ಕಾರವಾರ: ಅದ್ದೂರಿಯಾಗಿ ನಡೆದ ಗುಡ್ಡದ ತುದಿಯ ಶಿರ್ವೆ ಜಾತ್ರೆ.. Watch
🎬 Watch Now: Feature Video
ಕಾರವಾರ: ತಾಲೂಕಿನ ದೇವಳಮಕ್ಕಿ ವ್ಯಾಪ್ತಿಯ ಸಾವಿರಾರು ಅಡಿ ಎತ್ತರದ ಶಿರ್ವೆ ಗುಡ್ಡದ ತುದಿಯ ಶ್ರೀ ಸಿದ್ದರಾಮೇಶ್ವರ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಶಿರ್ವೆ ಗುಡ್ಡದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಭಕ್ತರು, ಕುರಾವಿಗಳು, ಪಲ್ಲಕ್ಕಿಯನ್ನು ಗುಡ್ಡದ ಮೇಲೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿದರು. ಬಳಿಕ ಬೆಳಗಿನ ಜಾವ 3.30ರ ಸುಮಾರಿಗೆ ಶಿರ್ವೆ ಗುಡ್ಡದ ಶಿಖರದಲ್ಲಿರುವ ನಂದಿಗೆ ದೀಪ ಬೆಳಗಿಸಿ ಪೂಜೆ ಸಲ್ಲಿಸಲಾಯಿತು.
ಭಕ್ತರಿಗೆ ಶಿರ್ವೆ ಗುಡ್ಡ ದೈವಿಕಸ್ಥಳವಾಗಿದ್ದರೂ ಪ್ರವಾಸಿಗರ ನೆಚ್ಚಿನ ಚಾರಣದ ಸ್ಥಳವೂ ಆಗಿದೆ. ದಟ್ಟ ಕಾನನದ ನಡುವೆ ಗುಡ್ಡ ಏರಿ ಶಿಖರ ತುತ್ತ ತುದಿಯಲ್ಲಿ ಬಂಡೆಗಲ್ಲುಗಳನ್ನು ಏರುವುದು ಭಕ್ತರು ಹಾಗೂ ಪ್ರವಾಸಿಗರಿಗೆ ಒಂದು ರೀತಿಯ ಖುಷಿ ನೀಡುತ್ತದೆ. ಇದೇ ಕಾರಣಕ್ಕೆ ಪೌರಾಣಿಕ ಇತಿಹಾಸ ಹೊಂದಿರುವ ಶಿರ್ವೆ ಗುಡ್ಡ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ. ರಾತ್ರಿ ದೇವರ ಮಹಾಪೂಜೆ ಬಳಿಕ ಕೋವೆ ಗ್ರಾಮಸ್ಥರಿಂದ ಮಧುರ ಮಹೇಂದ್ರ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು.
ಇದನ್ನೂ ಓದಿ : ಪಿಯುಸಿಯಲ್ಲಿ 99ರಷ್ಟು ಅಂಕ ಗಳಿಸಿದ್ದ ಮುಮುಕ್ಷಾ ಜೈನ ಸನ್ಯಾಸ ದೀಕ್ಷೆ.. ಅದ್ಧೂರಿ ಶೋಭಾಯಾತ್ರೆ