12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ, ಕಡೆಗೂ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು: ವಿಡಿಯೋ - ಎರ್ನಾಕುಲಂನಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
🎬 Watch Now: Feature Video
ಎರ್ನಾಕುಲಂ(ಕೇರಳ): ಜಿಲ್ಲೆಯ ಭೂತಥಂಕೆಟ್ ಬಳಿಯ ಕೋಥಮಂಗಲಂನಲ್ಲಿ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಲಾಗಿದೆ. ಜನನಿಬಿಡ ಪ್ರದೇಶದಲ್ಲಿದ್ದ ಈ ದೊಡ್ಡಗಾತ್ರದ ಹಾವನ್ನು ಸ್ನೇಕ್ ಮಾಸ್ಟರ್ ಮಾರ್ಟಿನ್ ಮೇಕಮಾಲಿ ಹಿಡಿದಿದ್ದಾರೆ. ಇದು ಮಾರ್ಟಿನ್ ರಕ್ಷಿಸಿರುವ 120ನೇ ಕಾಳಿಂಗ ಸರ್ಪ. ಸುಮಾರು 7 ಗಂಟೆಗಳ ಕಾಲ ಹುಡುಕಾಟ ನಡೆಸಿ ನೀರು ಹರಿಯುತ್ತಿದ್ದ ಝರಿಯ ಪಕ್ಕದ ಕಲ್ಲು ಮಣ್ಣಿನ ರಾಶಿಯೊಳಗೆ ಅವಿತಿದ್ದ ಹಾವನ್ನು ಹೊರತೆಗೆಯಲಾಗಿದೆ. ಬಳಿಕ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಹಾವನ್ನು ಕರಿಂಬನಿ ಅರಣ್ಯದಲ್ಲಿ ಬಿಟ್ಟಿದ್ದಾರೆ.