವದೆಹಲಿ: ದೆಹಲಿಯ ಗಾಳಿಯ ಗುಣಮಟ್ಟ ಭಾನುವಾರ ಮತ್ತೆ ಹದಗೆಟ್ಟಿದೆ. 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಸಂಜೆ 4 ಗಂಟೆಗೆ 409ಕ್ಕೆ ತಲುಪಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಅಂಕಿ- ಅಂಶಗಳು ತಿಳಿಸಿವೆ. ಶನಿವಾರ AQI 370 'ಅತ್ಯಂತ ಕಳಪೆ' ವಿಭಾಗದಲ್ಲಿ ದಾಖಲಾಯಿತು.

ಉತ್ತಮ ಉಸಿರಾಟಕ್ಕೆ ಎಷ್ಟಿರಬೇಕು AQI?: ಸೊನ್ನೆ ಮತ್ತು 50ರ ನಡುವಿನ AQI ಅನ್ನು 'ಉತ್ತಮ', 51 ಮತ್ತು 100 'ತೃಪ್ತಿದಾಯಕ', 101 ಮತ್ತು 200 'ಮಧ್ಯಮ', 201 ಮತ್ತು 300 'ಕಳಪೆ', 301 ಮತ್ತು 400 'ಅತ್ಯಂತ ಕಳಪೆ' ಮತ್ತು 401 ಮತ್ತು 500 ನಡುವಿನ AQI ಅನ್ನು 'ತೀವ್ರ' ಎಂದು ಪರಿಗಣಿಸಲಾಗುತ್ತದೆ. ಭಾನುವಾರದಂದು ರಾಜಧಾನಿಯು ಅಪಾಯಕಾರಿ ಮಟ್ಟದ PM2.5 ಅನ್ನು ಅನುಭವಿಸಿದೆ. ಕೆಲವು ಪ್ರದೇಶಗಳಲ್ಲಿ AQI ಮಟ್ಟಗಳು 474 ರಷ್ಟು ಹೆಚ್ಚಿವೆ.

ವಿಷಕಾರಿ ಗಾಳಿ ಏನೆಲ್ಲಾ ಸಮಸ್ಯೆ ತಂದೊಡ್ಡುತ್ತದೆ?; ಇನ್ನು ವಿಷಕಾರಿ ಗಾಳಿಯಲ್ಲಿರುವ 2.5 ಮೈಕ್ರೊಮೀಟರ್ ಅಥವಾ ಚಿಕ್ಕದಾದ ವ್ಯಾಸದ PM2.5 ಕಣಗಳು ಶ್ವಾಸಕೋಶದೊಳಗೆ ಆಳವಾಗಿ ತೂರಿಕೊಳ್ಳಬಹುದು. ಇದು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ ನಿಂದ ಆಗಲಿಲ್ಲವೇ ಪ್ರಯೋಜನ:

ದೆಹಲಿಯು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP)ಯ 4ನೇ ಹಂತದ ಅಡಿ ಇದ್ದು, ಇದು ನಿರ್ಮಾಣ ಚಟುವಟಿಕೆಗಳ ಸಂಪೂರ್ಣ ನಿಷೇಧ ಮತ್ತು ನಗರವನ್ನು ಪ್ರವೇಶಿಸುವ ಅನಿವಾರ್ಯವಲ್ಲದ ಮಾಲಿನ್ಯಕಾರಕ ಟ್ರಕ್‌ಗಳ ಮೇಲಿನ ನಿರ್ಬಂಧಗಳಂತಹ ಕಠಿಣವಾದ ಮಾಲಿನ್ಯ - ವಿರೋಧಿ ಕ್ರಮಗಳನ್ನು ಒಳಗೊಂಡಿದೆ.

ದೆಹಲಿಯಲ್ಲಿ ಥರಗುಟ್ಟುವ ಚಳಿ: ಇದರ ಮಧ್ಯೆ, ಹವಾಮಾನ ಕಚೇರಿಯು ಸೋಮವಾರ ಮೋಡ ಕವಿದ ವಾತಾವರಣದ ಮುನ್ಸೂಚನೆ ನೀಡಿದೆ, ತಾಪಮಾನವು ಗರಿಷ್ಠ 20 ಡಿಗ್ರಿ ಸೆಲ್ಸಿಯಸ್‌ನಿಂದ ಕನಿಷ್ಠ 7 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇನ್ನು ಜನ ತೀವ್ರ ಚಳಿಯಿಂದಾಗಿ ಭಾರಿ ಸಂಕಷ್ಟ ಎದುರಿಸುತ್ತಿದ್ದಾರೆ. ಚಳಿಯ ಹೊಡೆತದಿಂದ ತಪ್ಪಿಸಿಕೊಳ್ಳಲು ಬೆಂಕಿಯ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ 1,445 ಚದರ ಕಿ.ಮೀ ಅರಣ್ಯ ಹೆಚ್ಚಳ; 10 ವರ್ಷದಲ್ಲಿ ಪಶ್ಚಿಮ ಘಟ್ಟದ 58.22 ಚದರ ಕಿ.ಮೀ ಅರಣ್ಯ ನಷ್ಟ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.