ಚಿನ್ನದಂಗಡಿ ತೆರೆದಾಗ ಮಾಲೀಕರಿಗೆ ಶಾಕ್; ಮೊಟ್ಟೆಯಿಟ್ಟು ಅಂಗಡಿಯನ್ನೇ ಮನೆ ಮಾಡಿಕೊಂಡಿತ್ತು ಹೆಬ್ಬಾವು! - ಬೃಹತ್ ಗಾತ್ರದ ಹೆಬ್ಬಾವು
🎬 Watch Now: Feature Video
ದೇಶದಲ್ಲಿ ಹೇರಲಾಗಿರುವ ಲಾಕ್ಡೌನ್ ತಿಂಗಳ ಬಳಿಕ ಷರತ್ತುಗಳೊಂದಿಗೆ ಸಡಿಲಿಕೆಯಾಗಿದೆ. ಹೀಗಾಗಿ ಕೆಲವೆಡೆ ವ್ಯಾಪಾರ ವಾಣಿಜ್ಯ ಚಟುವಟಿಕೆಗಳು ಆರಂಭವಾಗಿವೆ. ಕೇರಳದ ಕನ್ನೂರಿನಲ್ಲಿ ಜುವೆಲ್ಲರಿ ಶಾಪ್ ಓಪನ್ ಮಾಡಿದಾಗ ಮಾಲೀಕರಿಗೆ ಆಘಾತ ಕಾದಿತ್ತು. ಯಾಕಂದ್ರೆ, ಅಂಗಡಿಯೊಳಗೆ ಬೃಹತ್ ಗಾತ್ರದ ಹೆಬ್ಬಾವು ವಾಸಿಸುತ್ತಿತ್ತು. ಹೆಬ್ಬಾವಿನ ಕೆಲವೊಂದು ಮೊಟ್ಟೆಗಳೂ ಅಲ್ಲಿ ಸಿಕ್ಕಿವೆ. ಒಂದು ತಿಂಗಳ ಕಾಲ ಅಂಗಡಿ ತೆರೆದಿರದ ಕಾರಣ ಚಿನ್ನದಂಗಡಿಯನ್ನೇ ಹೆಬ್ಬಾವು ತನ್ನ ಮನೆ ಮಾಡಿಕೊಂಡಿತ್ತು.