ಮುಂಬೈ(ಮಹಾರಾಷ್ಟ್ರ): "ಯುವ ಕ್ರಿಕೆಟಿಗರು ತಮಗೆ ಎದುರಾಗುವ ಅಡೆತಡೆಗಳು, ಅಡ್ಡಿಗಳಿಂದ ವಿಚಲಿತರಾಗಿ ತಮ್ಮ ಗಮನವನ್ನು ಬೇರೆಡೆ ಹರಿಸಬಾರದು" ಎಂದು ಶನಿವಾರ ಮುಂಬೈನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ವಿಶ್ವ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಕಿವಿಮಾತು ಹೇಳಿದರು.
ಬಿಸಿಸಿಐನ ವಾರ್ಷಿಕ 'ನಮನ್ ಅವಾರ್ಡ್ಸ್' ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ಐಸಿಸಿ ಅಧ್ಯಕ್ಷ ಜಯ್ ಶಾ 'ಕರ್ನಲ್ ಸಿಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ' ನೀಡಿ ಗೌರವಿಸಿದರು.
💬💬 Don’t let distractions disrupt your career, value everything you have, take the game and country’s name forward.
— BCCI (@BCCI) February 1, 2025
𝗖𝗼𝗹. 𝗖.𝗞. 𝗡𝗮𝘆𝘂𝗱𝘂 𝗟𝗶𝗳𝗲𝘁𝗶𝗺𝗲 𝗔𝗰𝗵𝗶𝗲𝘃𝗲𝗺𝗲𝗻𝘁 𝗔𝘄𝗮𝗿𝗱 winner @sachin_rt's inspirational message to all the cricketers 🙌#NamanAwards pic.twitter.com/5Tyq71ikCk
ಈ ಸಂದರ್ಭದಲ್ಲಿ ಮಾತನಾಡಿದ ಸಚಿನ್, "ಯುವಜನತೆ ತಮ್ಮಲ್ಲಿರುವ ಪ್ರತಿಯೊಂದಕ್ಕೂ ಮೌಲ್ಯ ನೀಡಬೇಕು. ಆಟದಲ್ಲಿ ಅದಕ್ಕೆ ತಕ್ಕಂತೆ ವರ್ತಿಸಬೇಕು. ಆ ಮೂಲಕ ದೇಶದ ಹೆಸರನ್ನು ಬೆಳಗಿಸಬೇಕು" ಎಂದರು.
"ನೀವು ಕ್ರೀಡೆಯಲ್ಲಿ ಏಕಾಗ್ರತೆ ವಹಿಸಿ ಎಂದು ನಾನು ನಿಮಗೆ ಸಲಹೆ ನೀಡಲಾರೆ. ಆದರೆ ಅಡ್ಡಿಗಳು, ಅಡೆತಡೆಗಳು ಬರುತ್ತವೆ. ಇಂಥ ಅಡೆತಡೆಗಳು ನಿಮ್ಮ ವೃತ್ತಿಜೀವನವನ್ನೇ ಭಂಗಗೊಳಿಸಲು ಬಿಡಬೇಡಿ. ಪಂದ್ಯದ ಮೇಲಷ್ಟೇ ಗಮನವಿರಲಿ. ಹೀಗಾಗಿ ನಿಮ್ಮಲ್ಲಿರುವ ಪ್ರತಿಯೊಂದಕ್ಕೂ ಮೌಲ್ಯ ಕೊಡಿ. ನಮ್ಮ ಬಳಿ ಏನೂ ಇಲ್ಲದೇ ಇದ್ದಾಗಲೂ ನಾವು ಅಂಥ ಸಂದರ್ಭಗಳನ್ನು ನಿಭಾಯಿಸಿದ್ದೇವೆ ಎಂಬುದನ್ನು ನೆನಪಿಡಿ. ನಮ್ಮಲ್ಲಿ ಎಲ್ಲವೂ ಇರುವಾಗ ಅದರ ಮೌಲ್ಯವನ್ನರಿತು ಅದಕ್ಕೆ ತಕ್ಕಂತೆ ವರ್ತಿಸುವುದು ಆ ಮೂಲಕ ಪಂದ್ಯವನ್ನು ಮುಂದಕ್ಕೆ ತೆಗೆದುಕೊಂಡು ಹೋಗಿ ದೇಶದ ಹೆಸರನ್ನು ಬೆಳಗಿಸಬೇಕು. ನಿಮ್ಮಲ್ಲಿ ಸಾಕಷ್ಟು ಕ್ರಿಕೆಟ್ ಪ್ರತಿಭೆ ಇದೆ. ಹೋಗಿ, ನಿಮ್ಮ ಅತ್ಯುತ್ತಮವನ್ನು ಪ್ರದರ್ಶಿಸಿ. ಅವಕಾಶವನ್ನು ಹೆಚ್ಚೆಚ್ಚು ಸದುಪಯೋಗಪಡಿಸಿಕೊಳ್ಳಿ" ಎಂದು ಸಚಿನ್ ಯುವ ಕ್ರಿಕೆಟಿಗರಿಗೆ ಸಲಹೆ ನೀಡಿದರು.
ಟೆಸ್ಟ್, ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ದಾಖಲೆ ಸಚಿನ್ ಹೆಸರಿನಲ್ಲಿದೆ. ಅದೇ ರೀತಿ, ಎರಡೂ ಮಾದರಿಯಲ್ಲಿ 100 ಶತಕ ಸಿಡಿಸಿದ ವಿಶ್ವದ ಏಕೈಕ ಆಟಗರನೂ ಸಚಿನ್ ಎಂಬುದು ಇಂದಿಗೂ ಅಳಿಸಲಾಗದ ದಾಖಲೆ.
Say Cheese, say the #NamanAward Winners 📸😁 pic.twitter.com/QZYVrm4w1w
— BCCI (@BCCI) February 1, 2025
ಕ್ರಿಕೆಟ್ ದೇವರೆಂದೇ ಸಚಿನ್ ಪ್ರಸಿದ್ಧಿ ಪಡೆದವರು. ಕ್ರಿಕೆಟ್‌ನಲ್ಲಿ ಅವರ ಅದ್ಭುತ ಕೌಶಲ, ಆ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ಮನರಂಜನೆ ನೀಡಿದ ಇವರು, 1989ರಿಂದ 2013ರವರೆಗೂ ಕ್ರಿಕೆಟ್ ಮೈದಾನದಲ್ಲಿ ವಿಜ್ರಂಭಿಸಿದರು. ಮೂಲತ: ಮಹಾರಾಷ್ಟ್ರದವರಾದ ಸಚಿನ್, ನವೆಂಬರ್ 15, 1989ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅದೇ ವರ್ಷದ ಡಿ.18ರಂದು ಏಕದಿನ ಕ್ರಿಕೆಟ್ ಆರಂಭಿಸಿದ್ದರು.
664 ಬಾರಿ ಅಂತಾರಾಷ್ಟ್ರಿಯ ಪಂದ್ಯಗಳಲ್ಲಿ ಕಣಕ್ಕಿಳಿದ ಸಚಿನ್ ಒಟ್ಟು 34,357 ಗಳಿಸಿ ರನ್ ಶಿಖರವನ್ನೇ ಕಟ್ಟಿದ್ದಾರೆ. ಸಚಿನ್ ಬ್ಯಾಟಿಂಗ್ ಸರಾಸರಿ 48.52. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಇವರ ಹೆಸರಲ್ಲಿದೆ. 100 ಶತಕ, 164 ಅರ್ಧ ಶತಕಗಳು ತಮ್ಮ ಹೆಸರಲ್ಲಿವೆ. ಇದು ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಇಂದಿಗೂ ಅದ್ಭುತ ದಾಖಲೆಯಾಗುಳಿದಿದೆ. ಏಕದಿನ ಕ್ರಿಕೆಟ್‌ನಲ್ಲಿ ಮೊದಲು ದ್ವಿಶತಕ ಬಾರಿಸಿದ ಕೀರ್ತಿಯೂ ಸಚಿನ್ ಅವರದ್ದು. ಇದಲ್ಲದೇ 200 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ 44.83ರ ಸರಾಸರಿಯಲ್ಲಿ ಸಚಿನ್ 18,426 ರನ್ ಸಂಪಾದಿಸಿದ್ದಾರೆ. ಇದರಲ್ಲಿ 49 ಶತಕಗಳು ಮತ್ತು 96 ಅರ್ಧಶತಕಗಳಿವೆ. ಟೆಸ್ಟ್‌ನಲ್ಲಿ 53.78ರ ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ಇದರಲ್ಲಿ 51 ಶತಕ ಮತ್ತು 68 ಅರ್ಧಶತಕಗಳಿವೆ. ಸಚಿನ್ 2011ರ ವಿಶ್ವಕಪ್ ವಿಜೇತ ಭಾರತ ತಂಡದ ಭಾಗವಾಗಿದ್ದರು.
ಇದನ್ನೂ ಓದಿ: 5ನೇ ಟಿ20: ಆಂಗ್ಲರ ವಿರುದ್ದ 13 ವರ್ಷದ ಹಳೆ ಸೇಡು ತೀರಿಸಿಕೊಳ್ಳಲು ಭಾರತ ಮಾಸ್ಟರ್ ಪ್ಲಾನ್!
ಇದನ್ನೂ ಓದಿ: ಸಚಿನ್ ತೆಂಡೂಲ್ಕರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ ಗರಿ: ದಿಗ್ಗಜರ ಪಟ್ಟಿಗೆ ಲಿಟಲ್ ಮಾಸ್ಟರ್ ಎಂಟ್ರಿ!