YouTube New Feature: ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಯೂಟ್ಯೂಬ್ ತನ್ನ ಬಳಕೆದಾರರಿಗೆ ಕ್ರಿಯೇಟಿವ್ ಸ್ವಾತಂತ್ರ್ಯವನ್ನು ಹೆಚ್ಚಿಸಲು ಹೊಸ ಫೀಚರ್ ಬಗ್ಗೆ ಕೆಲಸ ಮಾಡುತ್ತಲೇ ಇರುತ್ತಿದೆ. ಈ ಕ್ರಮದಲ್ಲಿ ಕಂಪನಿ ಹೊಸದೊಂದು ಫೀಚರ್ ಹೊರ ತರಲು ಕಾರ್ಯ ನಿರ್ವಹಿಸುತ್ತಿದೆ. ಈ ಫೀಚರ್ ಮ್ಯೂಸಿಕ್ ರಿಮಿಕ್ಸ್ಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಯೂಟ್ಯೂಬ್ ಬಳಕೆದಾರರಿಗೆ ಎಐ ಟೂಲ್ ಅನ್ನು ಬಳಸಲು ಅವಕಾಶ ಕಲ್ಪಿಸುತ್ತದೆ.
ಯೂಟ್ಯೂಬ್ ಈ ಫೀಚರ್ ಅನ್ನು ಶಾರ್ಟ್ ಕ್ರಿಯೇಟರ್ಸ್ಗಾಗಿ ಹೊರತರುತ್ತದೆ. ಇದು ಎಐ ಜನರೇಟೆಡ್ 30-ಸೆಕೆಂಡ್ ಸೌಂಡ್ ಟ್ರ್ಯಾಕ್ ರಚಿಸಲು ಅನುಮತಿಸುತ್ತಿದೆ. ಕಂಪನಿಯ ಉಪಕ್ರಮವು ಅದರ ಡ್ರೀಮ್ ಟ್ರ್ಯಾಕ್ ಪ್ರೋಗ್ರಾಂ ಅನ್ನು ಆಧರಿಸಿದೆ. ಇನ್ನು ಇದು ಮ್ಯೂಸಿಕ್ ರೆಡಿ ಮಾಡುವ ಪ್ರಕ್ರಿಯೆಗೆ ಹೊಸ ರೂಪ ನೀಡಲು ಅಡ್ವಾನ್ಸ್ ಎಐಗೆ ಇಂಟಿಗ್ರೇಟ್ ಮಾಡುತ್ತದೆ.
ಮ್ಯೂಸಿಕ್ ರಿಮಿಕ್ಸ್: ಈ ಫೀಚರ್ ಸದ್ಯ ಪ್ರಾಯೋಗಿಕ ಹಂತದಲ್ಲಿದೆ. ಅಲ್ಲಿ ಕ್ರಿಯೇಟರ್ಸ್ ತಮಗೆ ಬೇಕಾದ ಹಾಡನ್ನು ಆಯ್ಕೆ ಮಾಡಬಹುದು. ಬಳಿಕ ಅವರು ಆ ಹಾಡನ್ನು ರಿಮಿಕ್ಸ್ ಮಾಡಲು ಅಥವಾ ಬದಲಾಯಿಸಲು ಎಐ ಸಹಾಯ ಪಡೆಯಬಹುದು. ಅದಕ್ಕೂ ಮುನ್ನ ನೀವು ಆ ಹಾಡನ್ನು ರಿಮಿಕ್ಸ್ ಮಾಡಲು ಟೆಕ್ಸ್ಟ್ ಆಧಾರಿತ ಪ್ರಾಂಫ್ಟ್ ಬಳಸಬೇಕು. ಆಗ ಎಐ ಈ ಟೆಕ್ಸ್ಟ್ ಆಧಾರಿತ ಪ್ರಾಂಫ್ಟ್ ಅನ್ನು ಬಳಸಿಕೊಂಡು ಹಾಡನ್ನು ರಿಮಿಕ್ಸ್ ಮಾಡುತ್ತದೆ. ಆದ್ರೆ ಇದು ಮೂಲ ಹಾಡಿನ ಶೈಲಿಯನ್ನು ಹಾಗೆಯೇ ಉಳಿಸಿಕೊಳ್ಳುತ್ತದೆ.
ಅಷ್ಟೇ ಅಲ್ಲ, ಈ ಹೊಸ ಯೂಟ್ಯೂಬ್ ಫೀಚರ್ದಿಂದ ನಿಮ್ಮ ಸ್ವಂತ ಆಲೋಚನೆಗಳ ಹಾಡನ್ನು ಸಹ ಇದು ಸಂಯೋಜಿಸುತ್ತದೆ. ನಂತರ ಶಾರ್ಟ್ ಕ್ರಿಯೇಟರ್ಸ್ ಈ ಹಾಡಿನ ಸಹಾಯದಿಂದ ತನ್ನ ವಿಡಿಯೋಗಳಿಗೆ ಬ್ಯಾಕ್ಗ್ರೌಂಡ್ ಆಗಿ ಬಳಸಬಹುದು.
AI-ಚಾಲಿತ ಮ್ಯೂಸಿಕ್ನಲ್ಲಿ ಡ್ರೀಮ್ ಟ್ರ್ಯಾಕ್: ರಿಮಿಕ್ಸ್ ಫೀಚರ್ ಯೂಟ್ಯೂಬ್‌ನ ಡ್ರೀಮ್ ಟ್ರ್ಯಾಕ್‌ನಿಂದ ಚಾಲಿತವಾಗಿದೆ. ಇದು 2023 ರಲ್ಲಿ ಪ್ರಾರಂಭಿಸಲಾದ ಪ್ರೋಗ್ರಾಂ ಮತ್ತು ಗೂಗಲ್‌ನ ಡೀಪ್‌ಮೈಂಡ್ ಎಐ ಮಾದರಿಯಾದ ಲಿರಿಯಾದಲ್ಲಿ ನಿರ್ಮಿಸಲಾಗಿದೆ. ಲಿರಿಯಾದ ಸುಧಾರಿತ ಸಾಮರ್ಥ್ಯಗಳು ಹೊಸ ಸಂಯೋಜನೆಗಳನ್ನು ರಚಿಸಲು ಟೆಕ್ಸ್ಟ್ ಇಂಡಿಕೇಟ್ಸ್ಮತ್ತು ಆಡಿಯೋವನ್ನು ಅರ್ಥೈಸುತ್ತವೆ. ಇದು ಮಾನವ ಇನ್ಪುಟ್ ಮತ್ತು ಯಂತ್ರ-ರಚಿತ ಕಲಾತ್ಮಕತೆಯ ಸಾಮರಸ್ಯದ ಮಿಶ್ರಣವನ್ನು ಅನುಮತಿಸುತ್ತದೆ.
ಇತ್ತೀಚೆಗೆ ಯೂಟ್ಯೂಬ್ ತನ್ನ ಶಾರ್ಟ್ ಕ್ರಿಯೇಟರ್ಸ್ಗೆ ಮೂರು ನಿಮಿಷಗಳವರೆಗಿನ ಶಾರ್ಟ್ಗಳನ್ನು ಅಪ್‌ಲೋಡ್ ಮಾಡುವ ಅವಕಾಶ ಕಲ್ಪಿಸಿದೆ. ಈ ಸೇವೆಗಳು ಯಾವಾಗಿನಿಂದ ಪ್ರಾರಂಭ ಆಗಿದೆ ಎಂಬುದನ್ನು ತಿಳಿಯುವುದಕ್ಕೆ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ..
ಓದಿ: ಯೂಟ್ಯೂಬ್: ಬಳಕೆದಾರರ ಉತ್ಸಾಹ ಇಮ್ಮಡಿಗೊಳಿಸುತ್ತಿದೆ ಹೊಸ ಅಪ್ಡೇಟ್! - YouTube Big Update