ರಿಲಯನ್ಸ್ ಬಲದಲ್ಲಿ 524 ಅಂಶ ಏರಿದ ಸೆನ್ಸೆಕ್ಸ್: ದೇಶಿ ಮಾರುಕಟ್ಟೆಯ ಸಂಕ್ಷಿಪ್ತ ಚಿತ್ರಣ ಇಲ್ಲಿದೆ!
🎬 Watch Now: Feature Video
ಮುಂಬೈ ಷೇರುಪೇಟೆಯ ಈಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕ ಸೆನ್ಸೆಕ್ಸ್ ಮತ್ತು ನಿಫ್ಟಿ ವಾರಾಂತ್ಯದ ವಹಿವಾಟಿನಲ್ಲಿ ಲಾಭಾಂಶದೊಂದಿಗೆ ಕೊನೆಗೊಂಡಿವೆ. ರಿಲಯನ್ಸ್ ಇಂಡಸ್ಟ್ರೀಸ್ ನಿಗದಿತ ಗುರಿಗಿಂತ ಮೊದಲೇ ನಿವ್ವಳ ಋಣಮುಕ್ತವೆಂದು ಘೋಷಿಸಿದ ಬಳಿಕ, ಷೇರು ಬೆಲೆ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿತು. ಇದರಿಂದ ದಿನದ ಅಂತ್ಯದ ವೇಳೆಗೆ ಸೆನ್ಸೆಕ್ಸ್ 524 ಅಂಕ ಮತ್ತು ನಿಫ್ಟಿ 152 ಅಂಶ ಏರಿಕೆ ಕಂಡವು.