ETV Bharat / entertainment

'ಪುಷ್ಪ 2'ಕ್ಕೆ ಅಲ್ಲು ಅರ್ಜುನ್ ಪಡೆದಿದ್ದು 300 ಕೋಟಿ: ಅತಿ ಹೆಚ್ಚು ಸಂಭಾವನೆ ಗಳಿಸುವ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ - HIGHEST PAID INDIAN ACTOR

ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿ ಇಲ್ಲಿದೆ.

Allu Arjun
ನಟ ಅಲ್ಲು ಅರ್ಜುನ್ (Photo: IANS)
author img

By ETV Bharat Entertainment Team

Published : Nov 15, 2024, 7:21 PM IST

ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ಪುಷ್ಪ 2: ದಿ ರೂಲ್' ಬಿಡುಗಡೆಗೆ ಎದುರು ನೋಡುತ್ತಿದೆ. ಡಿಸೆಂಬರ್ ಮೊದಲ ವಾರ ಬಿಡುಗಡೆಯಾಗಲಿದ್ದು, ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ದಿನಾಂಕವನ್ನೂ ಘೋಷಿಸಲಾಗಿದೆ. ಭಾರತೀಯ ಚಿತ್ರ ಬಜೆಟ್ ಚಿತ್ರವಾಗಿದ್ದು, ಇಡೀ ವಿಶ್ವವೇ ಕಾಯುತ್ತಿದೆ. ಇತ್ತೀಚೆಗಷ್ಟೇ ಸೌತ್ ಸುಂದರಿ ಶ್ರೀಲೀಲಾ ಸ್ಪೆಷಲ್​ ಸಾಂಗ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಧೃಡಪಟ್ಟಿದೆ. ಇದೀಗ ಚಿತ್ರದ ತಾರಾ ಬಳಗದ ಶುಲ್ಕ ಬಹಿರಂಗವಾಗಿದೆ.

ಪುಷ್ಪ ಮೊದಲ ಭಾಗದ ಮೂಲಕ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ನಾಯಕ ನಟ ಅಲ್ಲು ಅರ್ಜುನ್ ಅವರು ಈ ಚಿತ್ರಕ್ಕಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ. ಈ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟನಾಗಿ ಹೊರಹೊಮ್ಮಿದ್ದಾರೆ. ಈ ಪಟ್ಟಿಯಲ್ಲಿ ಖ್ಯಾತ ನಟರಾದ ರಜನಿಕಾಂತ್ ಮತ್ತು ಶಾರುಖ್ ಖಾನ್ ಅವರನ್ನು ಸೋಲಿಸಿದ್ದಾರೆ.

ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ: ಮಾಧ್ಯಮ ವರದಿಗಳ ಪ್ರಕಾರ, ಅಲ್ಲು ಅರ್ಜುನ್ 'ಪುಷ್ಪ 2: ದಿ ರೂಲ್' ಚಿತ್ರಕ್ಕಾಗಿ 300 ಕೋಟಿ ರೂ. ಪಡೆದಿದ್ದಾರೆ. ಪುಷ್ಪ ಮೊದಲ ಭಾಗ ಹಿಟ್ ಆದ ಬಳಿಕ ಅವರ ಜನಪ್ರಿಯತೆ, ಬೇಡಿಕೆ ಹೆಚ್ಚಾಗಿದೆ. ದಳಪತಿ ವಿಜಯ್, ಶಾರುಖ್ ಖಾನ್, ರಜನಿಕಾಂತ್ ಮತ್ತು ಪ್ರಭಾಸ್ ಅವರಂತಹ ಸ್ಟಾರ್​ ನಟರನ್ನು ಈ ಪಟ್ಟಿಯಲ್ಲಿ ಹಿಂದಿಕ್ಕಿದ್ದಾರೆ.

ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿ (ಫೋರ್ಬ್ಸ್ ಪ್ರಕಾರ)

ನಟರುಸಂಭಾವನೆ (ಸರಾಸರಿ)ಇತ್ತೀಚಿನ ಸಿನಿಮಾಗಳು
ಅಲ್ಲು ಅರ್ಜುನ್300 ಕೋಟಿ ರೂ. (ಪುಷ್ಪಾ 2)ಪುಷ್ಪ: ದಿ ರೈಸ್
ಶಾರುಖ್ ಖಾನ್150 ರಿಂದ 250 ಕೋಟಿ ರೂ.ಪಠಾಣ್, ಜವಾನ್, ಡಂಕಿ
ದಳಪತಿ ವಿಜಯ್ 130 ರಿಂದ 275 ಕೋಟಿ ರೂ.ಗೋಟ್​, ಲಿಯೋ
ರಜನಿಕಾಂತ್ 125 ರಿಂದ 270 ಕೋಟಿ ರೂ.ವೆಟ್ಟೈಯನ್​, ಜೈಲರ್​
ಅಮೀರ್ ಖಾನ್ 100 ರಿಂದ 275 ಕೋಟಿ ರೂ.ಲಾಲ್ ಸಿಂಗ್ ಚಡ್ಡಾ
ಪ್ರಭಾಸ್ 100 ರಿಂದ 200 ಕೋಟಿ ರೂ.ಕಲ್ಕಿ 2898 ಎಡಿ
ಅಜಿತ್ ಕುಮಾರ್105 ರಿಂದ 165 ಕೋಟಿ ರೂ. ತುನಿವು
ಸಲ್ಮಾನ್ ಖಾನ್ 100 ರಿಂದ 150 ಕೋಟಿ ರೂ.ಟೈಗರ್ 3
ಕಮಲ್ ಹಾಸನ್ 100 ರಿಂದ 150 ಕೋಟಿ ರೂ.ಇಂಡಿಯನ್​ 2
ಅಕ್ಷಯ್ ಕುಮಾರ್ 60 ರಿಂದ 145 ಕೋಟಿ ರೂ.ಬಡೇ ಮಿಯಾನ್ ಚೋಟೆ ಮಿಯಾನ್

ಪುಷ್ಪ 2 ಸ್ಟಾರ್ಸ್​ ಸಂಭಾವನೆ:

  • ರಶ್ಮಿಕಾ ಮಂದಣ್ಣ - 10 ಕೋಟಿ ರೂಪಾಯಿ. (ನಾಯಕ ನಟಿ).
  • ಫಹಾದ್ ಫಾಸಿಲ್ - 8 ಕೋಟಿ ರೂಪಾಯಿ. (ಪ್ರಮುಖ ಪಾತ್ರಧಾರಿ)
  • ಶ್ರೀಲೀಲಾ - 2 ಕೋಟಿ ರೂಪಾಯಿ. (ಸ್ಪೆಷಲ್​ ಸಾಂಗ್‌).

ಸಮಂತಾ ರುತ್ ಪ್ರಭು ಸಂಭಾವನೆ ಎಷ್ಟಿತ್ತು?: ವರದಿಗಳ ಪ್ರಕಾರ, ಹಿಟ್ ಚಿತ್ರ 'ಪುಷ್ಪ: ದಿ ರೈಸ್' ನಲ್ಲಿನ ಸೂಪರ್ ಹಿಟ್ ಊ ಅಂಟಾವಾ ಸಾಂಗ್​ಗೆ ಸಮಂತಾ ರುತ್ ಪ್ರಭು 5 ಕೋಟಿ ರೂಪಾಯಿ ಗಳಿಸಿದ್ದರು.

ಇದನ್ನೂ ಓದಿ: ಕಣ್ಣಲ್ಲೇ ಅಭಿನಯ: 'ಭೈರತಿ ರಣಗಲ್' ವೀಕ್ಷಿಸಿದವ್ರು ಹೇಳಿದ್ದಿಷ್ಟು; ಸಿನಿ ಸಂಭ್ರಮಕ್ಕೆ ಸಾಕ್ಷಿಯಾದ ವಿನಯ್​, ಯುವ ರಾಜ್​ಕುಮಾರ್​

ಸುಕುಮಾರ್ ನಿರ್ದೇಶನದ ಪುಷ್ಪ 2 ಡಿಸೆಂಬರ್ 5 ರಂದು ಬಿಡುಗಡೆಯಾಗಲಿದೆ. ಇದೇ ನವೆಂಬರ್ 17ರಂದು ಪಾಟ್ನಾದ ಗಾಂಧಿ ಸ್ಟೇಡಿಯಂನಲ್ಲಿ ಪುಷ್ಪ 2 ಚಿತ್ರದ ಟ್ರೇಲರ್​ ಬಿಡುಗಡೆ ಆಗಲಿದೆ. ನಂತರ, ತಾರಾ ಬಳಗ ಮತ್ತು ಇಡೀ ತಂಡ ದೇಶದ ವಿವಿಧ ನಗರಗಳಲ್ಲಿ ಚಿತ್ರದ ಪ್ರಚಾರ ನಡೆಸಲಿದೆ.

ಇದನ್ನೂ ಓದಿ: ತುಳುನಾಡಿನ ಸಂಪ್ರದಾಯ ಮರೆಯದ ಐಶ್ವರ್ಯಾ ರೈ: ಭಾಷಾಪ್ರೇಮದ ವಿಡಿಯೋ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.