ಹೈದರಾಬಾದ್: ಮುಂದಿನ ವರ್ಷ ಮಲೇಷ್ಯಾದಲ್ಲಿ ನಡೆಯಲಿರುವ ಮಹಿಳೆಯರ ಅಂಡರ್-19 ಟಿ20 ವಿಶ್ವಕಪ್‌ಗಾಗಿ ಇಂದು ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ.
ಇತ್ತೀಚೆಗೆ ನಡೆದಿದ್ದ ಅಂಡರ್ 19 ಮಹಿಳಾ ಏಷ್ಯಾಕಪ್ನಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ನಿಕ್ಕಿ ಪ್ರಸಾದ್ ಅವರಿಗೆ ಟಿ20 ವಿಶ್ವಕಪ್ ತಂಡಕ್ಕೂ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಉಳಿದಂತೆ ಏಷ್ಯಾಕಪ್ ವಿಜೇತ ತಂಡದ ವೈಷ್ಣವಿ ಎಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದ್ದು, ನಂದನಾ ಎಸ್, ಇರಾ ಜೆ ಮತ್ತು ಅನಾದಿ ಟಿ ಅವರನ್ನು ಸ್ಟ್ಯಾಂಡ್‌ಬೈ ಆಟಗಾರರಾಗಿ ಇರಿಸಲಾಗಿದೆ. ಕಮಲಿನಿ ಮತ್ತು ಭಾವಿಕಾ ಅಹಿರ್ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
🚨 News 🚨
— BCCI Women (@BCCIWomen) December 24, 2024
India’s squad for ICC Under-19 Women’s T20 World Cup 2025 announced#TeamIndia | Details 🔽
ಪಂದ್ಯಾವಳಿ ಸ್ವರೂಪ: ಈ ಮಹಾ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗಿಯಾಗುತ್ತಿದ್ದು, ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಆತಿಥೇಯ ಮಲೇಷ್ಯಾ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಭಾರತದ ಗುಂಪು ಪಂದ್ಯಗಳು ಕೌಲಾಲಂಪುರದ ಬಯಾಮಾಸ್ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಜನವರಿ 19 ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ. ನಂತರ ಮಲೇಷ್ಯಾ (ಜನವರಿ 21) ಮತ್ತು ಶ್ರೀಲಂಕಾ (ಜನವರಿ 23) ವಿರುದ್ಧದ ಸೆಣಸಲಿದೆ.
ಗುಂಪು ಹಂತದ ಪಂದ್ಯಗಳ ನಂತರ, ಪ್ರತಿ ಗುಂಪಿನಿಂದ 3 ತಂಡಗಳು ಸೂಪರ್-6 ಗೆ ಅರ್ಹತೆ ಪಡೆಯುತ್ತವೆ. ಸೂಪರ್ ಸಿಕ್ಸ್‌ನಲ್ಲಿ 12 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಗ್ರೂಪ್ 1, ಎ ಮತ್ತು ಡಿ ಗುಂಪಿನ ಅಗ್ರ 3 ತಂಡಗಳನ್ನು ಹೊಂದಿರುತ್ತದೆ. ಗ್ರೂಪ್ 2, B ಮತ್ತು C ಗುಂಪಿನ ಅಗ್ರ 3 ತಂಡಗಳನ್ನು ಒಳಗೊಂಡಿರುತ್ತದೆ.
ಸೂಪರ್ ಸಿಕ್ಸ್‌ನಲ್ಲಿ, ತಂಡಗಳು ತಮ್ಮ ಹಿಂದಿನ ಅಂಕಗಳು, ಗೆಲುವು ಮತ್ತು ನಿವ್ವಳ ರನ್-ರೇಟ್‌ನೊಂದಿಗೆ ಮುಂದುವರಿಯುತ್ತವೆ. ಪ್ರತಿ ತಂಡವು ಸೂಪರ್ ಸಿಕ್ಸ್‌ನಲ್ಲಿ 2 ಪಂದ್ಯಗಳನ್ನು ಆಡಲಿದೆ. ಸೂಪರ್ ಸಿಕ್ಸ್‌ನ ಎರಡು ಗುಂಪುಗಳಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಇದು ಜನವರಿ 31, 2025 ರಂದು ನಡೆಯಲಿದೆ. ಪಂದ್ಯಾವಳಿಯ ಫೈನಲ್ ಪಂದ್ಯವು ಫೆಬ್ರವರಿ 2, 2025 ರಂದು ಜರುಗಲಿದೆ.
ಭಾರತ ತಂಡ: ನಿಕ್ಕಿ ಪ್ರಸಾದ್ (ನಾಯಕಿ), ಸಾನಿಕಾ ಚಲ್ಕೆ (ಉಪನಾಯಕಿ), ಜಿ ತ್ರಿಶಾ, ಕಮಲಿನಿ ಜಿ (ವಿಕೆಟ್‌ಕೀಪರ್), ಭಾವಿಕಾ ಅಹಿರ್ (ವಿಕೆಟ್ ಕೀಪರ್), ಈಶ್ವರಿ ಅವಸರೆ, ಮಿಥಿಲಾ ವಿನೋದ್, ಜೋಶಿತಾ ವಿ. ಜೆ, ಸೋನಮ್ ಯಾದವ್, ಪರಿಣೀತಾ ಸಿಸೋಡಿಯಾ, ಕೇಸರಿ ದೃಷ್ಟಿ, ಆಯುಷಿ ಶುಕ್ಲಾ, ಆನಂದಿತಾ ಕಿಶೋರ್, ಎಂಡಿ ಶಬ್ನಮ್, ವೈಷ್ಣವಿ ಎಸ್.
ಇದನ್ನೂ ಓದಿ: ಬ್ಯಾಟಿಂಗ್ನಲ್ಲಿ 80 ರನ್, ಬೌಲಿಂಗ್ನಲ್ಲಿ 2 ವಿಕೆಟ್: RCB ಆಟಗಾರನ ಆಲ್ರೌಂಡರ್ ಪ್ರದರ್ಶನಕ್ಕೆ ಫ್ಯಾನ್ಸ್ ಫಿದಾ