ETV Bharat / bharat

ಸಂಭಾಲ್​ನ ಚಂದೌಸಿ ಪ್ರದೇಶದಲ್ಲಿ ಮುಚ್ಚಲ್ಪಟ್ಟಿದ್ದ ನೂರಾರು ವರ್ಷ ಹಳೆಯ ಮೆಟ್ಟಿಲು ಬಾವಿ ಪತ್ತೆ - STEPWELL DISCOVERED

ಚಂದೌಸಿ ಪ್ರದೇಶದಲ್ಲಿ ಪುರಾತನ ಮೆಟ್ಟಿಲು ಬಾವಿ ಪತ್ತೆಯಾಗಿದೆ.

ಮೆಟ್ಟಿಲು ಬಾವಿ ಕಂಡು ಬಂದ ಪ್ರದೇಶದಲ್ಲಿ ನಡೆಯುತ್ತಿರುವ ಅಗೆತದ ಕಾಮಗಾರಿ
ಮೆಟ್ಟಿಲು ಬಾವಿ ಕಂಡು ಬಂದ ಪ್ರದೇಶದಲ್ಲಿ ನಡೆಯುತ್ತಿರುವ ಅಗೆತದ ಕಾಮಗಾರಿ (IANS)
author img

By ETV Bharat Karnataka Team

Published : 6 hours ago

ಸಂಭಾಲ್: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಕಾರ್ತಿಕೇಯ ಮಹಾದೇವ ದೇವಾಲಯವನ್ನು 46 ವರ್ಷಗಳ ನಂತರ ಮತ್ತೆ ತೆರೆಯಲಾಗಿದ್ದು, ಜಿಲ್ಲೆಯಲ್ಲಿ ಮರೆಮಾಚಿಹೋಗಿದ್ದ ಮತ್ತಷ್ಟು ಐತಿಹಾಸಿಕ ಅಂಶಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ಚಂದೌಸಿ ಪ್ರದೇಶದಲ್ಲಿ ಉತ್ಖನನದ ಸಮಯದಲ್ಲಿ ಮೆಟ್ಟಿಲು ಬಾವಿಯೊಂದು ಪತ್ತೆಯಾಗಿದ್ದು, ಇದು ಪ್ರದೇಶದ ಐತಿಹಾಸಿಕ ಮಹತ್ವಕ್ಕೆ ಹೊಸ ಆಯಾಮ ನೀಡಿದೆ.

ಈ ತಿಂಗಳ ಆರಂಭದಲ್ಲಿ ಅದೇ ಪ್ರದೇಶದಲ್ಲಿ ಪ್ರಾಚೀನ ಬಾಂಕೆ ಬಿಹಾರಿ ದೇವಾಲಯದ ಅವಶೇಷಗಳು ಪತ್ತೆಯಾದ ಸ್ವಲ್ಪ ಸಮಯದ ನಂತರ ಈ ಹೊಸ ಸಂಗತಿಗಳು ಬೆಳಕಿಗೆ ಬಂದಿವೆ. ಸನಾತನ ಸೇವಕ ಸಂಘದ ಪದಾಧಿಕಾರಿಗಳ ಮನವಿಯ ಮೇರೆಗೆ ಮೇರೆಗೆ, ಸಂಭಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ರಾಜೇಂದ್ರ ಪೆನ್ಸಿಯಾ ಅವರು ಲಕ್ಷ್ಮಣ್ ಗಂಜ್​ನಲ್ಲಿರುವ ಸ್ಥಳದಲ್ಲಿ ಉತ್ಖನನಕ್ಕೆ ಆದೇಶ ನೀಡಿದ್ದಾರೆ.

ಎಡಿಎಂ ನ್ಯಾಯಾಂಗ ಸತೀಶ್ ಕುಮಾರ್ ಕುಶ್ವಾಹ ಮತ್ತು ತಹಶೀಲ್ದಾರ್ ಧೀರೇಂದ್ರ ಪ್ರತಾಪ್ ಸಿಂಗ್ ತಮ್ಮ ತಂಡದೊಂದಿಗೆ ಶನಿವಾರ ಎರಡು ಜೆಸಿಬಿ ಯಂತ್ರಗಳೊಂದಿಗೆ ಅಗೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.

ಸುಮಾರು 45 ಗಂಟೆಗಳ ಕಾಲ ಅಗೆತದ ನಂತರ ಸ್ಥಳದಲ್ಲಿ ಮೆಟ್ಟಿಲು ಬಾವಿಯ ಗೋಡೆಗಳು ಕಾಣಿಸಲಾರಂಭಿಸಿವೆ. ಮೆಟ್ಟಿಲು ಬಾವಿಯ ಪಕ್ಕದಲ್ಲಿ ನಾಲ್ಕು ಕೋಣೆಗಳು ಸಹ ಉತ್ಖನನದಲ್ಲಿ ಕಂಡು ಬಂದಿವೆ. ಆದರೆ ಕತ್ತಲಾಗಿದ್ದರಿಂದ ರಾತ್ರಿಯಲ್ಲಿ ಅಗೆಯುವಿಕೆಯನ್ನು ನಿಲ್ಲಿಸಲಾಯಿತು.

ಸ್ಥಳೀಯರು ಮತ್ತು ಐತಿಹಾಸಿಕ ದಾಖಲೆಗಳ ಪ್ರಕಾರ, ಮೆಟ್ಟಿಲು ಬಾವಿ ಮತ್ತು ಸುತ್ತಮುತ್ತಲಿನ ರಚನೆಗಳು 1857 ರ ದಂಗೆಯ ಕಾಲದದಷ್ಟು ಹಿಂದಿನವು ಆಗಿವೆ. ಈ ಸ್ಥಳವನ್ನು ಸಹಸ್ಪುರದ ರಾಜಮನೆತನದವರು ರಹಸ್ಯ ಕ್ಯಾಂಪಿಂಗ್ ತಾಣವಾಗಿ ಬಳಸುತ್ತಿದ್ದರು ಎಂದು ನಂಬಲಾಗಿದೆ.

ಸನಾತನ ಸೇವಕ ಸಂಘದ ರಾಜ್ಯ ಪ್ರಚಾರ ಮುಖ್ಯಸ್ಥ ಕೌಶಲ್ ಕಿಶೋರ್ ಈ ಹಿಂದೆ ಡಿಎಂಗೆ ಪತ್ರ ಬರೆದು ಸ್ಥಳದಲ್ಲಿ ಉತ್ಖನನ ನಡೆಸುವಂತೆ ಈ ಸ್ಥಳದಲ್ಲಿ ರಾಧಾ ಕೃಷ್ಣ ದೇವಾಲಯ ಕೂಡ ಇದ್ದು, ಪ್ರಸ್ತುತ ಇದನ್ನು ನವೀಕರಣಗೊಳಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

"ಮೆಟ್ಟಿಲು ಬಾವಿ ಮತ್ತು ಅದರ ಮೆಟ್ಟಿಲುಗಳ ಆವಿಷ್ಕಾರವು ಈ ಸ್ಥಳದ ಐತಿಹಾಸಿಕ ಮಹತ್ವವನ್ನು ನಿರೂಪಿಸುತ್ತದೆ. 1857 ರ ದಂಗೆ ಮತ್ತು ಸಹಸ್ಪುರದ ರಾಜಮನೆತನದೊಂದಿಗಿನ ಇದು ಸಂಬಂಧ ಹೊಂದಿರುವುದು ಈ ಸ್ಥಳಕ್ಕೆ ಅಪಾರ ಮೌಲ್ಯವನ್ನು ನೀಡುತ್ತದೆ" ಎಂದು ಅವರು ಹೇಳಿದರು.

ಈ ಬಗ್ಗೆ ಮಾಹಿತಿ ನೀಡಿರುವ ತಹಶೀಲ್ದಾರ್ ಧೀರೇಂದ್ರ ಪ್ರತಾಪ್ ಸಿಂಗ್, "ಮೊಹಲ್ಲಾ ಲಕ್ಷ್ಮಣ್ ಗಂಜ್​ನಲ್ಲಿರುವ ಈ ಸ್ಥಳ ಗಟಾ ಸಂಖ್ಯೆ 253 ರ ಅಡಿಯಲ್ಲಿ ನೋಂದಾಯಿತವಾಗಿದೆ. ಇದನ್ನು ಬಾವ್ಡಿ ಎಂದು ಕರೆಯಲಾಗುತ್ತದೆ. ಇದು ಹಳೆಯ ಕೊಳ ಮತ್ತು ಹಲವಾರು ಕೊಠಡಿಗಳನ್ನು ಹೊಂದಿದೆ. ಪುರಸಭೆಯ ಸಹಕಾರದೊಂದಿಗೆ ಉತ್ಖನನ ಮಾಡಲಾಗುತ್ತಿದೆ. ಇಲ್ಲಿಯವರೆಗೆ, ನಾಲ್ಕು ಕೊಠಡಿಗಳು ಮತ್ತು ಮೆಟ್ಟಿಲು ಬಾವಿಯ ರಚನೆಗಳು ಕಂಡು ಬಂದಿದ್ದು, ಕೆಲಸ ಮುಂದುವರಿಯಲಿದೆ" ಎಂದರು.

ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡ ಕುಟುಂಬದಿಂದ ಕಲಾರಾಮ್, ತ್ರಯಂಬಕೇಶ್ವರನಿಗೆ ಪೂಜೆ - DEVEGOWDA FAMILY WORSHIPS KALARAM

ETV Bharat Logo

Copyright © 2024 Ushodaya Enterprises Pvt. Ltd., All Rights Reserved.