Bypass Charging: ಗೂಗಲ್ ಡಿಸೆಂಬರ್ 2024ರ ಇತ್ತೀಚಿನ ಪಿಕ್ಸೆಲ್ ಡ್ರಾಪ್ ಸಾಫ್ಟ್‌ವೇರ್ ಅಪ್‌ಡೇಟ್‌ನೊಂದಿಗೆ ತನ್ನ ಪಿಕ್ಸೆಲ್ ಸೀರಿಸ್ನ ಸ್ಮಾರ್ಟ್‌ಫೋನ್‌ಗಳಿಗೆ ಹೊಸ ಚಾರ್ಜಿಂಗ್ ತಂತ್ರ ಪರಿಚಯಿಸಿದೆ. ಬೈಪಾಸ್ ಚಾರ್ಜಿಂಗ್ ಎಂಬ ವೈಶಿಷ್ಟ್ಯವು ಉನ್ನತ - ಮಟ್ಟದ ಗೇಮಿಂಗ್-ಸೆಂಟ್ರಿಕ್ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರುವ ಹೊಸ ವೈಶಿಷ್ಟ್ಯವಾಗಿದೆ.
ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದಾಗ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿಯಿಂದ ಪವರ್ ಪಡೆಯುವ ಬದಲು ನೇರವಾಗಿ ಪವರ್ ಅಡಾಪ್ಟರ್‌ನಿಂದ ಶಕ್ತಿಯನ್ನು ಪಡೆಯುತ್ತದೆ. ಇದು ಎರಡು ಕೆಲಸಗಳನ್ನು ನಿವರ್ಹಿಸುತ್ತದೆ. ಮೊದಲನೆಯದು ವಿಶೇಷವಾಗಿ ಸೂಪರ್-ಫಾಸ್ಟ್ ಚಾರ್ಜಿಂಗ್ ಹೊಂದಿರುವ ಉನ್ನತ-ಮಟ್ಟದ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಬಿಸಿಯಾಗುವುದನ್ನು ತಡೆಯುತ್ತದೆ. ಅಷ್ಟೇ ಅಲ್ಲ ಗೇಮಿಂಗ್ ಅವಧಿಗಳಲ್ಲಿ ಫೋನ್ ತಂಪಾಗಿರಲು ಸಹಾಯ ಮಾಡುತ್ತದೆ.
ಸಾಮಾನ್ಯವಾಗಿ ನೀವು ಸ್ಮಾರ್ಟ್‌ಫೋನ್ ಚಾರ್ಜ್ ಆಗುತ್ತಿರುವಾಗ ಅದನ್ನು ಬಳಸುವಾಗ ಮೊದಲು ವಿದ್ಯುತ್ ಬ್ಯಾಟರಿಗೆ ಹೋಗುತ್ತದೆ. ನಂತರ ಪ್ರೊಸೆಸರ್ ಮತ್ತು ಡಿಸ್ಪ್ಲೇಯಂತಹ ವಿವಿಧ ಯುನಿಟ್ಗಳಿಗೆ ಪ್ರವರಿಸುತ್ತದೆ. ಬೈಪಾಸ್ ಚಾರ್ಜಿಂಗ್ ಮೋಡ್‌ನಲ್ಲಿ ಇದು ಲ್ಯಾಪ್‌ಟಾಪ್‌ಗಿಂತ ಡೆಸ್ಕ್‌ಟಾಪ್ ಪಿಸಿಯನ್ನು ಬಳಸುವಂತಿದೆ. ಅಲ್ಲಿ ಅಗತ್ಯವಿರುವ ಪವರ್ ಅನ್ನು ನೇರವಾಗಿ ಅಡಾಪ್ಟರ್‌ನಿಂದ ಪಡೆಯುತ್ತದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ದಲ್ಲಿಲ್ಲ ಯಾವುದೇ ನಿರ್ಬಂಧ; ಬ್ರ್ಯಾಂಡ್ ಅನ್ನು ಅವಲಂಬಿಸಿ ಬೈಪಾಸ್ ಚಾರ್ಜಿಂಗ್ ಅನುಷ್ಠಾನವು ಬದಲಾಗುತ್ತದೆ. ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಸಾಧನವು ಶೇಕಡಾ 80 ರಷ್ಟು ಚಾರ್ಜ್ ಆದ ನಂತರ ಮಾತ್ರ ಬೈಪಾಸ್ ಚಾರ್ಜಿಂಗ್ ಅನ್ನು ಸಕ್ರಿಯಗೊಳಿಸಬಹುದು. ಆದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾದಲ್ಲಿ ಅಂತಹ ಯಾವುದೇ ನಿರ್ಬಂಧಗಳಿಲ್ಲ. ವಿಡಿಯೋ ಗೇಮ್ ಆಡುವಾಗ ಮಾತ್ರ ಇದನ್ನು ಸಕ್ರಿಯಗೊಳಿಸಬಹುದು. ಐಕ್ಯೂಒಒ 13 ನಲ್ಲಿರುವ ಅದೇ ವೈಶಿಷ್ಟ್ಯವನ್ನು ಡೈರೆಕ್ಟ್ ಡ್ರೈವ್ ಪವರ್ ಸಪ್ಲೈ ಎಂದು ಕರೆಯಲಾಗುತ್ತದೆ. ಇದನ್ನು ಸಹ ವಿಡಿಯೋ ಗೇಮ್ ಆಡುವಾಗ ಮಾತ್ರ ಆಕ್ಟಿವೇಟ್ ಮಾಡಿಕೊಳ್ಳಬಹುದು.
ಬೈಪಾಸ್ ಚಾರ್ಜಿಂಗ್ ಫೀಚರ್: ಸ್ಯಾಮ್‌ಸಂಗ್, ಗೂಗಲ್, ಆಸುಸ್, ಐಕ್ಯೂಒ, ಇನ್ಫಿನಿಕ್ಸ್ ಮತ್ತು ಸೋನಿಯ ಆಯ್ದ ಮಾದರಿಗಳು ಬೈಪಾಸ್ ಚಾರ್ಜಿಂಗ್ ಫೀಚರ್ ಅನ್ನು ಒಳಗೊಂಡಿದೆ. ಬೈಪಾಸ್ ಚಾರ್ಜಿಂಗ್ ವೈಶಿಷ್ಟ್ಯವು ಎಲ್ಲರಿಗೂ ಉದ್ದೇಶಿಸಿಲ್ಲದಿದ್ದರೂ ಸಹ ಅದು ಖಂಡಿತವಾಗಿಯೂ ತನ್ನದೇ ಆದ ಪ್ರೇಕ್ಷಕರನ್ನು ಹೊಂದಿದೆ. ಅದರಲ್ಲಿಯೂ ವಿಶೇಷವಾಗಿ ಗೇಮರುಗಳಿಗಾಗಿ ಇದು ಉಪಯುಕ್ತವಾಗಿದೆ.
ಬೈಪಾಸ್ ಚಾರ್ಜಿಂಗ್‌ನ ಉಪಯೋಗವೇನು?: ಗಂಟೆಗಟ್ಟಲೆ ಸ್ಮಾರ್ಟ್‌ಫೋನ್‌ಗಳಲ್ಲಿ ವಿಡಿಯೋ ಗೇಮ್‌ಗಳನ್ನು ಆಡುವವರಿಗೆ ಬೈಪಾಸ್ ಚಾರ್ಜಿಂಗ್ ಬಹಳ ಸಹಾಯಕವಾಗಿದೆ. ಅಲ್ಲಿ ಇದು ತಾಪನವನ್ನು ಕಡಿಮೆ ಮಾಡುವುದಲ್ಲದೇ ಗರಿಷ್ಠ ಕಾರ್ಯಕ್ಷಮತೆ ಉಳಿಸಿಕೊಳ್ಳುವಂತೆ ಮಾಡುತ್ತದೆ.
ಸ್ಮಾರ್ಟ್‌ಫೋನ್‌ಗಳಲ್ಲಿ ನಿರಂತರ ಗೇಮಿಂಗ್ ಆಡುವುದರಿಂದ ಸಾಧನ ಹೀಟ್ ಆಗುವುದು ಸಾಮಾನ್ಯ. ಈ ವೇಳೆ ಚಾರ್ಜಿಂಗ್ ಸಹ ಫೋನ್ ಬಿಸಿಯಾಗುವಂತೆ ಮಾಡುತ್ತದೆ. ಆದ್ದರಿಂದ ಚಾರ್ಜ್ ಮಾಡುವಾಗ ಗೇಮಿಂಗ್ ಆಡುವುದು ಮತ್ತು ಫೋನ್ ಬಳಸುವುದು ಅಪಾಯ. ಇದು ಕಾರ್ಯಕ್ಷಮತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಬೈಪಾಸ್ ಚಾರ್ಜಿಂಗ್‌ನ ಸಂದರ್ಭದಲ್ಲಿ ವಿದ್ಯುತ್ ಅನ್ನು ನೇರವಾಗಿ ಸಂಬಂಧ ಪಟ್ಟ ಯುನಿಟ್ಗೆ ಸರಬರಾಜು ಆಗುತ್ತದೆ. ಇದರಿಂದ ಬ್ಯಾಟರಿ ಬಿಸಿಯಾಗುವುದನ್ನು ತಡೆಯುತ್ತದೆ. ಹೆಚ್ಚಿನ ಫೋನ್‌ಗಳಲ್ಲಿ ಬೈಪಾಸ್ ಚಾರ್ಜಿಂಗ್ ಅನ್ನು ಪ್ರತಿ ಬಾರಿಯೂ ಸಕ್ರಿಯಗೊಳಿಸಬೇಕಾಗುತ್ತದೆ. ಇದು ನೀವು ಆಡುವ ಪ್ರತಿ ಬಾರಿ ಇದನ್ನು ಬಳಸುವುದು ಸ್ವಲ್ಪ ಕಿರಿಕಿರಿ ಉಂಟುಮಾಡುತ್ತದೆ.