ಮಾರುಕಟ್ಟೆ ರೌಂಡಪ್: ಮುಂಬೈ ಷೇರುಪೇಟೆ, ಪೆಟ್ರೋಲ್, ಚಿನ್ನದ ಬೆಲೆ ಏರಿಳಿತದ ಕ್ವಿಕ್ ಲುಕ್
🎬 Watch Now: Feature Video
ಜಾಗತಿಕ ಚಂಚಲತೆಯ ಸುಳಿಗೆ ಸಿಲುಕಿರುವ ದೇಶೀಯ ಷೇರು ಮಾರುಕಟ್ಟೆ ಈ ವಾರದ ಮೂರು ದಿನಗಳ ವಾಹಿವಾಟಿನಲ್ಲಿ ಮುಂಬೆ ಷೇರುಪೇಟೆ ಏರಿಳಿತದ ನಡುವೆ ವಾಲಾಡುತ್ತಿದೆ. ಸೋಮವಾರದಂದು ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 540 ಅಂಕ ಕುಸಿದರೆ ಮರುದಿನ (ಮಂಗಳವಾರ) 377 ಅಂಕ ಜಿಗಿತ ದಾಖಲಿಸಿತ್ತು. ಯುರೋಪಿಯನ್ ಮಾರುಕಟ್ಟೆಗಳಲ್ಲಿನ ಮಾರಾಟದ ಒತ್ತಡಕ್ಕೆ ಸಿಲುಕಿದ ಇಂಡೆಕ್ಸ್ ಮೇಜರ್ಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ನಲ್ಲಿ ಬುಧವಾರದಂದು ಭಾರಿ ನಷ್ಟ ಕಂಡುಬಂತು. ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 600 ಅಂಕಗಳಷ್ಟು ಕುಸಿತ ದಾಖಲಿಸಿತು. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 159.80 ಅಂಕ ಕುಸಿದು 11729.60 ಅಂಕಗಳಿಗೆ ತಲುಪಿತು.