ETV Bharat / technology

ಸೂಪರ್​ ಫೀಚರ್​, ಹೊಸ ಲುಕ್​, ಅಟ್ರ್ಯಾಕ್ಟಿವ್​ ಡಿಸೈನ್​ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಂಡಬ್ಲೂ ನೂತನ ಮಾಡೆಲ್​ - 2024 BMW M340I LAUNCHED

ಐಷರಾಮಿ ಕಾರು ಪ್ರಿಯರಿಗೆ ಬಿಎಂಡಬ್ಲೂ ತನ್ನ ಹೊಸ ಮಾಡೆಲ್​ವೊಂದನ್ನು ಪರಿಚಯಿಸಿದೆ. ಕಂಪನಿ ತನ್ನ ಹಳೆಯ ಮಾಡೆಲ್​ಗೆ ಹೊಸ ರೂಪವನ್ನು ನೀಡಿ ಮಾರುಕಟ್ಟೆಗೆ ಪರಿಚಯಿಸಿದೆ. ಈ ಕಾರಿನ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ..

2024 BMW M340I TOP SPEED  2024 BMW M340I PRICE  2024 BMW M340I FEATURES
ಬಿಎಂಡಬ್ಲ್ಬೂ (BMW India)
author img

By ETV Bharat Tech Team

Published : Nov 16, 2024, 8:22 AM IST

2024 BMW M340i Launched: ಬಿಎಂಡಬ್ಲೂ ವಾಹನ ಪ್ರಿಯರಿಗೆ ಕಂಪನಿಯೊಂದು ಹೊಸ ಸಿಹಿ ಸುದ್ದಿಯೊಂದನ್ನು ನೀಡಿದೆ. ಪ್ರಮುಖ ಐಷಾರಾಮಿ ಕಾರು ತಯಾರಕ BMW ಇಂಡಿಯಾ ತನ್ನ ಅಪ್​ಡೇಟ್​ ಮಾಡಿದ BMW M340i ಪರ್ಫಾರ್ಮೆನ್ಸ್​ ಸೆಡಾನ್​ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇದು ತನ್ನ ಹಿಂದಿನ ಮಾಡೆಲ್​ ಕಾರಿನ ಒಳಗೆ ಮತ್ತು ಹೊರಗೆ ಕೆಲವು ಬದಲಾವಣೆ ಮಾಡಿ ಅಟ್ರ್ಯಾಕ್ಟಿವ್​ ಲುಕ್​ನಲ್ಲಿ ವಿನ್ಯಾಸಗೊಳಿಸಿದೆ.

ಇದು ಕೆಲವು ಪ್ರಮಾಣಿತ ಸಾಧನಗಳನ್ನು ಹೊಂದಿದೆ. ಕಂಪನಿಯು ಈ ಕಾರಿನ ಬೆಲೆಯನ್ನು ರೂ. 72.90 ಲಕ್ಷ (ಎಕ್ಸ್ ಶೋ ರೂಂ) ನಿಗದಿಪಡಿಸಿದೆ. ನೀವು ಕಲರ್​ ಆಯ್ಕೆಗಾಗಿ ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗುತ್ತದೆ. LCI ಅಪ್​ಡೇಟ್​ನಿಂದ ಕಂಪನಿಯು ತನ್ನ 2 ವರ್ಷಗಳ ಹಿಂದೆ ಮಾರುಕಟ್ಟೆಗೆ ಪರಿಚಯಿಸಿದ ಹಿಂದಿನ ಕಾರಿಗೆ ಹೋಲುತ್ತದೆ. ಪ್ರಸ್ತುತ ಪಡಿಸಿರುವ ಕಾರಿನ ಸುತ್ತಲೂ ಸಬ್ಡಿಲ್​ ಬ್ಲ್ಯಾಕ್​ ಟ್ರಿಟ್ಮೆಂಟ್​ ಹೊಂದಿದೆ. ಹೆಡ್‌ಲ್ಯಾಂಪ್‌ಗಳು M ಲೈಟ್ ಶ್ಯಾಡೋಲೈನ್ ಫಿನಿಶ್ ಒಳಗೊಂಡಿವೆ. ಇವುಗಳ ಜೊತೆಗೆ, ಕಾರು ಕಾಂಟ್ರಾಸ್ಟ್ ರೆಡ್ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ 19-ಇಂಚಿನ ಜೆಟ್-ಬ್ಲ್ಯಾಕ್​ ಅಲಾಯನ್​ ವ್ಹೀಲ್​ಗಳನ್ನು (995M) ಪಡೆಯುತ್ತದೆ.

ಶಾರ್ಪರ್​ ಬಂಪರ್ ಡಿಸೈನ್​, ಬ್ಲ್ಯಾಕ್​ ಮೆಶ್ ಕಿಡ್ನಿ ಗ್ರಿಲ್, ಡ್ಯುಯಲ್-ಎಕ್ಸಾಸ್ಟ್ ಟಿಪ್ಸ್, ಬ್ಲ್ಯಾಕ್​-ಔಟ್ ORVM ಗಳಂತಹ ಅಗ್ರೇಸಿವ್​ ಪಾರ್ಟ್​ಗಳನ್ನು BMW M340i ನಲ್ಲಿ ಕಾಣಬಹುದಾಗಿದೆ. ಇಂಟೀರಿಯರ್ ಬಗ್ಗೆ ಹೇಳುವುದಾದರೆ, ಇದರ ವೆರ್ನಾಸ್ಕಾ ಲೆದರ್ ಅಪ್ಹೋಲ್ಸ್ಟರಿಯನ್ನು ಬದಲಾಯಿಸಲಾಗಿದೆ. ಇದು ಸಂಪೂರ್ಣವಾಗಿ ಕಪ್ಪು ಬಣ್ಣದ್ದಾಗಿದೆ. ಕಾಂಟ್ರಾಸ್ಟ್ M ಹೈಲೆಟ್​ಗಳನ್ನು ಹೊಂದಿದೆ.

ಈ ಕಾರು ಕರ್ವ್ಡ್​ ಡಿಸ್​ಪ್ಲೇ ಹೊಂದಿದೆ. ಇದನ್ನು ಮೊದಲು BMW M340i ನೊಂದಿಗೆ ಪರಿಚಯಿಸಲಾಗಿದೆ. ಇದಲ್ಲದೆ, ಈ ಬಾರಿ ಇದನ್ನು ಇತ್ತೀಚಿನ OS8.5 ಆಪರೇಟಿಂಗ್ ಇಂಟರ್ಫೇಸ್​ನೊಂದಿಗೆ ಅಪ್​ಡೇಟ್​ ಮಾಡಲಾಗಿದೆ. ಸ್ಟೀರಿಂಗ್ ವ್ಹೀಲ್‌ನಲ್ಲಿರುವ ರೆಡ್​ ಸೆಂಟರ್ ಮಾರ್ಕರ್ ಮತ್ತೊಂದು ಸಣ್ಣ ಬದಲಾವಣೆಯಾಗಿದೆ. ಸಾಮಾನ್ಯವಾಗಿ ಇದು BMW M ಕಾರುಗಳಲ್ಲಿ ಕಂಡುಬರುತ್ತದೆ. ಇನ್ನು ಈ ಕಾರು ಎಂ ಹೈಗ್ಲೋಸ್ ಶಾಡೋಲೈನ್ ಅನ್ನು ಪಡೆಯುತ್ತದೆ. ಆಂಥ್ರಾಸೈಟ್‌ನಲ್ಲಿ ಪ್ರತ್ಯೇಕ ಹೆಡ್‌ಲೈನರ್, ಇಂಟಿರಿಯರ್​ ಟ್ರಿಮ್ ಅನ್ನು ಕಾರ್ಬನ್ ಫೈಬರ್ ಫಿನಿಶ್‌ನೊಂದಿಗೆ ಮಾಡಲಾಗಿದೆ.

ಕಾರಿನ ಇತರ ವೈಶಿಷ್ಟ್ಯಗಳೆಂದರೆ ವೆಲ್ಕಮ್ ಲೈಟ್ ಕಾರ್ಪೆಟ್, ಆರು ಡಿಮ್ಮಬಲ್ ಲೈಟ್‌ಗಳೊಂದಿಗೆ ಆಂಬಿಯೆಂಟ್ ಲೈಟಿಂಗ್, ಥ್ರೀ-ಜೋನ್​ ಕ್ಲೈಮೆಟ್​ ಕಂಟ್ರೋಲ್​, 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಹಿಂಭಾಗದಲ್ಲಿ 40:20:40 ಸ್ಪ್ಲಿಟ್ ಸೀಟುಗಳು. ಗ್ರಾಹಕರು ಬಯಸಿದಲ್ಲಿ M ಪರ್ಫಾರ್ಮೆನ್ಸ್​ನ ಟೂಲ್​ಗಳನ್ನು ಸಹ ಆಯ್ಕೆ ಮಾಡಬಹುದು. ಇದು ಸ್ಪಾಯ್ಲರ್‌ನಲ್ಲಿ ಕಾರ್ಬನ್ ಫೈಬರ್ ಫಿನಿಶರ್, ಮೆಶ್ ಕಿಡ್ನಿ ಗ್ರಿಲ್, ಎಂ-ಬ್ಯಾಡ್ಜ್ಡ್ ಡೋರ್ ಪಿನ್‌ಗಳು, ಅಲ್ಕಾಂಟರಾ ಆರ್ಮ್‌ರೆಸ್ಟ್ ಮತ್ತು 50 ಜಹ್ರೆ ಎಂ ಬ್ಯಾಡ್ಜ್ ಅನ್ನು ಹೊಂದಿದೆ.

BMW M340i ಪವರ್‌ಟ್ರೇನ್ ಬದಲಾಗದೆ ಉಳಿದಿದೆ. 3.0-ಲೀಟರ್ ಟರ್ಬೋಚಾರ್ಜ್ಡ್ ಸ್ಟ್ರೈಟ್-ಸಿಕ್ಸ್ ಎಂಜಿನ್​ ಅನ್ನು ಹೊಂದಿದೆ. ಇದು ಸುಮಾರು 374bhp ಪವರ್, 500Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 8-ಸ್ಪೀಡ್ ಅಟೋಮೆಟಿಕ್​ ಗೇರ್‌ಬಾಕ್ಸ್‌ಗೆ ಜೋಡಿಸಲಾದ xDrive ಚಾನಲ್ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್​ ಕಳುಹಿಸುತ್ತದೆ. ಈ ಕಾರು ಕೇವಲ 4.4 ಸೆಕೆಂಡ್‌ಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಓದಿ: ಬಿಲಿಯನ್ ವರ್ಷಗಳ ಹಿಂದೆ ಚಂದ್ರನ ಮೇಲೆ ಜ್ವಾಲಾಮುಖಿ ಸ್ಫೋಟ: ಶಿಲಾಮಾದರಿಗಳ ಅಧ್ಯಯನದಲ್ಲಿ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.