ಏಪ್ರಿಲ್ 11ರಿಂದ 14ರವರೆಗೆ ದೇಶದಲ್ಲಿ 'ಲಸಿಕೆ ಉತ್ಸವ': ಕರೆ ನೀಡಿದ ನಮೋ! - ಏಪ್ರಿಲ್ 11ರಿಂದ 14ರವರೆಗೆ ದೇಶದಲ್ಲಿ 'ಲಸಿಕೆ ಉತ್ಸವ'
🎬 Watch Now: Feature Video
ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಎಲ್ಲ ರಾಜ್ಯದ ಸಿಎಂಗಳೊಂದಿಗೆ ನಮೋ ಮಹತ್ವದ ಸಭೆ ನಡೆಸಿದರು. ಇದಾದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಏಪ್ರಿಲ್ 11ರಿಂದ 14ರವರೆಗೆ ದೇಶದಲ್ಲಿ ಲಸಿಕೆ ಉತ್ಸವ ಆಚರಣೆಗೆ ಕರೆ ನೀಡಿದ್ದಾರೆ. ಕೋವಿಡ್-19 ಲಸಿಕೆ ಅಭಿಯಾನದ ಭಾಗವಾಗಿ ಈ ಉತ್ಸವ ನಡೆಸಲಾಗುವುದು ಎಂದರು. ಜತೆಗೆ ಜ್ಯೋತಿಬಾ ಫುಲೆ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ದಿನವಾದ ಏಪ್ರಿಲ್ 11 ಹಾಗೂ ಏಪ್ರಿಲ್ 14ರ ನಡುವೆ ಈ ಉತ್ಸವ ನಡೆಸಲಾಗುವುದು ಎಂದರು. ಈ ವೇಳೆ, ದೇಶದಲ್ಲಿ ಹೆಚ್ಚಿನ ಜನರನ್ನು ಲಸಿಕಾ ಅಭಿಯಾನಕ್ಕೆ ಒಳಗಾಗುವಂತೆ ಮಾಡೋಣ ಎಂದು ನಮೋ ತಿಳಿಸಿದರು.