ಬೈಕ್ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಹೋಗುವಾಗ ಸ್ಫೋಟ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಎಸಿಗೆ ಬಳಕೆ ಮಾಡುವ ಸಿಲಿಂಡರ್
🎬 Watch Now: Feature Video
ಹೈದರಾಬಾದ್: ಎಸಿಗಳಲ್ಲಿ ಬಳಕೆ ಮಾಡುವ ಗ್ಯಾಸ್ ಸಿಲಿಂಡರನ್ನು ಬೈಕ್ ಮೇಲಿಟ್ಟುಕೊಂಡು ಹೋಗುತ್ತಿದ್ದ ವೇಳೆ ಅದು ಏಕಾಏಕಿ ಸ್ಫೋಟಗೊಂಡಿದೆ. ಪರಿಣಾಮ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದಾನೆ. ಹೈದರಾಬಾದ್ನ ಬೋನಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಪಘಾತದ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕರೀಂನಗರದ ಸಲೀಂ ಪಾಷಾ ಹಾಗೂ ಮೊಹಮ್ಮದ್ ಸಮೀರ್ ಎಸಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು. ಎಸಿ ಸರ್ವೀಸ್ಗಾಗಿ ಬೈಕ್ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸ್ಥಳದಲ್ಲೇ ಸಲೀಂ ಪಾಷಾ ಸಾವನ್ನಪ್ಪಿದ್ದು, ಮೊಹಮ್ಮದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.