ಚಿಕನ್ ಶಾಪ್ನಲ್ಲಿ ಬಳಸುವ ಚಾಕುವಿನಿಂದ ಮುಂಗೈ ಕತ್ತರಿಸಿಕೊಂಡ ಮಾಜಿ ಸೈನಿಕ - ಕೈ ಕತ್ತರಿಸಿಕೊಂಡ ಮಾಜಿ ಸೈನಿಕ
🎬 Watch Now: Feature Video

ಕಂಬಮ್(ತಮಿಳುನಾಡು): ಮನೆಯಲ್ಲಿ ನಡೆಯುತ್ತಿದ್ದ ನಿತ್ಯ ಜಗಳದಿಂದ ಬೇಸತ್ತ ಮಾಜಿ ಸೈನಿಕ ಕೈ ಕತ್ತರಿಸಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದ ವೆಂಕಟೇಶ್ ಮನೆ ಜಗಳದಿಂದ ತೀವ್ರವಾಗಿ ಮಾನಸಿಕ ಒತ್ತಡಕ್ಕೊಳಗಾಗಿದ್ದರಂತೆ. ಇದರಿಂದ ಹತಾಶರಾಗಿರುವ ಅವರು ತನ್ನ ಕೈ ಕತ್ತರಿಸಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗಾಯಾಳುವಿಗೆ ಥೇನಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.