Rice or Roti Which is Better for Diabetes: ಇತ್ತೀಚಿನ ದಿನಗಳಲ್ಲಿ ದೊಡ್ಡವರು ಹಾಗೂ ಚಿಕ್ಕವರು ಎನ್ನುವ ಭೇದವಿಲ್ಲದೆ ಬಹುತೇಕರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಶಿಸ್ತುಬದ್ಧವಾದ ಜೀವನಶೈಲಿ, ಸಾಕಷ್ಟು ಪೋಷಣೆ, ಸರಿಯಾದ ವ್ಯಾಯಾಮದಿಂದ ಶುಗರ್ನ್ನು ನಿಯಂತ್ರಣಕ್ಕೆ ತರಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಇದರಿಂದ ಅನೇಕರು ಅನ್ನದ ಬದಲು ಚಪಾತಿ ಸೇವಿಸುತ್ತಾರೆ. ಹೀಗೆ ಸೇವಿಸಿದರೆ ಶುಗರ್ ನಿಯಂತ್ರಣಕ್ಕೆ ಬರುತ್ತದೆ ಎಂಬ ನಂಬಿಕೆ ಹಲವು ಜನರದ್ದು. ಸಕ್ಕರೆ ಕಾಯಿಲೆ ಇರುವವರು ರೈಸ್ ಬದಲು ಚಪಾತಿ ತಿನ್ನುವುದು ನಿಜಕ್ಕೂ ಒಳ್ಳೆಯದೇ ಎಂಬುದರ ಬಗ್ಗೆ ಪ್ರಮುಖ ಪೌಷ್ಟಿಕತಜ್ಞೆ ಡಾ.ಜಾನಕಿ ಶ್ರೀನಾಥ್ ವಿವರವಾಗಿ ತಿಳಿಸಿದ್ದಾರೆ.
"ಮಧುಮೇಹಿಗಳು ತಮಗಾಗಿ ವಿಶೇಷ ಆಹಾರವನ್ನು ಅನುಸರಿಸಬೇಕಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಕಡಿಮೆಯಾದರೆ ಮತ್ತು ಸಾಮಾನ್ಯ ಮಟ್ಟಕ್ಕೆ ಏರಬೇಕು. ಹೆಚ್ಚಾದರೆ ಕಡಿಮೆ ಮಾಡಲು ಪ್ರಯತ್ನಿಸಬೇಕಾಗುತ್ತದೆ. ಅಲ್ಲದೇ ದಿನವಿಡೀ ನೀವು ಯಾವ ರೀತಿಯ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುತ್ತೀರಿ ಎಂಬುದು ಮುಖ್ಯವಾಗಿದೆ. ದೇಹಕ್ಕೆ ಎಷ್ಟು ಶಕ್ತಿ ಬೇಕು ಎನ್ನುವುದನ್ನು ಕ್ಯಾಲೋರಿಗಳ ಲೆಕ್ಕದಲ್ಲಿ ನಿರ್ಧರ ಮಾಡುವ ಮೂಲಕ ಆಹಾರದ ರೂಪದಲ್ಲಿ ತೆಗೆದುಕೊಳ್ಳಬೇಕು. ಮಧುಮೇಹಿಗಳು ಬಳಸುವ ಮಾತ್ರೆಗಳು ಹಾಗೂ ಇನ್ಸುಲಿನ್ ಡೋಸ್ ಎಲ್ಲರಿಗೂ ಒಂದೇ ಆಗಿರುವುದಿಲ್ಲ ಎಂಬುದನ್ನು ಗಮನದಲ್ಲಿರಬೇಕಾಗುತ್ತದೆ.''
-ಡಾ.ಜಾನಕಿ ಶ್ರೀನಾಥ್, ಪೌಷ್ಟಿಕತಜ್ಞೆ
ಮಧುಮೇಹಿಗಳು ಏನು ಸೇವಿಸಬೇಕು?: ಪೌಷ್ಟಿಕತಜ್ಞೆ ಡಾ.ಜಾನಕಿ ಶ್ರೀನಾಥ್ ಪ್ರತಿಕ್ರಿಯಿಸಿ, ರೈಸ್ ಅಥವಾ ಚಪಾತಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿ ಹೆಚ್ಚಿನ ವ್ಯತ್ಯಾಸ ಆಗುವುದಿಲ್ಲ. ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಕಡಿಮೆ ಮಾಡಲು ನಾವು ಅಗತ್ಯವಿರುವಷ್ಟು ಕ್ಯಾಲೊರಿಗಳನ್ನು ಸೇವಿಸುತ್ತಿದ್ದೇವೆಯೇ ಎಂದು ಖಚಿತಪಡಿಸಿಕೊಳ್ಳಬೇಕಾಗುತ್ತದೆ ಎಂದು ಅವರು ವಿವರಿಸುತ್ತಾರೆ.
ಮೊದಲಿನಿಂದಲೂ ನಿಮ್ಮ ಆಹಾರ ಪದ್ಧತಿಗಿಂತ ವಿಭಿನ್ನವಾಗಿರುವ ಯಾವುದನ್ನೂ ಸೇವಿಸುವಂತೆ ಒತ್ತಾಯಿಸುವ ಅಗತ್ಯವಿಲ್ಲ. ಎಷ್ಟು ಅನ್ನವನ್ನು ಸೇವಿಸಲಾಗುತ್ತದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಚಪಾತಿಗಳನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ. ನಿಯಮಿತವಾಗಿ ಸೇವನೆ ಮಾಡಿದರೆ ಉತ್ತಮ. ಅಕ್ಕಿಯಲ್ಲಿಯೂ ಅನೇಕ ಗ್ಲೈಸೆಮಿಕ್ ಪ್ರಕಾರಗಳಿವೆ. ಅವುಗಳನ್ನು ಆಯ್ಕೆ ಮಾಡಲು ಸಲಹೆ ಕೊಡಲಾಗುತ್ತದೆ. ನೀವು ಏನೇ ಸೇವಿಸಿದರೂ ಅನ್ನ ಮತ್ತು ಚಪಾತಿ ಇವುಗಳ ಜೊತೆಗೆ ಸೊಪ್ಪು, ತರಕಾರಿ ಸಲಾಡ್, ನಾರಿನ ಪದಾರ್ಥಗಳು ಮತ್ತು ಸಾಕಷ್ಟು ಪ್ರೊಟೀನ್ ಸೇವಿಸಬೇಕು ಎನ್ನುತ್ತಾರೆ ತಜ್ಞರು.
ಇವುಗಳನ್ನು ಸೇವಿಸುವುದರಿಂದ ಗ್ಲೂಕೋಸ್ ನಿಧಾನವಾಗಿ ಬಿಡುಗಡೆಯಾಗುತ್ತದೆ ಹಾಗೂ ಹಸಿವು ಕಡಿಮೆಯಾಗುತ್ತದೆ ಎಂದು ಅವರು ತಿಳಿಸುತ್ತಾರೆ. ಒಂದೆಡೆ, ದೇಹಕ್ಕೆ ಸಾಕಷ್ಟು ಪೋಷಣೆಯನ್ನು ತೆಗೆದುಕೊಳ್ಳುವಾಗ ದೈಹಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಇದರಿಂದಾಗಿ ದೇಹದ ದ್ರವ್ಯರಾಶಿ ಹೆಚ್ಚಾಗುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆಯ ಏರಿಳಿತ ತಡೆದುಕೊಳ್ಳುವ ಶಕ್ತಿ ಬರುತ್ತದೆ ಎಂದು ವೈದ್ಯರು ವಿವರಿಸುತ್ತಾರೆ.
ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.