ಕಾನ್ಸ್ ರೆಡ್ ಕಾರ್ಪೆಟ್ ಮೇಲೆ ಮಿಂಚು ಹರಿಸಿದ ದೀಪಿಕಾ! ಕೋಟ್ಯಂತರ ಅಭಿಮಾನಿಗಳಲ್ಲಿ ಪುಳಕ! - ಪ್ಯಾರಿಸ್
🎬 Watch Now: Feature Video

ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್‌ನ ಖ್ಯಾತ ಚಿತ್ರತಾರೆ ದೀಪಿಕಾ ಪಡುಕೋಣೆ ಮಿಂಚಿದ್ದಾರೆ.ನಿಂಬೆ ಹಸಿರು ಬಣ್ಣದ ಗೌನ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ದೀಪಿಕಾ ಹೆಜ್ಜೆ ಹಾಕುತ್ತಿದ್ದಂತೆ ನೂರಾರು ಕ್ಯಾಮೆರಾ ಕಣ್ಣುಗಳು ದೀಪಿಕಾ ಕಡೆ ಫ್ಲಾಶ್ ಮಾಡಿದ್ವು.ಇದು ದೀಪಿಕಾರ ಅತ್ಯಂತ ಬೋಲ್ಡೆಸ್ಟ್ ರೆಡ್ ಕಾರ್ಪೆಟ್ ಲುಕ್ ಅಂತನೇ ಹೇಳಲಾಗುತ್ತಿದೆ.
ವಿಶ್ವಪ್ರಸಿದ್ಧ 72 ನೇ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಲಾರೆಲ್ ಬ್ರಾಂಡ್‌ನ್ನು ಪ್ರತಿನಿಧಿಸುತ್ತಿರುವ 33ರ ಹರೆಯದ ದೀಪಿಕಾ,ಅತ್ಯಂತ ಆಕರ್ಷಕವಾಗಿ ಕಾಣಿಸಿಕೊಂಡರು.ಈ ಬಗೆಗಿನ ವೀಡಿಯೋ ಹಾಗು ಫೋಟೋಗಳನ್ನು ಪಡುಕೋಣೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಹೊಸ ಲುಕ್‌ನಲ್ಲಿ ಮಿಂಚಿದ ಬಾಲಿವುಡ್ ದಿವಾ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದರು.