ETV Bharat / state

ಸರ್ಕಾರಿ ಪಿಯು ವಿದ್ಯಾರ್ಥಿಗಳಿಗೆ 'ಸಿಇಟಿ-ಸಕ್ಷಮ': ಬೆಳಗಾವಿ ಜಿಪಂ ಸಿಇಒ ವಿನೂತನ ಕಾರ್ಯಕ್ರಮ ರಾಜ್ಯಕ್ಕೆ ಮಾದರಿ - CET SAKSHAM

ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಿಗೆ 'ಸಿಇಟಿ ಸಕ್ಷಮ' ತರಬೇತಿ ನೀಡಲಾಗುತ್ತಿದೆ. ಈ ಕುರಿತು 'ಈಟಿವಿ ಭಾರತ ಕನ್ನಡ' ಬೆಳಗಾವಿ ಪ್ರತಿನಿಧಿ ಸಿದ್ದನಗೌಡ ಪಾಟೀಲ್​ ಮಾಡಿರುವ ವಿಶೇಷ ವರದಿ ಇಲ್ಲಿದೆ.

ಪಿಯು ವಿದ್ಯಾರ್ಥಿಗಳಿಗೆ ಸಿಇಟಿ ಸಕ್ಷಮ CET Coaching Belagavi
ಪಿಯು ವಿದ್ಯಾರ್ಥಿಗಳಿಗೆ ಸಿಇಟಿ-ಸಕ್ಷಮ (ETV Bharat)
author img

By ETV Bharat Karnataka Team

Published : Nov 16, 2024, 8:02 AM IST

ಬೆಳಗಾವಿ: ಸರ್ಕಾರಿ ಕಾಲೇಜು ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಇಲ್ಲಿನ ಜಿಲ್ಲಾ ಪಂಚಾಯತಿ ಸಿಇಓ ಆರಂಭಿಸಿರುವ "ಸಿಇಟಿ-ಸಕ್ಷಮ" ವಿನೂತನ ಕಾರ್ಯಕ್ರಮ ವಿಜ್ಞಾನ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ. ಈ ಮೂಲಕ ಖಾಸಗಿ ಕಾಲೇಜುಗಳಿಗೆ ಸಡ್ಡು ಹೊಡೆಯುವ ರೀತಿ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ತಯಾರಾಗುತ್ತಿದ್ದಾರೆ.

ಹೌದು, ಬೆಳಗಾವಿ ಜಿ.ಪಂ ಸಿಇಒ ರಾಹುಲ್ ಶಿಂಧೆ ಅವರು, 'ಸಿಇಟಿ.-ಸಕ್ಷಮ' ಕಾರ್ಯಕ್ರಮ ಮೂಲಕ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಶಕ್ತಿ ತುಂಬಲು ವಿನೂತನ ಹೆಜ್ಜೆ ಇಟ್ಟಿದ್ದಾರೆ. ಜಿಲ್ಲೆಯ ಎಲ್ಲ ಸರ್ಕಾರಿ ವಿಜ್ಞಾನ ಪದವಿ ಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ಬಡ ಕುಟುಂಬಗಳ ಹಾಗೂ ಗ್ರಾಮೀಣ ಪ್ರದೇಶಗಳ ಸಾವಿರಾರು ವಿದ್ಯಾರ್ಥಿಗಳನ್ನು ಸಿಇಟಿ ಪರೀಕ್ಷೆಗೆ ಸಜ್ಜುಗೊಳಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲೇ ಇದು ಹೊಸ ಪ್ರಯತ್ನವಾಗಿದೆ. ಪ್ರತಿದಿನ ಬೆಳಗ್ಗೆ ಇಲ್ಲವೇ ಮಧ್ಯಾಹ್ನ ಸಾಮಾನ್ಯ ತರಗತಿಗಳನ್ನು ಹೊರತುಪಡಿಸಿ ಆಯಾ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುತ್ತಿದ್ದಾರೆ.

ಸರ್ಕಾರಿ ಪಿಯು ವಿದ್ಯಾರ್ಥಿಗಳಿಗೆ ಸಿಇಟಿ-ಸಕ್ಷಮ ಕಾರ್ಯಕ್ರಮ (ETV Bharat)

ಏನಿದು ಸಿಇಟಿ-ಸಕ್ಷಮ? ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಿಗೆ ತರಬೇತಿ ನೀಡಿ, ಉತ್ತಮ ಶ್ರೇಯಾಂಕ ಗಳಿಸುವಂತೆ ಮಾಡುವುದು ಈ ಕಾರ್ಯಕ್ರಮ ಉದ್ದೇಶ. ಇದನ್ನು ಜಿಲ್ಲಾ ಪಂಚಾಯತಿ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ.

ಸರ್ಕಾರಿ ವಿಜ್ಞಾನ ಪಿಯು ಕಾಲೇಜುಗಳ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಎರಡನೇ ಶನಿವಾರ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಾಲ್ಕನೇ ಶನಿವಾರ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಆಗಸ್ಟ್‌ 24ರಂದು ಜಿಲ್ಲೆಯಾದ್ಯಂತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೊದಲನೇ ಅಭ್ಯಾಸ ಪರೀಕ್ಷೆಯನ್ನು ನಡೆಸಲಾಗಿದೆ. ಪ್ರತಿ ತಿಂಗಳು ಪರೀಕ್ಷೆ ನಡೆಸಲಾಗುತ್ತಿದೆ. ಅಲ್ಲದೇ ಪರೀಕ್ಷೆ ಮುಗಿದ ಕೆಲವೇ ನಿಮಿಷಗಳಲ್ಲಿ ಫಲಿತಾಂಶವನ್ನೂ ನೀಡುತ್ತಿರುವುದು ವಿಶೇಷ.

ಬೆಳಗಾವಿ ವಲಯದ 19 ಮತ್ತು ಚಿಕ್ಕೋಡಿ ವಲಯದ 15 ಸೇರಿದಂತೆ ಒಟ್ಟು 34 ಸರ್ಕಾರಿ ಪದವಿಪೂರ್ವ ವಿಜ್ಞಾನ ವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಚಿಕ್ಕೋಡಿ ವಲಯದಲ್ಲಿ 1,699 ಪ್ರಥಮ ಪಿಯುಸಿ ಹಾಗೂ 1,561 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಗೂ ಬೆಳಗಾವಿ ವಲಯದಲ್ಲಿ 1,444 ಪ್ರಥಮ ಪಿಯುಸಿ ಹಾಗೂ 1359 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 3,143 ಪ್ರಥಮ ಪಿಯುಸಿ ಹಾಗೂ 2,920 ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಸ್ತುತ ಅವರು ಕಲಿಯುತ್ತಿರುವ ಕಾಲೇಜುಗಳಲ್ಲೇ ಸಿದ್ಧತಾ ಪರೀಕ್ಷೆಯನ್ನು ಪ್ರತಿ ತಿಂಗಳು ಯಶಸ್ವಿಯಾಗಿ ನಡೆಸಲಾಗುತ್ತಿದೆ.

ಸಕ್ಷಮ ಯಶಸ್ಸಿಗೆ ನಾಲ್ಕು ಸಮಿತಿ: ಸಿಇಟಿ-ಸಕ್ಷಮ ಯಶಸ್ಸಿಗೆ ನಡೆಸಲು ನಾಲ್ಕು ಸಮಿತಿಗಳನ್ನು ರಚಿಸಲಾಗಿದೆ. ಶೈಕ್ಷಣಿಕ ಸಮಿತಿ - ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವುದು ಹಾಗೂ ಫಲಿತಾಂಶದ ನಂತರ ಪ್ರಶ್ನೆ ಪತ್ರಿಕೆಗಳ ವಿಶ್ಲೇಷಣೆ ಮಾಡಲಿದೆ. ಆಡಳಿತ ಸಮಿತಿ - ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ನಡೆಸುತ್ತದೆ. ಒ.ಎಂ.ಆರ್. ಸ್ಕ್ಯಾನಿಂಗ್ ಸಮಿತಿ - ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮಾದರಿಯಲ್ಲಿ ಒ.ಎಂ.ಆರ್. ಸ್ಕ್ಯಾನಿಂಗ್ ಕಾರ್ಯನಿರ್ವಹಣೆ ಜೊತೆಗೆ ಕಾಲೇಜುವಾರು ಫಲಿತಾಂಶ ಪ್ರಕಟಿಸುತ್ತದೆ. ಅದೇ ರೀತಿ ಸಮನ್ವಯ ಸಮಿತಿ ಪರೀಕ್ಷಾ ಕಾರ್ಯವನ್ನು ಸಮನ್ವಯಗೊಳಿಸುತ್ತಿದೆ. ಜಿ.ಪಂ ಮುಖ್ಯ ಯೋಜನಾಧಿಕಾರಿ ಗಂಗಾಧರ್ ದಿವಟರ ಈ ನಾಲ್ಕು ಸಮಿತಿಗಳ ಸಮನ್ವಯಕಾರರಾಗಿ ಕೆಲಸ ಮಾಡುತ್ತಿದ್ದಾರೆ.

ಜಿಪಂ ಸಿಇಒ ರಾಹುಲ್ ಶಿಂಧೆ ಈಟಿವಿ ಭಾರತ ಜೊತೆಗೆ ಮಾತನಾಡಿ, ಸಿಇಟಿ/ನೀಟ್ ಪರೀಕ್ಷೆಯ ಭಯವನ್ನು ಹೋಗಲಾಡಿಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಸಿಇಟಿ-ಸಕ್ಷಮ್ ಆರಂಭಿಸಿದ್ದೇವೆ. ಹಿಂದಿನ ಪರೀಕ್ಷೆಯಲ್ಲಿ 50 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಸರ್ಕಾರಿ ಕಾಲೇಜಿನ ಮಕ್ಕಳಲ್ಲಿ ಒಳ್ಳೆಯ ಪ್ರತಿಭೆ ಇದೆ. ಅವರಿಗೆ ಮತ್ತಷ್ಟು ತರಬೇತಿ, ಸರಿಯಾದ ಮಾರ್ಗದರ್ಶನ ಮಾಡಿದರೆ ಉನ್ನತ ವ್ಯಾಸಂಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಭರವಸೆ ಇದೆ ಎಂದು ಹೇಳಿದರು.

ಪಿಯು ವಿದ್ಯಾರ್ಥಿಗಳಿಗೆ ಸಿಇಟಿ ಸಕ್ಷಮ CET Coaching Belagavi
ಸಿಇಟಿ-ಸಕ್ಷಮ ಕಾರ್ಯಕ್ರಮದಲ್ಲಿ ಪರೀಕ್ಷೆ ಬರೆಯುತ್ತಿರುವ ಪಿಯು ವಿದ್ಯಾರ್ಥಿಗಳಿಗೆ (ETV Bharat)

ವಡಗಾವಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಎಂ. ಕಾಪಸೆ ಮಾತನಾಡಿ, ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲೆಯ ಹಿರಿಯ ಮತ್ತು ತಜ್ಞ ಉಪನ್ಯಾಸಕರಿಂದ ಸಿದ್ಧಪಡಿಸಲಾಗುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಇರುವಂತೆ ಒಎಂಆರ್ ಸೀಟ್, ಕ್ರಮ ಸಂಖ್ಯೆ ವಿದ್ಯಾರ್ಥಿಗಳಿಗೆ ಒದಗಿಸುತ್ತೇವೆ. ಪ್ರತಿ ಮಂಗಳವಾರ ವಿಷಯ ಪರಿಣಿತರಿಂದ ಸಂದೇಹ ನಿವಾರಣಾ ತರಗತಿ ತೆಗೆದುಕೊಳ್ಳಲಾಗುತ್ತದೆ. ಅಲ್ಲದೇ ವಿಷಯವಾರು ಹೆಚ್ಚು ವಿದ್ಯಾರ್ಥಿಗಳು, ತಪ್ಪು ಉತ್ತರ ನೀಡಿರುವ ಪ್ರಶ್ನೆಗಳಿಗೆ ವಿವರಣಾತ್ಮಕ ತರಗತಿಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ. ಅಲ್ಲದೇ ಫೆಬ್ರುವರಿ ತಿಂಗಳೊಳಗೆ ಸಿಇಟಿ-ನೀಟ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಪೂರ್ಣಪ್ರಮಾಣದಲ್ಲಿ ತಯಾರಾಗುವ ವಿಶ್ವಾಸವಿದೆ ಎಂದರು.

ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ; ದ್ವಿತೀಯ ವರ್ಷದ ವಿದ್ಯಾರ್ಥಿನಿ ವಿಸ್ಮಯ ಅಂಗಡಿ ಮಾತನಾಡಿ, ಉಪನ್ಯಾಸಕರು ಕಾಳಜಿ ವಹಿಸಿ ನಮಗೆ ಕಲಿಸುತ್ತಿದ್ದಾರೆ. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ, ಅತೀ ಮುಖ್ಯ ಪ್ರಶ್ನೆಗಳನ್ನು ವಿವರವಾಗಿ ಬಿಡಿಸುತ್ತಾರೆ‌. ಒಟ್ಟಾರೆ ಪರೀಕ್ಷೆಗೆ ಭಯ ಇಲ್ಲದೇ ಹಾಜರಾಗಿ, ಹೆಚ್ಚು ಅಂಕ ಗಳಿಸುವ ನಿಟ್ಟಿನಲ್ಲಿ ಸಜ್ಜುಗೊಳಿಸುತ್ತಿದ್ದಾರೆ.‌ ಮುಂದೆ ಬಿಇ ಆರ್ಕಿಟೆಕ್ಟ್ ಮಾಡುವ ಯೋಚನೆ ಎಂದು ತಿಳಿಸಿದರು.

ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವುದಕ್ಕೆ ಹೆಮ್ಮೆ ಮತ್ತು ಖುಷಿ ಇದೆ. ಯಾವ ಖಾಸಗಿ ಕಾಲೇಜಿಗೂ ಕಡಿಮೆ ಇಲ್ಲದಂತೆ ನಮಗೆ ಸರ್ಕಾರ ವ್ಯವಸ್ಥೆ ಕಲ್ಪಿಸಿದೆ. ಉತ್ತಮ ಲ್ಯಾಬ್, ಗ್ರಂಥಾಲಯ ಸೇರಿ ಎಲ್ಲಾ ಸೌಲಭ್ಯಗಳು ಇಲ್ಲಿವೆ. ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದು ಬಿ-ಟೆಕ್ ಮಾಡುತ್ತೇನೆ ಎನ್ನುತ್ತಾರೆ ದ್ವಿತೀಯ ವರ್ಷದ ವಿದ್ಯಾರ್ಥಿ ವಿರೇಶ ಹಾಲ್ಪಾಪುರ.

ಖಾಸಗಿ ಕಾಲೇಜುಗಳಲ್ಲಿ ಅಷ್ಟೇ ನೀಟ್, ಸಿಇಟಿ ತರಬೇತಿ ಕೊಡುತ್ತಾರೆ ಅಂತಾ ಎಲ್ಲರೂ ಹೇಳುತ್ತಾರೆ. ಆದರೆ, ನಮ್ಮ ಸರ್ಕಾರಿ ಕಾಲೇಜಿನಲ್ಲಿ, ಅದರಲ್ಲೂ ಪಿಯುಸಿ ಪ್ರಥಮ ವರ್ಷದಲ್ಲೇ ನಮ್ಮ ಉಪನ್ಯಾಸಕರು ನಮ್ಮನ್ನು ಈ ಎಲ್ಲಾ ಪರೀಕ್ಷೆಗಳಿಗೆ ಹುರಿಗೊಳಿಸುತ್ತಿದ್ದಾರೆ ಎಂದು ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಭೂಮಿಕಾ ಕೊಳೇಕರ್, ತೇಜಸ್ವಿನಿ ಆರಿ ಪ್ರತಿಕ್ರಿಯಿಸಿದರು.

ಸಕ್ಷಮ್ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಂದ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಈಗ ನಡೆಸಿರುವ ಪರೀಕ್ಷೆಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಒಳ್ಳೆಯ ಅಂಕ ಗಳಿಸಿದ್ದಾರೆ. ಕಳೆದ ವರ್ಷವೂ ನಮ್ಮ ಕಾಲೇಜಿನಲ್ಲಿ ಸಿಇಟಿ, ನೀಟ್ ತರಬೇತಿ ನೀಡಿದ್ದೇವು. ಹಾಗಾಗಿ, ಉತ್ತಮ ಫಲಿತಾಂಶದ ನಿರೀಕ್ಷೆ ಇದೆ ಎಂದು ಹೇಳುತ್ತಾರೆ ಭೌತಶಾಸ್ತ್ರ ಉಪನ್ಯಾಸಕಿ ಪ್ರೊ.ರೂಪಾ ಜಾಧವ್​.

ಇದನ್ನೂ ಓದಿ: ಯಾವುದೇ ಶ್ಯೂರಿಟಿ ಇಲ್ಲದೆ ಬಡ ವಿದ್ಯಾರ್ಥಿಗಳಿಗೆ 10 ಲಕ್ಷ ರೂ.ವರೆಗೂ ಶಿಕ್ಷಣ ಸಾಲ: ಅರ್ಜಿ ಸಲ್ಲಿಸುವುದು ಹೇಗೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.