ETV Bharat / technology

ಜನರ ಮನ ಗೆದ್ದ ಇವಿ: ಚಾರ್ಜಿಂಗ್​ ಸ್ಟೇಷನ್​ ಅಳವಡಿಕೆಯಲ್ಲಿ ಕರ್ನಾಟಕವೇ ನಂಬರ್​ 1! - EV CHARGING STATION

EV Charging Station: ಈಗ ವಾಹನ ಪ್ರಿಯರ ಕಣ್ಣುಗಳು ಇವಿಗಳ ಮೇಲೆ ಇದೆ. ಇದರಿಂದ ಸರ್ಕಾರ ದೇಶದಲ್ಲಿ ಚಾರ್ಜಿಂಗ್​ ಸ್ಟೇಷನ್​ಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದು, ಕರ್ನಾಟಕವೇ ನಂಬರ್​ ಒನ್​ ಸ್ಥಾನದಲ್ಲಿದೆ.

KARNATAKA NUMBER ONE  ELECTRICAL VEHICLE REPORT  CENTRAL GOVERNMENT ON EV CHARGING  EV CHARGING STATION LIST
ಚಾರ್ಜಿಂಗ್​ ಸ್ಟೇಷನ್ (IANS)
author img

By ETV Bharat Tech Team

Published : 5 hours ago

EV Charging Station: ಈಗ ಎಲ್ಲರ ಕಣ್ಣು ಎಲೆಕ್ಟ್ರಿಕ್​ ವಾಹನಗಳ ಮೇಲೆ ಬಿದ್ದಿದೆ. ಸಾರ್ವಜನಿಕರನ್ನು ಎಲೆಕ್ಟ್ರಿಕ್ ವಾಹನಗಳತ್ತ ಆಕರ್ಷಿಸಲು ಸರ್ಕಾರವು ಅನೇಕ ಪ್ರಯತ್ನಗಳನ್ನು ಮಾಡುತ್ತಿರುವುದು ಗೊತ್ತಿರುವ ಸಂಗತಿ. ಈ ಪ್ರಯತ್ನದಲ್ಲಿ, ದೇಶಾದ್ಯಂತ ಸಾರ್ವಜನಿಕ ಇವಿ ಚಾರ್ಜರ್‌ಗಳ ಸಂಖ್ಯೆಯು ಈಗ 25,000 ಕ್ಕಿಂತ ಹೆಚ್ಚಿದೆ. ಇದರಲ್ಲಿ ನಮ್ಮ ಕರ್ನಾಟಕ ಮತ್ತು ಮಹಾರಾಷ್ಟ್ರ ಮುಂಚೂಣಿಯಲ್ಲಿವೆ. ಶುಕ್ರವಾರ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ಈ ಮಾಹಿತಿ ನೀಡಿದೆ.

ಇವಿಗಳನ್ನು ಉತ್ತೇಜಿಸುವ ಸರ್ಕಾರದ ನೀತಿಗಳೇ ಈ ಹೆಚ್ಚಳಕ್ಕೆ ಕಾರಣ. ಇದು ಪಿಎಂ ಇ-ಡ್ರೈವ್ ಯೋಜನೆಯನ್ನು ಸಹ ಒಳಗೊಂಡಿದೆ. ಈ ಯೋಜನೆಯ ಮೂಲಕ ಚಾರ್ಜಿಂಗ್ ಮೂಲಸೌಕರ್ಯ ಬಲಪಡಿಸಲಾಗುತ್ತಿದೆ.

ಕರ್ನಾಟಕವೇ ನಂಬರ್​ ಒನ್​?: ಭಾರತದಲ್ಲಿ ಒಟ್ಟು ಸಾರ್ವಜನಿಕ ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಸಂಖ್ಯೆ 25,202 ಕ್ಕೆ ತಲುಪಿದೆ ಎಂದು ಭಾರೀ ಕೈಗಾರಿಕೆ ಮತ್ತು ಉಕ್ಕು ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸ್ ವರ್ಮಾ ರಾಜ್ಯಸಭೆಗೆ ತಿಳಿಸಿದರು. ಕರ್ನಾಟಕವು 5,765 ಚಾರ್ಜಿಂಗ್ ಸ್ಟೇಷನ್‌ಗಳ ಗರಿಷ್ಠ ಸಂಖ್ಯೆ ಹೊಂದಿದೆ. ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದ್ದು, 3,728 ಚಾರ್ಜಿಂಗ್ ಸ್ಟೇಷನ್‌ಗಳಿವೆ. ಉತ್ತರ ಪ್ರದೇಶವು 1,989 ಚಾರ್ಜಿಂಗ್ ಕೇಂದ್ರಗಳನ್ನು ಹೊಂದುವ ಮೂಲಕ ಮೂರನೇ ಸ್ಥಾನದಲ್ಲಿದೆ. ಸರ್ಕಾರವು ಇವಿಗಳನ್ನು ಅಳವಡಿಸಿಕೊಳ್ಳಲು ಜನರನ್ನು ಪ್ರೋತ್ಸಾಹಿಸುತ್ತಿದೆ ಮತ್ತು ಇದಕ್ಕಾಗಿ ಅನೇಕ ಯೋಜನೆಗಳನ್ನು ಸಹ ಕೈಗೊಂಡಿದೆ.

ಭಾರೀ ಕೈಗಾರಿಕೆಗಳ ಸಚಿವಾಲಯ (MHI) ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ. 29 ಸೆಪ್ಟೆಂಬರ್ 2024 ರಂದು, MHI ಪಿಎಂ ಇ-ಡ್ರೈವ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಪೂರ್ಣ ಹೆಸರು 'ಪ್ರಧಾನಮಂತ್ರಿ ಎಲೆಕ್ಟ್ರಿಕ್ ಡ್ರೈವ್ ಕ್ರಾಂತಿ ಇನ್ನೋವೇಟಿವ್ ವೆಹಿಕಲ್ ವರ್ಧನೆ'. ಇವಿಗಳ ಅಳವಡಿಕೆ ವೇಗಗೊಳಿಸುವುದು, ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಿಸುವುದು ಮತ್ತು ಇವಿ ಉತ್ಪಾದನಾ ಕಂಪನಿಗಳಿಗೆ ಸಹಾಯ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

2 ಸಾವಿರ ಕೋಟಿ ರೂ.: ಪ್ರಧಾನಮಂತ್ರಿ ಇ-ಡ್ರೈವ್ ಯೋಜನೆಗಾಗಿ ಎರಡು ವರ್ಷಗಳಲ್ಲಿ 10,900 ಕೋಟಿ ರೂಪಾಯಿಗಳ ಬಜೆಟ್ ಇರಿಸಲಾಗಿದೆ. ಈ ಪೈಕಿ 2000 ಕೋಟಿ ರೂ. ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳ ನಿರ್ಮಾಣಕ್ಕೆ ಮಾತ್ರ. ಸೆಪ್ಟೆಂಬರ್ 17 ರಂದು ವಿದ್ಯುತ್ ಸಚಿವಾಲಯವು ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಮೂಲಸೌಕರ್ಯ ಸ್ಥಾಪನೆ ಮತ್ತು ಕಾರ್ಯಾಚರಣೆಗಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ದೇಶಾದ್ಯಂತ ಅಂತರ್‌ಸಂಪರ್ಕಿತ ಚಾರ್ಜಿಂಗ್ ಸ್ಟೇಷನ್‌ಗಳ ಜಾಲವನ್ನು ಹೇಗೆ ರಚಿಸುವುದು ಎಂಬುದನ್ನು ಈ ಮಾರ್ಗಸೂಚಿಗಳು ವಿವರಿಸುತ್ತವೆ.

28 ಲಕ್ಷಕ್ಕೂ ಹೆಚ್ಚು ಇವಿ ದ್ವಿಚಕ್ರ ವಾಹನಗಳು ಮತ್ತು 2.5 ಲಕ್ಷಕ್ಕೂ ಹೆಚ್ಚು ಕಾರುಗಳು: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಕಾರ, ಡಿಸೆಂಬರ್ 4 ರ ಹೊತ್ತಿಗೆ ದೇಶದಲ್ಲಿ 28,55,015 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮತ್ತು 2,57,169 ಎಲೆಕ್ಟ್ರಿಕ್ ನಾಲ್ಕು-ಚಕ್ರ ವಾಹನಗಳು ನೋಂದಣಿಯಾಗಿವೆ ಎಂದು ಮಾಹಿತಿ ನೀಡಿದೆ. 2030ರ ವೇಳೆಗೆ ಭಾರತದಲ್ಲಿ ಇವಿ ಚಾರ್ಜಿಂಗ್ ಮಾರುಕಟ್ಟೆಯು 3.7 ಬಿಲಿಯನ್ ಡಾಲರ್​ ಆಗಲಿದೆ ಎಂದು ಅಂದಾಜಿಸಲಾಗಿದೆ. ಇದು ಎಲೆಕ್ಟ್ರಿಕ್ ವಾಹನಗಳ ಭವಿಷ್ಯ ಉಜ್ವಲವಾಗಿದೆ ಎಂಬುದನ್ನು ತೋರಿಸುತ್ತದೆ. ಸರ್ಕಾರದ ಯೋಜನೆಗಳು ಮತ್ತು ಹೆಚ್ಚುತ್ತಿರುವ ಚಾರ್ಜಿಂಗ್ ನೆಟ್‌ವರ್ಕ್‌ನಿಂದಾಗಿ, ಇವಿ ಅಳವಡಿಸಿಕೊಳ್ಳುವವರ ಸಂಖ್ಯೆಯೂ ವೇಗವಾಗಿ ಹೆಚ್ಚಾಗುತ್ತದೆ. ಇದು ಪರಿಸರಕ್ಕೆ ಒಳ್ಳೆಯದು ಮತ್ತು ದೇಶದ ಆರ್ಥಿಕತೆಗೂ ಒಳ್ಳೆಯದು.

ಓದಿ: ಕಿಯಾ ಕಾಂಪ್ಯಾಕ್ಟ್ ಎಸ್​ಯುವಿ 'ಸಿರೋಸ್' ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.