- ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ಹಣಕಾಸು ಸಚಿವೆ
- ಬಜೆಟ್ಗೆ ಅನುಮತಿ ಪಡೆಯಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಹಾಯಕ ಸಚಿವ ಪಂಕಜ್ ಚೌಧರಿ
Union Budget Live: ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣಗೆ, ಟ್ಯಾಬ್ ಮೂಲಕ ಆಯವ್ಯಯ ಮಂಡಿಸಲಿರುವ ಸೀತಾರಾಮನ್ - UNION BUDGET
Published : Feb 1, 2025, 8:10 AM IST
|Updated : Feb 1, 2025, 9:56 AM IST
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಗ್ಗೆ 11 ಗಂಟೆಗೆ ಸತತ 8ನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ. ಮಂದಗತಿಯ ಆರ್ಥಿಕ ಬೆಳವಣಿಗೆ, ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆ ಏರಿಕೆ ಸವಾಲುಗಳು ಎದುರಾಗಿರುವುದರಿಂದ ಸೀತಾರಾಮನ್ ಆಯವ್ಯಯ ಮೇಲೆ ದೇಶದ ಕಣ್ಣು ನೆಟ್ಟಿದೆ.
ಇಂದು ಬೆಳಗ್ಗೆ11 ಗಂಟೆಗೆ ಸಂಸತ್ತಿನಲ್ಲಿ ಸೀತಾರಾಮನ್ ಅವರು ದಾಖಲೆಯ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ನ ಕ್ಷಣ ಕ್ಷಣದ ಮಾಹಿತಿ ಈಟಿವಿ ಭಾರತದಲ್ಲಿ ಲಭ್ಯವಿದೆ.
ಬಡವರು, ಮಧ್ಯಮ ವರ್ಗ ಮತ್ತು ಮಹಿಳೆಯರಿಗೆ ವಿಶೇಷ ಕೊಡುಗೆ ಸಿಗುವ ನಿರೀಕ್ಷೆ ಇದೆ. ಇನ್ನು ಪ್ರಮುಖವಾಗಿ ಆದಾಯ ತೆರಿಗೆ ಸ್ಲ್ಯಾಬ್ಗಳಲ್ಲಿ ಪ್ರಮುಖ ಬದಲಾವಣೆ ಬಗ್ಗೆ ಕುತೂಹಲ ಹೆಚ್ಚಿದೆ. ಸರಕು ಮತ್ತು ಸೇವೆಗಳ ಬಳಕೆ ಹೆಚ್ಚಿಸಲು ಮತ್ತು ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರವು ವಾರ್ಷಿಕ 10 ಲಕ್ಷ ರೂ.ವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ವಿಧಿಸಬಾರದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
LIVE FEED
ರಾಷ್ಟ್ರಪತಿ ಭವನಕ್ಕೆ ಭೇಟಿ
ಸಂಸತ್ ತಲುಪಿದ ಬಜೆಟ್ ಪ್ರತಿಗಳು
ಇಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಆಗಲಿದೆ. ಈ ಹಿನ್ನೆಲೆಯಲ್ಲಿ ಸಂಸತ್ ಗೆ ಬಜೆಟ್ ಪ್ರತಿಗಳನ್ನು ತಲುಪಿಸಲಾಗಿದೆ.
ಬಜೆಟ್ ಟ್ಯಾಬ್ ಪ್ರದರ್ಶನ
- ಬಜೆಟ್ ದಾಖಲೆ ಇರುವ ಕೆಂಪು ಬಣ್ಣದ ಕವರ್ ಹಾಕಿರುವ ಟ್ಯಾಬ್ ಪ್ರದರ್ಶಿಸಿದ ಹಣಕಾಸು ಸಚಿವೆ
- ಸಾಂಪ್ರದಾಯಿಕ ಬಾಕಿ ಖಾತಾ ಬದಲಿಗೆ ಟ್ಯಾಬ್ ಮೂಲಕ ಆಯವ್ಯಯ ಮಂಡಿಸಲಿರುವ ಸೀತಾರಾಮನ್
ಹಣಕಾಸು ಸಚಿವಾಲಯಕ್ಕೆ ಆಗಮನ
- ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯಕ್ಕೆ ಆಗಮಿಸಿದ ಸಚಿವೆ ನಿರ್ಮಲಾ ಸೀತಾರಾಮನ್.
- ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ.ಅನಂತ ನಾಗೇಶ್ವರನ್ ಅವರು ಹಣಕಾಸು ಸಚಿವಾಲಯಕ್ಕೆ ಆಗಮಿಸಿದ್ದಾರೆ.
- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ.