ಆದಿವಾಸಿಗಳ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದ ಸಿಎಂ ಸಿದ್ದರಾಮಯ್ಯ: ವಿಡಿಯೋ - CM SIDDARAMAIAH
🎬 Watch Now: Feature Video
Published : Nov 12, 2024, 7:52 PM IST
|Updated : Nov 12, 2024, 7:57 PM IST
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಹೆಚ್. ಡಿ. ಕೋಟೆ ತಾಲೂಕಿನ ಕೆರೆಹಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಹಾಡಿಯ ನಿವಾಸಿಗಳು ಸಾಂಪ್ರದಾಯಿಕ ನೃತ್ಯದ ಮೂಲಕ ಸ್ವಾಗತಿಸಿದರು. ಈ ವೇಳೆ ಸ್ವತಃ ಮುಖ್ಯಮಂತ್ರಿಗಳು ಹಾಡಿಯ ಸಾಂಪ್ರದಾಯಿಕ ನೃತ್ಯಕ್ಕೆ ಕೋಲಾಟದ ಕೋಲು ಹಿಡಿದು ಹೆಜ್ಜೆ ಹಾಕಿ ಸಂಭ್ರಮಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡು ದಿನದ ಮೈಸೂರು ಜಿಲ್ಲಾ ಪ್ರವಾಸದಲ್ಲಿದ್ದು, ಅವರು ಇಂದು ಹೆಚ್. ಡಿ ಕೋಟೆ ಪಟ್ಟಣದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಹಾಗೂ ವಿವಿಧ ರೀತಿಯ ಕಾಮಗಾರಿಗಳ ಶಂಕು ಸ್ಥಾಪನೆಯಲ್ಲಿ ಭಾಗವಹಿಸಿದರು. ನಂತರ ಕೆರೆ ಹಾಡಿಯ ಜನರ ನೃತ್ಯಕ್ಕೆ ಹೆಜ್ಜೆ ಹಾಕಿದ ಅವರು, ಆದಿವಾಸಿ ಬುಡಕಟ್ಟು ಜನಾಂಗದ ಜೊತೆ ಸಂವಾದ ನಡೆಸಿ, ಹಾಡಿ ಸಮಸ್ಯೆ ಆಲಿಸಿದರು.
ಸಿದ್ದರಾಮಯ್ಯ ಅವರು ತಮ್ಮ ಹುಟ್ಟೂರಾದ ಸಿದ್ದರಾಮನಹುಂಡಿಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಕುಣಿದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ಕೆಲಸದ ಒತ್ತಡದ ನಡುವೆ ನೃತ್ಯದಲ್ಲಿ ಭಾಗವಹಿಸಿ ಮನಸ್ಸನ್ನು ಹಗುರ ಮಾಡಿಕೊಂಡರು.
ಇದನ್ನೂ ಓದಿ : ಚಲನಚಿತ್ರ ಗೀತೆ ಹಾಡಿ ರಂಜಿಸಿದ ಗೃಹ ಸಚಿವ ಜಿ ಪರಮೇಶ್ವರ್; ತಮಟೆ ಸದ್ದಿಗೆ ಭರ್ಜರಿ ಟಪಾಂಗುಚಿ - ವಿಡಿಯೋ