'ಚಕ್ಕಾ ಜಾಮ್': ದೆಹಲಿ ಗಡಿ ಸೇರಿದಂತೆ ವಿವಿಧ ಭಾಗಗಳಲ್ಲಿ ಅರೆಸೈನಿಕ ಪಡೆಯಿಂದ ಹೈ ಅಲರ್ಟ್ - ನೂತನ ಕೃಷಿ ಕಾಯ್ದೆ ಖಂಡಿಸಿ ಚಕ್ಕಾ ಜಾಮ್
🎬 Watch Now: Feature Video
ನವದೆಹಲಿ/ಯುಪಿ: ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನಾಕಾರರು ಗಾಜಿಪುರ (ದೆಹಲಿ-ಯುಪಿ) ಗಡಿಯಲ್ಲಿ ತಮ್ಮ ಆಂದೋಲನವನ್ನು ಮುಂದುವರಿಸಿದ್ದಾರೆ. ಇಂದು ರೈತರು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡುವ ಮೂಲಕ ‘ಚಕ್ಕಾ ಜಾಮ್’ ನಡೆಸಲಿರುವ ಹಿನ್ನೆಲೆ ದೆಹಲಿ-ಎನ್‌ಸಿಆರ್‌ನ ವಿವಿಧ ಭಾಗಗಳಲ್ಲಿ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ. ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ದೆಹಲಿ ಪೊಲೀಸ್, ಅರೆಸೈನಿಕ ಮತ್ತು ಮೀಸಲು ಪಡೆಗಳ ಸುಮಾರು 50,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರ ರಾಜಧಾನಿಯಲ್ಲಿ ಸುಮಾರು 12 ಮೆಟ್ರೋ ನಿಲ್ದಾಣಗಳಲ್ಲಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಪೂರ್ವಭಾವಿ ಕ್ರಮವಾಗಿ, ಜಲ ಫಿರಂಗಿ ವಾಹನಗಳೊಂದಿಗೆ ಗಾಜಿಪುರ ಗಡಿಯಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಮಿಂಟೋ ಸೇತುವೆ ಪ್ರದೇಶದಲ್ಲಿ ಬ್ಯಾರಿಕೇಡಿಂಗ್ ಕ್ರಮಗಳ ಜೊತೆಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.